ಟಾಕಿಂಗ್‌ ಸ್ಟಾರ್ ವಂಶಿಕಾ ಆನಂದ್ ಹೆಸರು ದುರುಪಯೋಗ : ಜನರಿಗೆ ಲಕ್ಷ ಲಕ್ಷ ಟೋಪಿ ಹಾಕಿದ ಲೇಡಿ..!

actor Anand daughter : ವಂಶಿಕಾರನ್ನು ಮೊದಲು ಕರೆಸಿ ಪ್ರಮೋಷನ್ ಮಾಡಿಕೊಡುವಂತೆ ವಂಶಿಕಾ ತಾಯಿ ಯಶಸ್ವಿನಿಯನ್ನು‌ ಕೇಳಿದ್ದಳಂತೆ. ಆ ವೇಳೆ ಒಂದೆರಡು‌ಕಡೆ ಮಾತ್ರ ರ್ಯಾಂಪ್ ವಾಕ್‌ಗೆ ಹೋಗಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ನಿಶಾ ನರಸಪ್ಪ ದರ್ಬಳಕೆ ಮಾಡಿಕೊಂಡಿದ್ದರು.

Vanshika Anand : ಬಾಲ ನಟಿ ವಂಶಿಕಾ ಸಣ್ಣ ವಯಸ್ಸಿನಲ್ಲೇ ಬಹುದೊಡ್ಡ ಹೆಸರು ಮಾಡಿರುವ ಪೋರಿ. ಈ ಪುಟಾಣಿ ಟಾಕಿಂಗ್ ಸ್ಟಾರ್ ಬರ್ತಾಳೆ ಅಂದ್ರೆ ಎಲ್ಲಿಲ್ಲದ ಕ್ರೇಜ್.. ಆದ್ರೆ ಈ ಪುಟಾಣಿ ವಂಶಿಕಳ ಪಾಪ್ಯುಲ್ಯಾರಿಟಿಯೇ ಕೆಲವರಿಗೆ ಹಣ ಮಾಡಿಕೊಳ್ಳಲು ದಾರಿಯಾಗಿಬಿಟ್ಟಿದೆ. ವಂಶಿಕಾಳ ಹೆಸರು ಬಳಸಿ ಜನರಿಗೆ ಟೋಪಿ ಹಾಕ್ತಿದ್ದ ಖತರ್ನಾಕ್ ಲೇಡಿಯನ್ನ ವಂಶಿಕಾ ತಾಯಿಯೇ ಹಿಡಿದುಕೊಟ್ಟಿದ್ದಾರೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..

ಹೆಸ್ರು ನಿಶಾ ನರಸಪ್ಪ.. ಒಳ್ಳೆಯ ಕೆಲಸ ಮಾಡಿದ್ರೆ ಠಾಣೆಯಲ್ಲಿ ಇಂಗು ತಿಂದ ಮಂಗನಂತೆ ನಿಲ್ಲುವ ಅವಶ್ಯಕತೆ ಇರ್ತಿರಲಿಲ್ಲ. ಎನ್‌.ಎನ್. ಪ್ರೊಡಕ್ಷನ್ ಅಂಡ್ ಇವೆಂಟ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದಳು. ಮಕ್ಕಳನ್ನು ಟ್ಯಾಲೇಂಟ್ ಶೋಗೆ ತರಬೇತಿ ನೀಡ್ತೀವಿ. ಫೋಟೋ ಶೂಟ್ ಮಾಡಿಸ್ತೀವಿ ಅಂತೆಲ್ಲಾ ಬಿಲ್ಡಪ್ ಕೊಟ್ಟಿದ್ಲು. ಇಷ್ಟು ಸಾಲದಕ್ಕೆ ವಂಶಿಕಾರನ್ನು ಮೊದಲು ಕರೆಸಿ ಪ್ರಮೋಷನ್ ಮಾಡಿಕೊಡುವಂತೆ ವಂಶಿಕಾ ತಾಯಿ ಯಶಸ್ವಿನಿಯನ್ನು‌ ಕೇಳಿದ್ದಳಂತೆ. ಆ ವೇಳೆ ಒಂದೆರಡು‌ಕಡೆ ಮಾತ್ರ ರ್ಯಾಂಪ್ ವಾಕ್ ಗೆ ಹೋಗಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ನಿಶಾ ನರಸಪ್ಪ ವಂಶಿಕಾ ಹೆಸರು ದರ್ಬಳಕೆ ಮಾಡಿಕೊಂಡು ಜನರಿಗೆ ಲಕ್ಷ ಲಕ್ಷ ಮೋಸ ಮಾಡಿದ್ದಾಳಂತೆ.

ಇನ್ನು ನಿಶಾ ನರಸಪ್ಪ ಇನ್ಟಾ ಮೂಲಕ ಪರಿಚಿತಳಾಗಿದ್ದಳಂತೆ. ಮಕ್ಕಳ ಟ್ಯಾಲೆಂಟ್ ಬೆಳೆಯಲಿ ಎಂದು ಈಕೆ ಮಾಡಿದ್ದ ಪೋಸ್ಟ್ ಗಳನ್ನು ಪ್ರಚಾರವನ್ನು ನೋಡಿದ್ದ ಕೆಲವು ಪೋಷಕರ 10ಸಾವಿರದಿಂದ ಲಕ್ಷಾಂತರ ರೂಪಾಯಿ ಹಣವನ್ನು ಕ್ಯಾಶ್, ಫೋನ್ ಪೇ ಗೂಗಲ್ ಪೇ ಮೂಲಕ ಕಳುಹಿಸಿದ್ದಾರೆ. ಹಣ ಸ್ವೀಕರಿಸದ ಮೇಲೆ ಪೋಷಕರ ಫೋನ್ ರಿಸೀವ್ ಮಾಡೋದನ್ನೇ ನಿಶಾ ಬಿಟ್ಟಿದ್ದಾಳೆ. ನಿಶಾಳನ್ನು ಹೇಗಾದ್ರು ಮಾಡಿ ಲಾಕ್ ಮಾಡಬೇಕೆಂದು ಹೊಸ ಪೋಷಕರ ಸೋಗಿನಲ್ಲಿ ಫೋನ್ ಮಾಡಿ ಹಣ ಕೊಡಲು ಹೋಟೇಲ್‌ಗೆ ಕರೆಸಿ ನಿಶಾಳನ್ನು ಪೋಷಕರು ರೆಡ್ ಹ್ಯಾಂಡಾಗಿ ಲಾಕ್ ಮಾಡಿ ಸದಾಶಿವನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ತಮ್ಮ ಮಗಳ ಹೆಸರನ್ನು ದುರುಪಯೋಗ ಪಡಿಸಿಕೊಂಡ ಕಾರಣ ಮತ್ತು ಪೋಷಕರು ತಮಗೆ ಮೋಸ ಮಾಡಿರುವ ಕಾರಣ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದೇನಾದ್ರು ವಂಶಿಕಾ ಹೆಸರನ್ನು ವಂಚನೆ ಮಾಡುವ ಸಲುವಾಗಿ ದುರುಪಯೋಗ ಮಾಡಿಕೊಂಡಿದ್ದು ವಿಪರ್ಯಾಸ.

Source : https://zeenews.india.com/kannada/entertainment/money-fraud-in-name-of-actor-anand-daughter-vanshika-145433

Leave a Reply

Your email address will not be published. Required fields are marked *