Smartphone Tips: ಮಾರುಕಟ್ಟೆಯಲ್ಲಿ ವೈಫೈ, ಬ್ಲ್ಯೂಟೂತ್ ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿದ್ದರೆ ಮೊಬೈಲ್ ಬ್ಯಾಟರಿ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಸ್ಮಾರ್ಟ್‌ಫೋನ್ ಉತ್ತಮ ಬಾಳಿಕೆ ಬರಲಿದೆ.

ಮಾರುಕಟ್ಟೆಯಲ್ಲಿ ಇಂದು ಸ್ಮಾರ್ಟ್ಫೋನುಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಕಡಿಮೆ ಬೆಲೆಗೆ ಆಕರ್ಷಕ ಫೀಚರ್ಸ್ ಹೊಂದಿರುವ ಮೊಬೈಲ್‌ಗಳು ಭರ್ಜರಿ ಸೇಲ್ ಆಗುತ್ತಿವೆ. ಇವುಗಳಲ್ಲಿ ಕೆಲವು ಸ್ಮಾರ್ಟ್‌ಫೋನ್ ಹೆಚ್ಚಿನ ರೇಡಿಯೇಷನ್ ಕೂಡ ಹೊಂದಿರುತ್ತವೆ. ಕೆಲವೊಮ್ಮೆ ಸ್ಮಾರ್ಟ್‌ಫೋನ್ ಅಧಿಕ ಬಿಸಿ ಆಗಿ ಬಿಡುತ್ತದೆ.

ಸ್ಮಾರ್ಟ್‌ಫೋನ್ ಅಧಿಕ ಬಿಸಿ ಆಗುವುದರಿಂದ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಕೂಡ ಎದುರಾಗುತ್ತದೆ.

ಅಲ್ಲದೆ ಈಗ ಬ್ಯಾಟರಿ ವೇಗವಾಗ ಭರ್ತಿಯಾಗಲೆಂದು ಫಾಸ್ಟ್ ಚಾರ್ಜರ್ ಸೌಲಭ್ಯವನ್ನು ಕೂಡ ನೀಡುತ್ತಿವೆ. ಹೀಗೆ ಚಾರ್ಜ್‌ಗೆ ಹಾಕುವಾಗ ಸ್ಮಾರ್ಟ್‌ಫೋನ್ ಬಿಸಿಯಾಗುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಏನು ಎಂಬುದು ಇಲ್ಲಿದೆ.

ನಿಮ್ಮ ಮೊಬೈಲ್ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಅನ್ನು ಚಾರ್ಜ್ ಮಾಡಿರಿ. ಸದ್ಯ ಎಲ್ಲ ಮೊಬೈಲ್‌ಗಳು ಯುಎಸ್‌ಬಿ ಕೇಬಲ್ ನಿಂದಲೇ ಚಾರ್ಜ್ ಆಗಲಿದೆ. ಹಾಗೆಂದು ಅದನ್ನು ಕಂಪ್ಯೂಟರ್ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ.

ಇಂದಿನ ದಿನದಲ್ಲಿ ಬಳಕೆದಾರರು ಮೊಬೈಲ್‌ಗಳು ಹಾಳಾಗದಿರಲಿ ಎಂದು ಫ್ಲಿಪ್ ಕವರ್ ಅನ್ನು ಅಳವಡಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಇದು ಫ್ಯಾಷನ್ಗಾಗಿಯೂ ಬಳಸುವವರಿದ್ದಾರೆ. ಹಾಗಾಗಿ ನಿಮ್ಮ ಮೊಬೈಲ್ ಚಾರ್ಜ್ ಮಾಡುವಾಗ ರಕ್ಷಣಾ ಕವಚಗಳನ್ನು ತೆಗೆಯುವುದು ಉತ್ತಮ.

ವೇಗವಾಗಿ ಮೊಬೈಲ್ ಚಾರ್ಜ್ ಆಗಬೇಕು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ದೊರೆಯಲಿರುವ ವೇಗ ಚಾರ್ಜರ್‌ಗಳನ್ನು ಬಳಸಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬೇಡಿ. ಇದರಿಂದ ಬ್ಯಾಟರಿ ಬೇಗ ಬಿಸಿಯಾಗಲಿದ್ದು, ಬ್ಯಾಟರಿ ಕ್ಷಮತೆ ಕೂಡ ಕಡಿಮೆಯಾಗುತ್ತದೆ.

ಕೆಲವರು ಮೊಬೈಲ್ ಅನ್ನು ರಾತ್ರಿ ಇಡೀ ಚಾರ್ಜ್‌ಗೆ ಹಾಕಿ ಬಿಟ್ಟಿರುತ್ತಾರೆ. ಈ ರೀತಿ ಮಾಡುವುದು ಅಪಾಯಕಾರಿ. ಇದರಿಂದ ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಅತಿಯಾಗಿ ಚಾರ್ಜ್ ಮಾಡುವುದೂ ಬೇಡ. ಶೇ 90 ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ.

ಮಾರುಕಟ್ಟೆಯಲ್ಲಿ ವೈಫೈ, ಬ್ಲ್ಯೂಟೂತ್ ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿದ್ದರೆ ಮೊಬೈಲ್ ಬ್ಯಾಟರಿ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಸ್ಮಾರ್ಟ್‌ಫೋನ್ ಉತ್ತಮ ಬಾಳಿಕೆ ಬರಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1