ಸೂರ್ಯ ಅರ್ಧ ಶತಕ! ಯುಎಸ್‌ಎ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ!

ಇಂದು ಭಾರತ (Team India) ಮತ್ತು ಯುಎಸ್‌ಎ (USA) ನಡುವೆ ಪಂದ್ಯ ನಡೆಯುತ್ತಿದೆ. ಎ ಗುಂಪಿನಲ್ಲಿ ಉಭಯ ತಂಡಗಳು ಆಡಿದ ಎರಡೂ ಪಂದ್ಯಗಳನ್ನು ಗೆದ್ದಿವೆ. ಟಾಸ್‌ ಗೆದ್ದ ಟೀಂ ಇಂಡಿಯಾ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಇನ್ನೂ ಬ್ಯಾಟಿಂಗ್ ಆರಂಭಿಸಿದ ಯುಎಸ್‌‌ಗೆ ಆರಂಭಿಕ ಆಘಾತ ಉಂಟಾಯ್ತು. ಅಮೆರಿಕ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಶಯನ್ ಜಹಾಂಗೀರ್ ಶೂನ್ಯಕ್ಕೆ ಅರ್ಷದೀಪ್​ಗೆ ಬಲಿಯಾದರು. ಅಮೆರಿಕ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿದೆ.ಗೌಸ್ 2 ರನ್ ಬಾರಿಸಿ ಔಟಾದರು. ಅರ್ಷದೀಪ್​ಗೆ ಒಂದೇ ಓವರ್‌‌ನಲ್ಲಿ 2 ವಿಕೆಟ್ ಪಡೆದುಕೊಂಡ್ರು. ಕೊನೆಯದಾಗಿ 20 ಓವರ್‌ಗಳಲ್ಲಿ ಯುಎಸ್‌ಯ 8 ವಿಕೆಟ್‌ ಕಳೆದುಕೊಂಡು 110 ರನ್‌‌ಗಳಿಸಿತ್ತು.

ಟೀಂ ಇಂಡಿಯಾಗೂ ಆರಂಭಿಕ ಆಘಾತ!

ಇನ್ನೂ 110 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯ್ತು. ಕೊಹ್ಲಿ ಮತ್ತೊಮ್ಮೆ ಡಕೌಟ್‌ ಆದ್ರು. ಇನ್ನೂ ರೋಹಿತ್‌ ಶರ್ಮಾ ಕೇವಲ 3 ರನ್‌ಗಳಿಸಿ ಔಟಾದ್ರು.  ಇನ್ನೂ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಮತ್ತೊಮ್ಮೆ ಆಸರೆಯಾಗಿದ್ದು ರಿಷಭ್ ಪಂತ್‌. 20 ಬಾಲ್‌ಗಳಲ್ಲಿ 18 ರನ್‌‌ಗಳಿಸಿ ಟೀಂ ಇಂಡಿಯಾ ಸ್ವಲ್ಪ ಚೇತರಿಸಿಕೊಳ್ಳುವಂತೆ ಮಾಡಿದರು.

ಸೂರ್ಯ, ದುಬೆ ಆಸರೆ!

ಮೂರು ವಿಕೆಟ್‌ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್‌ ಹಾಗೂ ಶಿವಂ ದುಬೆ ಆಸರೆಯಾದ್ರು. ಸ್ಲೋ ಪಿಚ್‌ನಲ್ಲಿ ಸ್ಲೋ ಆಗಿಯೇ ರನ್‌ಗಳನ್ನು ಕಲೆ ಹಾಕಿದ್ರು. ಯಾವುದೇ ದೊಡ್ಡ ಹೊಡೆತಕ್ಕೆ  ಕೈ ಹಾಕದೇ ಸ್ಲೋ ಆಗಿಯೇ ರನ್‌ ಕಲೆಹಾಕಿ ಟೀಂ ಇಂಡಿಯಾ ಗೆಲ್ಲುವಂತೆ ಮಾಡಿತ್ತು. ಟೀಂ ಇಂಡಿಯಾ 18.2 ಓವರ್‌ಗಳಲ್ಲಿ ಮೂರು ವಿಕೆಟ್‌ ಕೆಳದುಕೊಂಡು 111 ರನ್‌ಗಳಿಸಿ ಜಯಗಳಿಸಿತು.

ಅರ್ಶದೀಪ್‌ ಬೆಸ್ಟ್‌ ಸ್ಪೆಲ್‌!

ಇನ್ನಿಂಗ್ಸ್‌‌ನ ಮೊದಲ ಓವರ್‌ ಬೌಲಿಂಗ್‌ ಹಾಕಿದ ಅರ್ಶದೀಪ್‌ ಎರಡು ವಿಕೆಟ್‌ ಪಡೆದುಕೊಂಡ್ರು. ಇನ್ನೂ ಇದು ಅವರ ಕೆರಿಯರ್‌‌ನ ಬೆಸ್ಟ್‌ ಸ್ಪೆಲ್‌ ಅಂತ ಅಂದ್ರೆ ತಪ್ಪಾಗಲ್ಲ. 4 ಓವರ್ ಬೌಲಿಂಗ್‌ ಮಾಡಿದ ಅರ್ಶದೀಪ್‌ 9 ರನ್‌‌ಗಳಷ್ಟೇ ನೀಡಿದ್ದಾರೆ. ಜೊತೆಗೆ ಪ್ರಮುಖ 4 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್ (ಪ್ಲೇಯಿಂಗ್ XI): ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್, ಆಂಡ್ರೀಸ್ ಗೌಸ್(ಡಬ್ಲ್ಯೂ), ಆರನ್ ಜೋನ್ಸ್(ಸಿ), ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್

ಭಾರತ (ಪ್ಲೇಯಿಂಗ್‌ XI): ರೋಹಿತ್ ಶರ್ಮಾ (ಸಿ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ಡಬ್ಲ್ಯೂ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್‌ ಸಿಂಗ್, ಮೊಹಮ್ಮದ್ ಸಿರಾಜ್.

Source : https://kannada.news18.com/news/sports/t20-world-cup-2024-live-updates-ind-vs-usa-team-india-won-by-7-wickets-vdd-1738075.html

Leave a Reply

Your email address will not be published. Required fields are marked *