
ಐಸಿಸಿ ಮಹಿಳಾ ಟಿ20 ವಿಶ್ವಕಪ್ (ICC Women’s T20 World Cup) ಈಗ ಅಂತಿಮ ಹಂತದತ್ತ ಸಾಗಿದೆ. ಇದೀಗ ಪ್ರಶಸ್ತಿಗಾಗಿ ನಾಲ್ಕು ತಂಡಗಳು ಸೆಮಿಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ. ಆಸ್ಟ್ರೇಲಿಯಾ ವಿರುದ್ಧ ಭಾರತ (India vs Australia) ಕಣಕ್ಕಿಳಿದರೆ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಫೈನಲ್ಗೇರಲು ಸೆಣಸಾಡಲಿವೆ. ವಿಶ್ವಕಪ್‌ನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ನಾಲ್ಕರಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಇತ್ತ ಭಾರತ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಸೆಮಿಫೈನಲ್ ತಲುಪಿದೆ. ಲೀಗ್ ಸುತ್ತಿನಲ್ಲಿ ಭಾರತವನ್ನು ಇಂಗ್ಲೆಂಡ್ 11 ರನ್‌ಗಳಿಂದ ಸೋಲಿಸಿತು. ಹೀಗಾಗಿ ಒಂದು ಸೋಲಿನೊಂದಿಗೆ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಭಾರತ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ತಂಡ ಇದುವರೆಗೆ ಐದು ಪ್ರಶಸ್ತಿಗಳನ್ನು ಗೆದ್ದಿದ್ದು, ಈ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.
ಆದರೆ ಈ ಪಂದ್ಯದಲ್ಲಿ ಆಸೀಸ್ ತಂಡವನ್ನು ಸೋಲಿಸಿದರೆ, ಟೀಂ ಇಂಡಿಯಾದ ಅದೊಂದು ಸೋಲಿಗೆ ಸೇಡು ತೀರಿಸಿಕೊಂಡ ನಿಟ್ಟುಸಿರು ಬಿಡಲಿದೆ. ವಾಸ್ತವವಾಗಿ ಕಳೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಸೋಲಿಸಿತ್ತು. ಇದರಿಂದ ಭಾರತ ತನ್ನ ಮೊದಲ ಪ್ರಶಸ್ತಿಯನ್ನು ಗೆಲ್ಲುವುದನ್ನು ತಪ್ಪಿಸಿಕೊಂಡಿತ್ತು. ಈಗ ಭಾರತ ತಂಡಕ್ಕೆ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ.
T20 World Cup 2023:ಕೇವಲ 14 ಎಸೆತಗಳಲ್ಲಿ 56 ರನ್! ಟಿ20ಯಲ್ಲಿ ಪಾಕ್ ಪರ ಸಿಡಿಯಿತು ಮೊದಲ ಶತಕ
ಕಳೆದ ಟಿ20 ವಿಶ್ವಕಪ್‌ನಲ್ಲಿ ಆಗಿದ್ದೇನು?
ವಾಸ್ತವವಾಗಿ ಕಳೆದ ಟಿ20 ವಿಶ್ವಕಪ್‌ನ ಅಂತಿಮ ಸುತ್ತಿನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆಸ್ಟ್ರೇಲಿಯಾ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಗೆಲುವಿಗೆ 185 ರನ್ ಗಳ ಸವಾಲನ್ನು ನೀಡಿತು. ಈ ರನ್‌ಗಳನ್ನು ಬೆನ್ನಟ್ಟಿದ ಭಾರತ ಮಹಿಳಾ ತಂಡ 99 ರನ್‌ಗಳಿಗೆ ಆಲೌಟಾಗುವುದರೊಂದಿಗೆ ಹೀನಾಯ ಸೋಲು ಕಂಡಿತು.
ಭಾರತ- ಆಸೀಸ್ ಟಿ20 ಮುಖಾಮುಖಿ
ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಇಲ್ಲಿ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಇದುವರೆಗೆ ಐದು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತವನ್ನು ಆಸ್ಟ್ರೇಲಿಯಾ 4 ಬಾರಿ ಸೋಲಿಸಿದೆ. ಭಾರತ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಕಳೆದ ಮೂರು ಪಂದ್ಯಗಳಲ್ಲಿ ಭಾರತ ಸತತ ಸೋಲು ಕಂಡಿದೆ. ಹೀಗಾಗಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡದ ಮೇಲೆ ಒತ್ತಡ ಹೆಚ್ಚಿದೆ.
ಸೆಮಿಫೈನಲ್ ಪಂದ್ಯಗಳ ವಿವರ
ಭಾರತ vs ಆಸ್ಟ್ರೇಲಿಯಾ (23 ಫೆಬ್ರವರಿ 2023, ಗುರುವಾರ)
ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ (24 ಫೆಬ್ರವರಿ 2023, ಶುಕ್ರವಾರ)
ಅಂತಿಮ ಪಂದ್ಯ: 26 ಫೆಬ್ರವರಿ 2023, ಭಾನುವಾರ
ಭಾರತ ತಂಡ- ಹರ್ಲೀನ್ ಡಿಯೋಲ್, ಜೇಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ಶಫಾಲಿ ವರ್ಮಾ, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ರಾಧಾ ಯಾದವ್ , ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ಶಿಖಾ ಪಾಂಡೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ