ತವರಿನಲ್ಲಿ ಭಾರತಕ್ಕೆ ಭಾರೀ ಮುಖಭಂಗ, ಗೆಲುವಿನ ಹಾದಿಯಲ್ಲಿ ಎಡವಿದ ಟೀಂ ಇಂಡಿಯಾ.

ಭಾರತ ಮತ್ತು ಇಂಗ್ಲೆಂಡ್ (IND vs ENG 1st Test) ನಡುವಿನ 5 ಟೆಸ್ಟ್​ ಪಂದ್ಯದ ಸರಣಿಯ ಮೊದಲ ಟೆಸ್ಟ್​ ಪಂದ್ಯವು ಹೈದರಾಬಾದ್​ನ ರಾಜೀವ್​ ಗಾಂಧೀ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ ನಲ್ಲಿ ಇಂಗ್ಲೆಂಡ್ ತಂಡ 246 ರನ್​ ಗೆ ಆಲೌಟ್​ ಆಯಿತು.

ಬಳಿಕ ಭಾರತ ತಂಡ ಬರೋಬ್ಬರಿ 436 ರನ್ ಸಿಡಿಸುವ ಮೂಲಕ ಮುನ್ನಡೆ ಸಾಧಿಸಿತು. ನಂತರ 2ನೇ ಇನ್ನಿಂಗ್ಸ್​ ನಲ್ಲಿ ಇಂಗ್ಲೆಂಡ್​​ ತಂಡ ಓಲಿ ಪೋಪ್ ಬರೋಬ್ಬರಿ 196 ರನ್​ ಸಿಡಿಸುವ ಮೂಲಕ ತಂಡ 420 ರನ್​ ಸಿಡಿಸಿತು. ಈ ಮೂಲಕ ಭಾರತಕ್ಕೆ 231 ರನ್​ ಟಾರ್ಗೆಟ್​​ ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡವು ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ ಭಾರತ ತಂಡ 69.1 ಓವರ್​ಗೆ 203 ರನ್​ ಗಳಿಸುವ ಮೂಲಕ 28 ರನ್​ ಗಳ ರೋಚಕ ಸೋಲನ್ನಪ್ಪಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.

ತವರಿನಲ್ಲಿ ಎಡವಿದ ಭಾರತ:

ಭಾರತ ತಂಡ 231 ರನ್​ ಟಾರ್ಗೆಟ್​​ ಅನ್ನು ಸರಾಗವಾಗಿ ಬೆನ್ನಟ್ಟುತ್ತದೆ ಎಂದು ನಂಬಿದ್ದವರಿಗೆ ದೊಡ್ಡ ಶಾಕ್​ ಎದುರಾಗಿತ್ತು. ಒಬ್ಬರ ಹಿಂದೆ ಒಬ್ಬರಂತೆ ಟೀಂ ಇಂಡಿಯಾ ಆಟಗಾರರು ಪೆವೆಲಿಯನ್​ ಪೆರೇಡ್ ನಡೆಸಿದರು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್​ ಶರ್ಮಾ 39 ರನ್, ಯಶಸ್ವಿ ಜೈಸ್ವಾಲ್​ 15 ರನ್, ಶುಭ್​ಮನ್ ಗಿಲ್​ ಶೂನ್ಯ, ಕೆಎಲ್ ರಾಹುಲ್​ 22 ರನ್, ಅಕ್ಷರ್ ಪಟೇಲ್ 17 ರನ್, ಶ್ರೇಯಸ್​​ ಅಯ್ಯರ್ 13 ರನ್ ಗೆ ವಿಕೆಟ್ ಕೈಚಲ್ಲುವ ಮೂಲಕ ಭಾರತ ತಂಡ 119 ರನ್​ಗೆ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಕೆಎಸ್ ಭರತ್ ಮತ್ತು ಅಶ್ವಿನ್​ ಅರ್ಧ ಶತಕದ ಜೊತೆಯಾಟವಾಡಿದರು. ಆದರೆ ಗೆಲುವಿನ ಭರವಸೆ ಮೂಡಿಸಿದ್ದ ಈ ಜೋಡಿಯಲ್ಲಿ ಭರತ್​ 28 ರನ್​ ಗಳಿಸಿದ್ದಾಗ ಕ್ಲೀನ್​ ಬೋಲ್ಡ್ ಆಗುವ ಮೂಲಕ ಔಟ್ ಆದರು. ಬಳಿಕ ಅಶ್ವಿನ್​ ಸಹ 28 ರನ್​ ಸಿಡಿಸಿದರು. ಆದರೂ ಸಹ ಕೊನೆ ಕ್ಷಣದಲ್ಲಿ ಮೊಹಮ್ಮದ್ ಸಿರಾಜ್​ 12 ರನ್ ಮತ್ತು ಬುಮ್ರಾ 6 ರನ್​ ಗಳಿಸುವ ಮೂಲಕ ಗೆಲುವಿನ ಆಸೆ ಚಿಗುರಿಸಿದ್ದರೂ ಸಹ ಅದು ನೆರವೇರಲಿಲ್ಲ.

ಓಲಿ ಪೋಪ್​ ಭರ್ಜರಿ ಬ್ಯಾಟಿಂಗ್​:

ಹೈದರಾಬಾದ್ ಟೆಸ್ಟ್ ನಲ್ಲಿ ಭಾರತ ತಂಡದ ವಿರುದ್ಧ ಇಂಗ್ಲೆಂಡ್ ತಂಡ ಅದ್ಭುತ ಪುನರಾಗಮನ ಮಾಡಿತು. ಪಂದ್ಯದ ಮೊದಲ ದಿನ ಟಾಸ್ ಗೆದ್ದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಭಾರತದ ಅನುಭವಿ ಬೌಲರ್‌ಗಳಾದ ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಅವರ ತೀಕ್ಷ್ಣವಾದ ಬೌಲಿಂಗ್ ಮುಂದೆ ಇಡೀ ತಂಡವು ಕೇವಲ 246 ರನ್‌ಗಳಿಗೆ ಕುಸಿಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಮೂವರು ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅರ್ಧಶತಕಗಳನ್ನು ಗಳಿಸಿ ಸ್ಕೋರ್ ಅನ್ನು 436 ರನ್‌ಗಳಿಗೆ ಕೊಂಡೊಯ್ದರು.

ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 190 ರನ್‌ಗಳ ಮುನ್ನಡೆ ಸಾಧಿಸಿತು. ಆದರೆ ಬಳಿಕ 2ನೇ ಇನ್ನಿಂಗ್ಸ್​ ನಲ್ಲಿ ಆಂಗ್ಲರು ಭರ್ಜರಿ ಕಂಬ್ಯಾಕ್ ಮಾಡಿದರು. 420 ರನ್​ ಗಳಿಸುವ ಮೂಲಕ ಭಾರತಕ್ಕೆ 231 ರನ್​ ಗಳ ಟಾರ್ಗೆಟ್ ನೀಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತದ 190 ರನ್‌ಗಳ ಮುನ್ನಡೆ ಸಾಧಿಸಿತು. ಬಳಿಕ ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್ ತ್ವರಿತವಾಗಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಓಲಿ ಪೋಪ್ ತಂಡವನ್ನು ಆರಂಭಿಕ ಆಘಾತಗಳಿಂದ ಪಾರು ಮಾಡಿದರು. ಈ ವೇಳೆ ಅವರು 196 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. 21 ಬೌಂಡರಿಗಳಿಂದ ಕೂಡಿದ ಈ ಇನ್ನಿಂಗ್ಸ್‌ ನಲ್ಲಿ ಭರ್ಜರಿಯಾಗಿ ಆಡಿದರು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 420 ರನ್ ಗಳಿಸಲು ಸಾಧ್ಯವಾಯಿತು ಮತ್ತು ಭಾರತಕ್ಕೆ 231 ರನ್‌ಗಳ ಗುರಿಯನ್ನು ನೀಡಿತು.

ಟಾಮ್​ ಭರ್ಜರಿ ಬೌಲಿಂಗ್​:

ಇನ್ನು, ಆಂಗ್ಲರ ಪರ ಭರ್ಜರಿ ಬೌಲಿಂಗ್​ ದಾಳಿ ನಡೆಸಿದ ಟಾಮ್ ಹಾರ್ಟ್ಲೆ 26.2 ಓವರ್​ಗೆ 62 ರನ್​ ನೀಡಿ ಪ್ರಮುಖ 7 ವಿಕೆಟ್ ಪಡೆದರು. ಉಳಿದಂತೆ ಜೋ ರೂಟ್ 1 ವಿಕೆಟ್ ಮತ್ತು ಜಾಕ್​ ಲೀಚ್ 1 ವಿಕೆಟ್ ಪಡೆದು ಮಿಂಚಿದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
¸ÀªÀÄUÀæ ¸ÀÄ¢Ý

Leave a Reply

Your email address will not be published. Required fields are marked *