ನೀಲಕಂಠೇಶ್ವರ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ, 03 : ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಿಂದಿನ ಪರಿಶ್ರಮ, ಪೋಷಕರ ಸಹಾಯ, ಸಮಾಜದ ನೆರವನ್ನು ಮರೆಯದೆ ತಮ್ಮ ಮುಂದಿನ ಬದುಕಿನಲ್ಲಿ ಇದರ ನೆನಪು ಇರಬೇಕಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷರಾದ ಹೆಚ್.ಎನ್.ತಿಪ್ಪೇಸ್ವಾಮಿ ಸಮಾಜದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಚಿತ್ರದುರ್ಗ ನಗರದ ವೀರಶೈವ ಸಮಾಜದವತಿಯಿಂದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ. ಪದವಿ, ಸ್ವಾತಕೋತ್ತರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಪ್ರತಿಭಾನ್ವಿತ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬಡತನದಲ್ಲಿಯೂ ಸಹಾ ಉತ್ತಮವಾಗಿ ವಿದ್ಯಾಭ್ಯಾಸವನ್ನು ಮಾಡುವುದರ ಮೂಲಕ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯವನ್ನು ಮಾಡಲಾಗಿದೆ. ಶಿಕ್ಷಣದಿಂದ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ. ಮನೆಯಲ್ಲಿ ಬಡತನ ಇದ್ದರೂ ಸಹಾ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿದ್ದಾರೆ, ಇದನ್ನು ಮರೆಯಬಾರದು ಮುಂದಿನ  ದಿನದಲ್ಲಿ ಅವರನ್ನು ಚನ್ನಾಗಿ ನೋಡಿಕೊಳ್ಳಬೇಕಿದೆ, ತಮ್ಮ ಯಶಸ್ವಿಗೆ ಕಾರಣರಾದವರನ್ನು ಯಾವೂತ್ತು ಸಹಾ ಮರೆಯಬಾರದು ಅದು ಪೋಷಕರಾಗಿರಲಿ, ಸಮಾಜವಾಗಿರಲಿ, ಶಿಕ್ಷಕರಾಗಿರಲಿ ಅವರನ್ನು ಸದಾ ಕಾಲ ನೆನೆಯಬೇಕಿದೆ ಎಂದರು.

ಮುಂದಿನ ದಿನದಲ್ಲಿ ಲಿಂಗಾಯತ ಸಮುದಾಯದ ಎಲ್ಲಾ ಉಪ ಪಂಗಡಗಳನ್ನು ಸೇರಿಸಿ ಜಿಲ್ಲೆಯಲ್ಲಿನ ವೀರಶೈವ  ಪ್ರತಿಭಾವಂತ ಮಕ್ಕಳಿಗೂ ಸಹಾ ಸನ್ಮಾನ ಮಾಡುವ ಕಾರ್ಯವನ್ನು ಮಾಡಬೇಕೆಂದು ನಮ್ಮ ಸಮಾಜದವರು ತೀರ್ಮಾನ ಮಾಡಿದ್ದಾರೆ. ಅದನ್ನು ಶೀಘ್ರವಾಗಿ ಕಾರ್ಯ ರೂಪಕ್ಕೆ ತರಲಾಗುವುದು. ಚಿತ್ರದುರ್ಗದಲ್ಲಿ ನಮ್ಮ ಸಮಾಜದ ಮಕ್ಕಳು ಓದಲು ವಸತಿ ನಿಲಯ ಇಲ್ಲ ಈ ಹಿನ್ನಲೆಯಲ್ಲಿ ನಮ್ಮ ಸಮಾಜದವತಿಯಿಂದ ಉತ್ತಮವಾದ ವಿದ್ಯಾರ್ಥಿ ನಿಲಯವನ್ನು ಸ್ಥಾಪನೆ ಮಾಡುವ ಉದ್ದೇಶ ಇದೆ ಮೊದಲಿಗೆ ಬಾಲಕಿಯರಿಗೆ ಸ್ಥಾಪನೆ ಮಾಡಲಾಗುವುದು ಎಂದರು.

ಇದೇ ರೀತಿ ನಮ್ಮ ಸಮಾಜದ ಬಾಂಧವರು ಶುಭ ಕಾರ್ಯಗಳನ್ನು ಮಾಡಲು ಸರಿಯಾದ ಸ್ಥಳ ಇಲ್ಲವಾಗಿದೆ ಈ ಹಿನ್ನಲೆಯಲ್ಲಿ ಸಮಾಜದವತಿಯಿಂದ ಉತ್ತಮವಾದ ಸಮುದಾಯ ಭವನನ್ನು ನಿರ್ಮಾಣ ಮಾಡಲು ಸಹಾ ಸಮಾಜ ಮುಂದಾಗಿದ್ದು ಇದಕ್ಕಾಗಿ ನಿವೇಶನವನ್ನು ಸಹಾ ತಯಾರು ಮಾಡಲಾಗಿದೆ ಸಮಾಜದ ಸ್ವಲ್ಪ ಹಣ ಇದೆ ಶಾಸಕರಿಂದ ಅನುದಾನವನ್ನು ಪಡೆಯವುದರ ಮೂಲಕ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಮುಂದಾಗುವುದಾಗಿ ತಿಳಿಸಿದ ಅವರು, ಇದೇ ರೀತಿ ಸಮಾಜದವತಿಯಿಂದ ಇನ್ನೂ ಅನೇಕ ರೀತಿಯ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಪ್ಪೇಸ್ವಾಮಿ ತಿಳಿಸಿದರು.

ಸಮಾರಂಭದಲ್ಲಿ ಭಾಗವಹಿಸಿ ಉಪನ್ಯಾಸವನ್ನು ನೀಡಿದ ಚಳ್ಳಕೆರೆಯ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಜಿ.ವಿ.ರಾಜಣ್ಣರವರು. ನಮ್ಮ ಪ್ರಗತಿ ನಮ್ಮ ಕೈಯಲಿಯೇ ಇದೆ ಇದನ್ನು ಯಾರು ಬಂದು ಮಾಡುವುದಿಲ್ಲ, ಶಿಕ್ಷಣದಿಂದ ಮಾತ್ರ ನಮ್ಮ ಉದ್ದಾರ ಸಾಧ್ಯವಿದೆ. ಇದರ ಬಗ್ಗೆ ತಾತ್ಸಾರ ಬೇಡ ಕಲಿಯುವಾಗ ಮನಸ್ಸಿಟ್ಟು ಕಲಿಯಿರಿ, ಬೇರೆ ಕಡೆಗೆ ನಿಮ್ಮ ಮನಸ್ಸನ್ನು ಹರಿ ಬಿಡಬೇಡಿ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನಿಮ್ಮನ್ನು ಕರೆಯಿಸಿ ಗೌರವಿಸುವುದು ನಿಮ್ಮ ಪ್ರತಿಭೆಯನ್ನು ನೋಡಿ ನೀವು ಸಹಾ ಮುಂದೆ ಉನ್ನತ ಸ್ಥಾನದಲ್ಲಿದ್ಧಾಗ ಇದನ್ನು ಮರೆಯಬೇಡಿ ಬೇರೆಯವರಿಗೆ ನೆರವಾಗಿ ಸಮಾಜದ ಋಣವನ್ನು ತೀರಿಸುವ ಕಾರ್ಯವನ್ನು ಮಾಡಿ ಎಂದು ಕರೆ ನೀಡಿದರು.

ಮುಂದೆ ಬೆಳೆಯುವ ಹುಮ್ಮಸ್ಸು ಛಲ ನಿಮ್ಮಲ್ಲಿ ಇದ್ದಾಗ ಮಾತ್ರ ಬೆಳೆಯಲು ಸಾಧ್ಯವಿದೆ ನಮ್ಮ ಏಳ್ಗೆಯನ್ನು ಬೇರೆಯವರು ಬಂದು ಮಾಡುವುದಿಲ್ಲ ನಮ್ಮ ಏಳ್ಗೆಯನ್ನು ನಾವೇ ಮಾಡಿಕೊಳ್ಳಬೇಕಿದೆ. ಇದಕ್ಕೆ ಗುರಿ ಛಲ ಅಗತ್ಯವಾಗಿದೆ. ಮಾನವನಾದನು ತನ್ನ ಅಂತರಂಗ ಬಹಿರಂಗವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಮಾನವನಾಗಿ ಬದುಕಲು ಸಾಧ್ಯವಿದೆ. ನಾವು ಏನಾಗಬೇಕೆಂದು ಅದರ ಬಗ್ಗೆ ಕನಸನ್ನು ಕಾಣಬೇಕಿದೆವ ಕಂಡ ಕನಸ್ಸನ್ನು ನನಸಾಗುವಂತೆ ಮಾಡಲು ಪರಿಶ್ರಮವನ್ನು ಹಾಕಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಕಾರ್ಯದರ್ಶಿ ಪಿ.ವಿರೇಂದ್ರಕುಮಾರ್, ನಿರ್ದೇಶಕರುಗಳಾದ ಸಿದ್ದವ್ವನಹಳ್ಳಿ ಪರಮೇಶ್, ತಿಪ್ಪೇಸ್ವಾಮಿ, ಕೆ.ಎನ್.ವಿಶ್ವನಾಥಯ್ಯ, ಜಯಪ್ಪ, ಮುಖಂಡರಾದ ಜ್ಞಾನಮೂರ್ತಿ, ರುದ್ರೇಶ್, ರೀನಾ ವೀರಭದ್ರಪ್ಪ, ಮೋಕ್ಷಾ ರುದ್ರಸ್ವಾಮಿ, ಮಲ್ಲಿಕಾರ್ಜನ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಉಮ್ಮೇಶ್ ಪತ್ತರ್ ಪ್ರಾರ್ಥಿಸಿದರೆ, ತಿಪ್ಪೇಸ್ವಾಮಿ ಸ್ವಾಗತಿಸಿದರು, ನಿರಂಜನ ದೇವರಮನೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *