ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಆಫ್ರಿಕಾ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ ಕೇವಲ 82 ರನ್‌ಗಳಿಗೆ ಆಲೌಟ್ ಮಾಡಿತು. ಈ ಮೊತ್ತವನ್ನ 11. 2 ಓವರ್‌ಗಳಲ್ಲಿ ಗುರಿ ತಲುಪಿತು.

ಫೆಬ್ರವರಿ 2 ರಂದು ಮಲೇಷ್ಯಾದ ಬ್ಯೂಮಾಸ್ ಓವಲ್‌ನಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ( ICC Under 19 Womens T20 World Cup) ಫೈನಲ್ ಪಂದ್ಯದಲ್ಲಿ ಭಾರತ ಅಂಡರ್ ತಂಡ ಮತ್ತು ದಕ್ಷಿಣ ಆಫ್ರಿಕಾ (South Africa Women U19 vs India Women U19) ವಿರುದ್ಧ 9 ವಿಕೆಟ್‌ಗಳಿಂದ ಗೆದ್ದ ಸತತ 2ನೇ ಬಾರಿ ವಿಶ್ವಚಾಂಪಿಯನ್ ಆಗಿದೆ. 2023ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಶೆಫಾಲಿ ವರ್ಮಾ ನೇತೃತ್ವದಲ್ಲಿ ಚೊಚ್ಚಲ ಕಿರೀಟ ಧರಿಸಿತ್ತು. ಇದೀಗ 2ನೇ ಆವೃತ್ತಿಯನ್ನೂ ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. ಈ ಬಾರಿ ಭಾರತ ತಂಡವನ್ನು ಕನ್ನಡತಿ ನಿಕ್ಕಿ ಪ್ರಸಾದ್ ಮುನ್ನಡೆಸಿದ್ದರು.
82ಕ್ಕೆ ದಕ್ಷಿಣ ಆಫ್ರಿಕಾ ಆಲೌಟ್
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಆಫ್ರಿಕಾ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ ಕೇವಲ 82 ರನ್‌ಗಳಿಗೆ ಆಲೌಟ್ ಮಾಡಿತು. ದಕ್ಷಿಣ ಆಫ್ರಿಕಾ ಮೀಕೆ ವ್ಯಾನ್ ವೂರ್ಸ್ಟ್ 18 ಎಸೆತಗಳಲ್ಲಿ 23 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಜೆಮ್ಮಾ ಬೋತಾ 16, ಫೇ ಕೌಲಿಂಗ್ 15, ಕರಬೊ ಮೆಸೊ 26 ಎಸೆತಗಳಲ್ಲಿ 10 ರನ್ಗಳಿಸಿದರು. ಈ ನಾಲ್ವರನ್ನ ಹೊರೆತುಪಡಿಸಿ ಉಳಿದೆಲ್ಲಾ ಬ್ಯಾಟರ್ಸ್ ಒಂದಕಿ ಮೊತ್ತಕ್ಕೆ ಔಟ್ ಆದರು.
ಭಾರತದ ಪರ ಗೊಂಗಡಿ ತ್ರಷಾ 15ಕ್ಕೆ 3, ವೈಷ್ಣವಿ ಶರ್ಮಾ 23ಕ್ಕೆ2, ಆಯುಷಿ ಶುಕ್ಲಾ 9ಕ್ಕೆ2, ಪರುಣಿಕಾ ಸಿಸೋಡಿಯಾ 6ಕ್ಕೆ 2 ವಿಕೆಟ್ ಪಡೆದು ಮಿಂಚಿದರು.
11.2 ಓವರ್ಗಳಿಗೆ ಪಂದ್ಯ ಮುಗಿಸಿದ ಭಾರತ
ಇದಾದ ಬಳಿಕ 83ರನ್‌ಗಳ ಗುರಿಯನ್ನ ಬೆನ್ನಟ್ಟಿದ ಭಾರತ ಓಪನರ್ ಗೊಂಗಡಿ ತ್ರಿಷಾ ಅವರ ಅಜೇಯ 44 ರನ್ ಮತ್ತು ಸಾನಿಕಾ ಚಲ್ಕೆ ಅವರ ಅಜೇಯ 26 ರನ್‌ಗಳ ಅಮೋಘ ಇನ್ನಿಂಗ್ಸ್‌ನ ನೆರವಿನಿಂದ 11.2 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 84 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
ವಿಶ್ವಕಪ್ನಲ್ಲಿ ಭಾರತದ ಪಯಣ
ಟೀಮ್ ಇಂಡಿಯಾ ಲೀಗ್ನಲ್ಲಿ ವೆಸ್ಟ್ ಇಂಡೀಸ್, ಮಲೇಷ್ಯಾ ಹಾಗೂ ಶ್ರೀಲಂಕಾ ತಂಡಗಳನ್ನು ಮಣಿಸಿ ಸೂಪರ್ ಸಿಕ್ಸ್ ಪ್ರವೇಶಿಸಿತ್ತಯ. ಇಲ್ಲಿ ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್ ತಂಡಗಳ ವಿರುದ್ಧ ಸುಲಭ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನ 9 ವಿಕೆಟ್‌ಗಳಿಂದ ಬಗ್ಗುಬಡಿದಿದ್ದ ಭಾರತ ಪಡೆ ಫೈನಲ್ನಲ್ಲೂ ಗೆಲುವು ಸಾಧಿಸಿ ಅಜೇಯವಾಗಿ ಚಾಂಪಿಯನ್ಪಟ್ಟಕ್ಕೇರಿದೆ.
ಸತತ ಎರಡನೇ ಬಾರಿಗೆ ಪ್ರಶಸ್ತಿ ವಶಪಡಿಸಿಕೊಂಡ ಭಾರತ
ನಿಕ್ಕಿ ಪ್ರಸಾದ್ ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ವಶಪಡಿಸಿಕೊಂಡಿತು. ಇದಕ್ಕೂ ಮೊದಲು 2023ರಲ್ಲಿ ಮೊದಲ ಬಾರಿಗೆ ಆಡಿದ ಈ ಟೂರ್ನಿಯಲ್ಲಿ ಶೆಫಾಲಿ ವರ್ಮಾ ನಾಯಕತ್ವದ ಟೀಂ ಇಂಡಿಯಾ ಈ ಪ್ರಶಸ್ತಿ ಗೆದ್ದಿತ್ತು.
ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಗೊಂಗಡಿ ತ್ರಿಷಾ
ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಗೊಂಗಡಿ ಶೃತಿ ಫೈನಲ್ನಲ್ಲಿ 3 ವಿಕೆಟ್ ಜೊತೆಗೆ ಅಜೇಯ 44 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇನ್ನು ಸರಣಿಯಲ್ಲಿ 7 ಪಂದ್ಯಗಳಿಂದ ಒಂದು ಶತಕದ ಸಹಿತ 309 ರನ್ ಹಾಗೂ ಬೌಲಿಂಗ್ದನಲ್ಲಿ 7 ವಿಕೆಟ್ ಪಡೆದಿದ್ದಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.