ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 23 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-1ರಲ್ಲಿ ಜಯಸಾಧಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 182 ರನ್ಗಳಿಸಿತ್ತು. ಭಾರತದ ಪರ ನಾಯಕ ಗಿಲ್ ಅವರ 49 ಎಸೆತಗಳಲ್ಲಿ 66 ಮತ್ತು ಗಾಯಕ್ವಾಡ್ ಅವರ 28 ಎಸೆತಗಳಲ್ಲಿ 49 ರನ್ ಗಳಿಸಿದ್ದರು.

ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 23 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-1ರಲ್ಲಿ ಜಯಸಾಧಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 182 ರನ್ಗಳಿಸಿತ್ತು. ಭಾರತದ ಪರ ನಾಯಕ ಗಿಲ್ ಅವರ 49 ಎಸೆತಗಳಲ್ಲಿ 66 ಮತ್ತು ಗಾಯಕ್ವಾಡ್ ಅವರ 28 ಎಸೆತಗಳಲ್ಲಿ 49 ರನ್ ಗಳಿಸಿದ್ದರು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ 159ರನ್ಗಳಿಸಿತು. ಡಿಯೋನ್ ಮೇಯರ್ಸ್ 49 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 65 ರನ್ಗಳಿಸಿದರು. ಕ್ಲೈವ್ ಮದಾನೆ 37ರನ್ಗಳಿಸಿ 2ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತದ ಪರ ವಾಷಿಂಗ್ಟನ್ ಸುಂದರ್ 15ಕ್ಕೆ 3, ಆವೇಶ್ ಖಾನ್ 39ಕ್ಕೆ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಟಿ20ಯಲ್ಲಿ 150 ಗೆಲುವನ್ನು ಸಾಧಿಸಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ದಾಖಲೆಯನ್ನು ಹೊಂದಿದೆ. ಭಾರತದ ನಂತರದ ಸ್ಥಾನದಲ್ಲಿ ಪಾಕಿಸ್ತಾನ (142), ನ್ಯೂಜಿಲೆಂಡ್ (111) ಮತ್ತು ದಕ್ಷಿಣ ಆಫ್ರಿಕಾ (104) ತಂಡಗಳಿವೆ. ಭಾರತ 230 T20Iಗಳನ್ನು ಆಡಿದ್ದು, 68.08 ಗೆಲುವಿನ ಶೇಕಡಾವಾರು ಜೊತೆಗೆ 150 ಪಂದ್ಯಗಳನ್ನ ಗೆದ್ದಿದೆ. ಭಾರತ 69 ಪಂದ್ಯಗಳಲ್ಲಿ ಸೋತಿದ್ದರೆ ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ 49 ಗೆಲುವು ಪಡೆದಿದೆ. ರೋಹಿತ್ ಶರ್ಮಾ ಭಾರತದ ಪರ T20I ಗಳಲ್ಲಿ ನಾಯಕನಾಗಿ ಹೆಚ್ಚಿನ ಗೆಲುವುಗಳ ದಾಖಲೆಯನ್ನು ಹೊಂದಿದ್ದಾರೆ. ಅವರ ನಂತರ 41 ಗೆಲುವಿನೊಂದಿಗೆ ದಂತಕಥೆ ಎಂಎಸ್ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 50 ಟಿ20 ಪಂದ್ಯಗಳಲ್ಲಿ 30 ಗೆಲುವು ಸಾಧಿಸಿದೆ..
15ರ ಬಳಗದಲ್ಲಿದ್ದರೂ ವಿಶ್ವಕಪ್ನಲ್ಲಿ ಅವಕಾಶ ವಂಚಿತರಾಗಿದ್ದ ಜೈಸ್ವಾಲ್ ಇದೀಗ ಜಿಂಬಾಬ್ವೆ ಪ್ರವಾಸದಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ಮಹತ್ವದ ದಾಖಲೆ ಬರೆದಿದ್ದಾರೆ. ಈ ಇನ್ನಿಂಗ್ಸ್ನಲ್ಲಿ 36 ರನ್ಗಳಿಸುವ ಮೂಲಕ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಜೈಸ್ವಾಲ್ ಪಾತ್ರರಾದರು. ಈ ವರ್ಷ ಮೂರು ಮಾದರಿಯಲ್ಲಿ ಹೆಚ್ಚು ರನ್ಗಳಿಸಿದ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ 848ರನ್ಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಇಬ್ರಾಹಿಂಗ್ ಜಾಡ್ರನ್ 844, ರೋಹಿತ್ ಶರ್ಮಾ ಹಾಗೂ ಅಜಂತಾ ಮೆಂಡಿಸ್ 833ರನ್, ರಹ್ಮಾನುಲ್ಲಾ ಗುರ್ಬಜ್ 773, ಬಾಬರ್ ಅಜಮ್ 709 ರನ್ಗಳಿಸಿದ್ದಾರೆ.