YouTube Subscribers Tricks: ನೀವೆಲ್ಲರೂ ಕೇಳಿರುವಂತೆ, ಯಶಸ್ಸಿಗೆ ಪರಿಶ್ರಮ ಅತ್ಯಗತ್ಯ. ಅದೇ ರೀತಿ, ಯೂಟ್ಯೂಬ್ನಲ್ಲಿ ಚಂದಾದಾರರನ್ನು ಹೆಚ್ಚಿಸಲು, ನೀವು ನಿರಂತರವಾಗಿ ನಿಮ್ಮ ಚಾನಲ್‌ಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರಬೇಕು. ಯೂಟ್ಯೂಬ್ನಲ್ಲಿ ಯಾವ ವಿಷಯದ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದೀರೊ, ಅದರಲ್ಲಿ ಕ್ರಿಯಾಶೀಲರಾಗಿರಬೇಕು.
ಭಾರತದಲ್ಲಿ ಯೂಟ್ಯೂಬ್ ಜನಪ್ರಿಯತೆ ಗಮನಾರ್ಹ ಏರಿಕೆ ಕಂಡಿವೆ. ನಿಮ್ಮ ಕೌಶಲ್ಯದಿಂದ ಮನೆಯಲ್ಲೇ ಕುಳಿತು ಹಣವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ. ಹೀಗಾಗಿ ಯೂಟ್ಯೂಬ್ ಚಾನೆಲ್ಗಳ ಸಂಖ್ಯೆ ಕೂಡ ಲೆಕ್ಕಕ್ಕೆ ಸಿಗದಷ್ಟಿದೆ. ಆದರೆ, ಯೂಟ್ಯೂಬ್ ಖಾತೆ ತೆರೆದು ಕೇವಲ ವಿಡಿಯೋ ಹಂಚಿಕೊಳ್ಳುತ್ತಿದ್ದರೆ ಸಾಲದು.
ಯೂಟ್ಯೂಬ್ ಖಾತೆ ತೆರೆದು ಹಣ ಗಳಿಸಬೇಕು ಎಂದರೆ ಅದಕ್ಕೆ ಒಂದಿಟ್ಟು ಮಾನದಂಡಗಳಿವೆ. ಒಂದು ಸಾವಿರ ಚಂದಾದಾರರು, ನಾಲ್ಕು ಸಾವಿರ ವೀಕ್ಷಣೆ ಹೀಗೆ ಕೆಲವೊಂದು ನಿಯಮಗಳಿವೆ. ಈ ಪೈಕಿ ಬಳಕೆದಾರರಿಗೆ ಚಂದಾದಾರರನ್ನು ಗಳಿಸುವುದೇ ದೊಡ್ಡ ಸವಾಲಾಗಿದೆ. ಹಾಗಾದರೆ, ನಿಮ್ಮ ಚಾನಲ್‌ಗೆ ಚಂದಾದಾರರ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ಬಯಸಿದರೆ ಈ ಟ್ರಿಕ್ ಅನ್ನು ಪ್ರಯೋಗಿಸಬಹುದು.
ನೀವೆಲ್ಲರೂ ಕೇಳಿರುವಂತೆ, ಯಶಸ್ಸಿಗೆ ಪರಿಶ್ರಮ ಅತ್ಯಗತ್ಯ. ಅದೇ ರೀತಿ, ಯೂಟ್ಯೂಬ್ನಲ್ಲಿ ಚಂದಾದಾರರನ್ನು ಹೆಚ್ಚಿಸಲು, ನೀವು ನಿರಂತರವಾಗಿ ನಿಮ್ಮ ಚಾನಲ್‌ಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರಬೇಕು. ಯೂಟ್ಯೂಬ್ನಲ್ಲಿ ಯಾವ ವಿಷಯದ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದೀರೊ, ಅದರಲ್ಲಿ ಕ್ರಿಯಾಶೀಲರಾಗಿರಬೇಕು. ವಾರದಲ್ಲಿ ಕನಿಷ್ಠ 3 ವಿಡಿಯೋಗಳನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಲೇಬೇಕು.
ನಿಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಉತ್ತಮ ಗುಣಮಟ್ಟದ ಮಾಹಿತಿಯನ್ನು ಒದಗಿಸಬೇಕು. ನೀವು ವಿಡಿಯೋವನ್ನು ಪೋಸ್ಟ್ ಮಾಡಿದಾಗ ಅದರ ಗುಣಮಟ್ಟಕ್ಕೆ ವಿಶೇಷ ಗಮನ ನೀಡಿ. ಅದು ನಿಮ್ಮ ಚಾನಲ್ ಅನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ಹಾಗಾಯೆ ಹೈ ಕ್ವಾಲಿಟಿಯಲ್ಲಿ ಹಂಚಿಕೊಳ್ಳಿ.
ನೀವು ಯೂಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಿ ಅದರಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿಬಿಟ್ಟರೆ ಸಾಲದು. ನಿಮ್ಮ ನೆಟ್‌ವರ್ಕಿಂಗ್ ವಿಸ್ತಾರವಾಗಿರಬೇಕು. ಇದಕ್ಕಾಗಿ ನೀವು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋವನ್ನು ಶೇರ್ ಮಾಡಬೇಕು. ನೀವು ಎಷ್ಟು ಜನರಿಗೆ ಹತ್ತಿರವಾಗುತ್ತೀರೊ ಅಷ್ಟು ಚಂದಾದಾರರನ್ನು ಪಡೆಯುತ್ತೀರಿ.
ನಿಮ್ಮ ಯೂಟ್ಯೂಬ್ ಚಾನಲ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ರಚಿಸಿದ್ದರೆ, ನೀವು ಅಧ್ಯಯನ ಮಾಡಬೇಕು. ಅಲ್ಲದೆ ಇತರರಿಗಿಂತ ಭಿನ್ನವಾದ ಮಾಹಿತಿ ನೀಡಬೇಕು. ಹಾಗಾದಾಗ ಜನರು ನೋಡಲು ಇಷ್ಟಪಟ್ಟು ಸಬ್ಸ್ರೈಬ್ ಆಗುತ್ತಾರೆ. ನೀವು ಅಡುಗೆ ಚಾನೆಲ್ ಅನ್ನು ಪ್ರಾರಂಭಿಸಿದ್ದರೆ, ಅಲ್ಲಿ ಕೇವಲ ಅಡುಗೆ ಮಾಡುವ ವಿಡಿಯೋ ಮಾತ್ರವಲ್ಲ ಅದರ ಜೊತೆಗೆ ವಿಭಿನ್ನ ಸಲಹೆಗಳನ್ನು ನೀಡಬೇಕು. ಹೀಗಾದಾಗ ನಿಮ್ಮ ಯೂಟ್ಯೂಬ್ ಚಾನೆಲ್ ಕ್ಲಿಕ್ ಆಗುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1