ಟಿ.ರಘುಮೂರ್ತಿಯವರ ಹುಟ್ಟು ಹಬ್ಬ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 10  ಚಳ್ಳಕೆರೆ ಕ್ಷೇತ್ರದ ವಿಧಾನಸಭೆಯ ಸದಸ್ಯರು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಟಿ.ರಘುಮೂರ್ತಿಯವರ ಹುಟ್ಟು ಹಬ್ಬವನ್ನು ಇಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಸ್.ಟಿ.ಘಟಕದ ಮುಂಚೂಣಿಯಲ್ಲಿ ವಿವಿಧ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಚರಣೆ ಮಾಡಲಾಯಿತು. 
ರಘುಮೂರ್ತಿಯವರು ಕಾಂಗ್ರೆಸ್ ಕಚೇರಿ ಬಳಿ ಬರುತ್ತಿದ್ದಯೇ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಅವರಿಗೆ ಹೂ ಮಾಲೆ, ಶಾಲು, ಬೊಕ್ಕೆ ನೀಡಿ, ಪೇಟವನ್ನು ಹಾಕುವುದರ ಮೂಲಕ ಶುಭಾಷಯವನ್ನು ಕೋರಿದರು. ಇದೆ ಸಂದರ್ಭದಲ್ಲಿ ಪಟಾಕಿಯನ್ನು ಹಚ್ಚುವುದರ ಮೂಲಕ ಸಂತಸವನ್ನು ಹಂಚಲಾಯಿತು. ಅವರು ಅಗಮಿಸಿದಾಗ ಅವರ ಮೇಲೆ ಹೊ ಮಳೆಯನ್ನು ಸುರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ, ನಿಮ್ಮ ಪ್ರೀತಿಯನ್ನು ನನಗೆ ಧಾರೆ ಎರೆದಿದ್ದೀರಾ, ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದೇನೆ, ಪಕ್ಷದ ಒಬ್ಬ ಕಾರ್ಯಕರ್ತನಾಗಿ, ನಿಮ್ಮ ಜೊತೆಯಲ್ಲಿ ಇರುತೇನೆ, ಪಕ್ಷ ಇದ್ದರೆ ಅಧಿಕಾರ, ಪಕ್ಷಕ್ಕಾಗಿ ಜನ ಪ್ರತಿನಿಧಿಗಳಾಗಿ ಜನ ಸಾಮಾನ್ಯರಿಗಾಗಿ ದುಡಿಯೋಣ, ನನಗೆ ಪಕ್ಷ ಎಲ್ಲವನ್ನು ನೀಡಿದೆ ಅದಕ್ಕೆ ನಾನು ಮುಖಂಡರಿಗೆ ಅಬಾರಿಯಾಗಿದ್ದೇನೆ, ನಾನು ಇಲ್ಲಿಗೆ ತಡವಾಗಿ ಬಂದರೂ ಸಹಾ ನೀವುಗಳೆಲ್ಲಾ ಕಾದಿದ್ದು ನನಗೆ ಶುಭವನ್ನು ಕೋರಿದ್ದೀರಾ, ಇದಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಬದಲ್ಲಿ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್, ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್, ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ, ತಾಲ್ಲೂಕು ಅಧ್ಯಕ್ಷರಾದ ಪ್ರಕಾಶ್, ಎಸ್.ಟಿ.ಘಟಕದ ಅಧ್ಯಕ್ಷರಾಧ ಮಂಜುನಾಥ್, ಎಸ್.ಸಿ.ಘಟಕದ ಅಧ್ಯಕ್ಷರಾದ ಜಯ್ಯಣ್ಣ, ಓಬಿಸಿ ಘಟಕದ ಅಧ್ಯಕ್ಷರಾದ ಎನ್.ಡಿ.ಕುಮಾರ್, ಶಿಕ್ಷಕರ ಘಟಕದ ಅಧ್ಯಕ್ಷರಾದ ಮುದಾಸಿರ್, ಖುದ್ದುಸ್, ಪ್ರಕಾಶ್ ರಾಮ್ ನಾಯ್ಕ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿಗೌಡ, ಕುಮಾರಗೌಡ, ಲಕ್ಷ್ಮೀಕಾಂತ್. ತಿಪ್ಪೇಸ್ವಾಮಿ, ರವಿಕುಮಾರ್, ನಿಶಾನಿ, ವೆಂಕಟೇಶ್, ಜಿ.ಪಂ.ಮಾಜಿ ಸದಸ್ಯರಾದ ಬಾಬುರೆಡ್ಡಿ, ಜಿ.ಪಂ.ಮಾಜಿ ಅಧ್ಯಕ್ಷರಾದ ರವಿಕುಮಾರ್, ಮಧುಗೌಡ, ನಜ್ಮಾತಾಜ್ ಮುನಿಧರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *