ಲಂಕಾ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ! ಒಂದು ಪಂದ್ಯ ಇರುವಂತೆ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ.

ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಟೀಮ್​ ಇಂಡಿಯಾ ಪ್ರಾಬಲ್ಯ ಮೆರೆದಿದೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮಳೆಯ ಅಡಚಣೆಯ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅತಿಥೇಯ ತಂಡ 161 ರನ್​ಗಳಿಸಿತ್ತು. ಭಾರತ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ಮಳೆ ಬಂದಿದ್ದರಿಂದ ಪಂದ್ಯದಲ್ಲಿ ಓವರ್ ಕಡಿತ ಮಾಡಿ, 8 ಓವರ್​ಗಳಲ್ಲಿ 78ರನ್​ಗಳ ಗುರಿ ನೀಡಲಾಗಿತ್ತು. ಈ ಮೊತ್ತವನ್ನ ಭಾರತ ತಂಡ 6.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ T20I ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ವಶಪಡಿಸಿಕೊಂಡಿದೆ.

162 ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 3 ಎಸೆತಗಳಲ್ಲಿ 6 ರನ್​ಗಳಿಸಿದ್ದ ವೇಳೆ ಮಳೆ ಸುರಿಯಿತು. ಸುಮಾರು ಒಂದು ಗಂಟೆ ಆಟ ವ್ಯರ್ಥವಾಯಿತು. ಹಾಗಾಗಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಪಂದ್ಯವನ್ನ 8 ಓವರ್​ಗಳಿಗೆ ಇಳಿಸಿ, ಭಾರತಕ್ಕೆ 78 ರನ್​ಗಳ ಗುರಿ ನೀಡಲಾಗಿತ್ತು.

ನಿರಾಸೆ ಮೂಡಿಸಿದ ಸಂಜು ಸ್ಯಾಮ್ಸನ್

ಮಳೆ ನಿಂತ ನಂತರ ಆಟ ಶುರುವಾಗುತ್ತಿದ್ಧಂತೆ ಭಾರತಕ್ಕೆ ದೊಡ್ಡ ಆಘಾತ ಎದುರಾಯಿತು. ಸಂಜು ಸ್ಯಾಮ್ಸನ್ (0) ತೀಕ್ಷಣ ಬೌಲಿಂಗ್‌ನಲ್ಲಿ ಗೋಲ್ಡನ್ ಡಕ್ ಆಗಿ ಹಿಂತಿರುಗಿದರು. ಗಾಯದ ಸಮಸ್ಯೆಯಿಂದ ಶುಬ್ಮನ್ ಗಿಲ್ ಬದಲಿಗೆ ಅಂತಿಮ ತಂಡದಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಮತ್ತೊಮ್ಮೆ ಕೈಚೆಲ್ಲಿದರು.

ಸೂರ್ಯ-ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್

ನಂತರ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಯುವ ಬ್ಯಾಟರ್  ಯಶಸ್ವಿ ಜೈಸ್ವಾಲ್ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರು ಆಕ್ರಮಣಕಾರಿ ಆಟವಾಡಿದ್ದರಿಂದ ಭಾರತ ನಾಲ್ಕು ಓವರ್‌ಗಳಲ್ಲಿ 50 ರನ್ ಪೂರೈಸಿತು. ಮತೀಶ ಪತೀರಣ ಈ ಅಪಾಯಕಾರಿ ಜೋಡಿಯನ್ನು ಮುರಿದರು. 12 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 26 ರನ್​ಗಳಿಸಿದ್ದ ಸೂರ್ಯರನ್ನ ಔಟ್ ಮಾಡಿದರು.  ನಂತರದ ಓವರ್​ನಲ್ಲಿ ಹಸರಂಗ  15 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 30ರನ್​ಗಳಿಸಿದ ಜೈಸ್ವಾಲ್ ವಿಕೆಟ್ ಹಾರಿಸಿದರು.

ಆದರೆ  ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ 1ಸಿಕ್ಸರ್ ಸಹಿತ ಅಜೇಯ 22  ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.  ಈ ಮೂಲಕ ಟೀಮ್ ಇನ್ನೂ ಒಂದು ಪಂದ್ಯ ಇರುವಂತೆ ಟಿ20 ಸರಣಿ ತನ್ನದಾಗಿಸಿಕೊಂಡಿತು.

ಲಂಕಾಗೆ ಆಸರೆಯಾದ ಪೆರೆರಾ

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಅತಿಥೇಯ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 161 ರನ್ ಗಳಿಸಿತು. ಕುಶಾಲ್ ಪೆರೇರಾ (34 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 53) ಅರ್ಧಶತಕ ಸಿಡಿಸಿ ಮಿಂಚಿದ್ದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ನಿಸ್ಸಾಂಕ ಇಂದೂ ಕೂಡ 32 ರನ್​ಗಳಿಸಿದರೆ, ಕಮಿಂಡು ಮೆಂಡಿಸ್ 26 ರನ್​ಗಳಿಸಿ 3ನೇ ಬೆಸ್ಟ್ ಸ್ಕೋರರ್ ಆದರು.

ಭಾರತದ ಬೌಲರ್‌ಗಳ ಪೈಕಿ ರವಿ ಬಿಷ್ಣೋಯ್ಮೂ 26ಕ್ಕೆ3 ವಿಕೆಟ್ ಪಡೆದರು, ಅರ್ಶದೀಪ್ 24ಕ್ಕೆ ಅಕ್ಷರ್ ಪಟೇಲ್ 30ಕ್ಕೆ 2 ಹಾಗೂ  ಹಾರ್ದಿಕ್ ಪಾಂಡ್ಯ 23ಕ್ಕೆ 2 ವಿಕೆಟ್ ಪಡೆದರು. 130ಕ್ಕೆ 3 ಇದ್ದ ಶ್ರೀಲಂಕಾ ಇಂದೂ ಕೊಡ ದಿಢೀರ್ ಪತನ ಕಂಡು ಕೇವಲ 30 ರನ್​ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

Source : https://kannada.news18.com/news/sports/india-vs-sri-lanka-india-beat-sri-lanka-by-7-wickets-win-series-2-0-mbr-1793036.html

 

Leave a Reply

Your email address will not be published. Required fields are marked *