Team India: ಒದ ಒದ ಪದಯ ಗದದ ಫನಲಗ ಎಟರ ಕಟಟ ಟಮ ಇಡಯ..!

Womens Emerging Teams Asia Cup 2023: ಹಾಂಗ್​ಕಾಂಗ್​ನಲ್ಲಿ ನಡೆಯುತ್ತಿರುವ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾ ಎ ತಂಡವು ಫೈನಲ್​ಗೆ ಪ್ರವೇಶಿಸಿದೆ. ಈ ಟೂರ್ನಿಯಲ್ಲಿ ಭಾರತ ತಂಡವು ಕೇವಲ ಒಂದು ಪಂದ್ಯವನ್ನು ಗೆದ್ದು ಪ್ರಶಸ್ತಿ ಸುತ್ತಿಗೆ ತಲುಪಿರುವುದು ವಿಶೇಷ.ಅಂದರೆ ಭಾರತ ತಂಡವು ಲೀಗ್​ ಹಂತದಲ್ಲಿ ಹಾಂಗ್​ಕಾಂಗ್ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಇದಾದ ಬಳಿಕ ನೇಪಾಳ ಹಾಗೂ ಪಾಕಿಸ್ತಾನ್ ವಿರುದ್ಧದ ಪಂದ್ಯಗಳು ಮಳೆಗೆ ಆಹುತಿಯಾಗಿದೆ. ಇತ್ತ ಉತ್ತಮ ನೆಟ್ ರನ್​ ರೇಟ್ ಹೊಂದಿದ್ದರಿಂದ ಭಾರತ ತಂಡವು ಸೆಮಿ ಫೈನಲ್ ಪ್ರವೇಶಿಸಿತ್ತು.ಅದರಂತೆ ಸೋಮವಾರ ಶ್ರೀಲಂಕಾ ವಿರುದ್ಧ ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯಕ್ಕೂ ವರುಣ ಅಡ್ಡಿಯಾಗಿದ್ದಾನೆ. ಇನ್ನು ಮೀಸಲು ದಿನದಾಟದಲ್ಲೂ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹೆಚ್ಚಿನ ರನ್ ರೇಟ್ ಹೊಂದಿದ್ದ ಭಾರತ ತಂಡವು ನೇರವಾಗಿ ಫೈನಲ್​ಗೆ ಪ್ರವೇಶಿಸಿದೆ.ಮತ್ತೊಂದೆಡೆ 2ನೇ ಸೆಮಿಫೈನಲ್​ನಲ್ಲಿ ಬಾಂಗ್ಲಾದೇಶ್ ಎ ಹಾಗೂ ಪಾಕಿಸ್ತಾನ್ ಎ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಜೂನ್ 21 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿದೆ.ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಚೊಚ್ಚಲ ಎಸಿಸಿ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಟೂರ್ನಿಯ ಒಟ್ಟು 8 ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಹೀಗಾಗಿ ಬುಧವಾರ ಫೈನಲ್ ಪಂದ್ಯ ನಡೆಯಲಿದೆಯಾ ಎಂಬುದೇ ಈಗ ದೊಡ್ಡ ಪ್ರಶ್ನೆ.

source https://tv9kannada.com/photo-gallery/cricket-photos/team-india-a-in-to-final-womens-emerging-teams-asia-cup-2023-kannada-news-zp-604807.html

Leave a Reply

Your email address will not be published. Required fields are marked *