T20 Rankings: ಶೂನ್ಯ ಸರದಾರ ಸೂರ್ಯಕುಮಾರ್ ಯಾದವ್ ಕೈತಪ್ಪಿತಾ ನಂ.1 ಪಟ್ಟ?

ಎರಡು ತಿಂಗಳ ಹಿಂದೆಯಷ್ಟೇ ವಿಶ್ವ ಕ್ರಿಕೆಟ್​ನ ಸೂಪರ್​ ಸ್ಟಾರ್ ಆಗಿ ಮೆರೆಯುತ್ತಿದ್ದ ಸೂರ್ಯಕುಮಾರ್ ಯಾದವ್ ಸದ್ಯ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ ನೆಲದಲ್ಲಿ ರನ್ ಮಳೆ ಸುರಿಸಿದ್ದ  ಸೂರ್ಯಕುಮಾರ್ ಯಾದವ್​ಗೆ ಇದೀಗ ಬಿಗ್ ಇನ್ನಿಂಗ್ಸ್ ಆಡುವುದಿರಲಿ ಖಾತೆ ಕೂಡ ತೆರೆಯಲಾಗುತ್ತಿಲ್ಲ. ಆದರೂ ಟಿ20 ಕ್ರಿಕೆಟ್​ನಲ್ಲಿ ಸೂರ್ಯಕುಮಾರ್​ ತಮ್ಮ ಪಾರುಪತ್ಯವನ್ನು ಮುಂದುವರೆಸಿದ್ದಾರೆ.ಬುಧವಾರ ಬಿಡುಗಡೆಯಾದ ಐಸಿಸಿ ನೂತನ ಟಿ20 ರ್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ತಮ್ಮ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸೂರ್ಯಕುಮಾರ್ ಯಾದವ್ ಯಾವುದೇ ಅಂತರರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ, ಆದರೆ ಇದರ ಹೊರತಾಗಿಯೂ, ಯಾವುದೇ ಬ್ಯಾಟ್ಸ್‌ಮನ್​ಗೂ ಅವರ ನಂಬರ್ ಒನ್ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವಾಗಿಲ್ಲ.ಕಳೆದ ವರ್ಷ ನವೆಂಬರ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದ ಸೂರ್ಯಕುಮಾರ್, ಟಿ20 ಕ್ರಿಕೆಟ್​ ಶ್ರೇಯಾಂಕದಲ್ಲಿ 906 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.ಸದ್ಯ ಐಪಿಎಲ್​ನಲ್ಲಿ ಬ್ಯುಸಿಯಾಗಿರುವ ಸೂರ್ಯಕುಮಾರ್ ಇಲ್ಲೂ ಕೂಡ ಸತತ ವೈಫಲ್ಯಗಳಿಂದ ಬಳಲುತ್ತಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ ಮೂರು ಇನ್ನಿಂಗ್ಸ್‌ಗಳನ್ನಾಡಿರುವ ಸೂರ್ಯ ಇದುವರೆಗೆ ಕೇವಲ 16 ರನ್ ಗಳಿಸಿದ್ದಾರೆ. ಈ ಹಿಂದೆ ಅಂದರೆ, ಮಾರ್ಚ್‌ನಲ್ಲಿ, ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ ಅವರು ಮೊದಲ ಎಸೆತದಲ್ಲಿ ಖಾತೆ ತೆರೆಯದೆ ಔಟಾಗಿದ್ದರು.ಹೊಸ ರ‍್ಯಾಂಕಿಂಗ್‌ನ ಅಗ್ರ 10ರಲ್ಲಿ ಸೂರ್ಯ ಬಿಟ್ಟರೆ ಭಾರತದ ಬೇರಾವ ಬ್ಯಾಟ್ಸ್‌ಮನ್ ಸ್ಥಾನ ಪಡೆದಿಲ್ಲ. ಸೂರ್ಯರನ್ನು ಹೊರತುಪಡಿಸಿ ಪಾಕಿಸ್ತಾನದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 811 ಅಂಕಗಳೊಂದಿಗೆ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. ನೂತನ ಶ್ರೇಯಾಂಕದಲ್ಲಿ ಬಂಪರ್ ಪ್ರಯೋಜನ ಪಡೆದಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಮ್, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ. 4ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಇದ್ದಾರೆ.5ನೇ ಸ್ಥಾನದಲ್ಲಿ 745 ರೇಟಿಂಗ್ ಪಾಯಿಂಟ್ ಹೊಂದಿರುವ ನ್ಯೂಜಿಲೆಂಡ್​ ತಂಡದ ಆರಂಭಿಕ ಆಟಗಾರ ಡಿವೋನ್ ಕಾನ್ವೇ ಇದ್ದಾರೆ.ಹಾಗೆಯೇ ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಟೀಂ ಇಂಡಿಯಾದ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ 250 ರೇಟಿಂಗ್ ಪಾಯಿಂಟ್​ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.ಇನ್ನು ಟಿ20 ಕ್ರಿಕೆಟ್​ನ ಬೆಸ್ಟ್ ಬೌಲರ್​ ವಿಷಯಕ್ಕೆ ಬಂದರೆ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ.

source https://tv9kannada.com/photo-gallery/cricket-photos/t20-rankings-suryakumar-yadav-continues-to-lead-icc-t20-batter-rankings-psr-au14-554573.html

Views: 0

Leave a Reply

Your email address will not be published. Required fields are marked *