Tech Tips: ನಿಮ್ಮ ಬಳಿಯೂ ಕೂಡ ಹಳೆ ಸ್ಮಾರ್ಟ್ ಫೋನ್ ಇದ್ದು, ಇಂಟರ್ನೆಟ್ ವೇಗ ಸರಿಯಾಗಿ ಸಿಗುತ್ತಿಲ್ಲ ಎಂದಾದರೆ, ಅದಕ್ಕಾಗಿ ನಾವು ನಿಮಗೆ ಸುಲಭವಾದ ಮಾರ್ಗವೊಂದನ್ನು ಹೇಳಿಕೊಡಲಿದ್ದೇವೆ.

Tech Tips And Hacks: ನೀವೂ ಕೂಡ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಇಂಟರ್ನೆಟ್ ಬಳಸುತ್ತಿದ್ದು, ಹಳೆ ಫೋನ್ ಇರುವ ಕಾರಣ ನಿಮಗೆ ಇಂಟರ್ನೆಟ್ ವೇಗ ಸಿಗುತ್ತಿಲ್ಲ ಎಂದಾದರೆ ನೀವು ಚಿಂತಿಸಬೇಕಾಗಿಲ್ಲ ಅಥವಾ ಸ್ಮಾರ್ಟ್‌ಫೋನ್ ರಿಪೇರಿ ಮಾಡಿಸುವ ಅವಶ್ಯಕತೆ ಇಲ್ಲ. ಏಕೆಂದರೆ ನಾವು ನಿಮಗೆ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಟ್ರಿಕ್ ವೊಂದನ್ನು ಹೇಳಿಕೊಡಲಿದ್ದೇವೆ, ಈ ಟ್ರಿಕ್ ಬಳಸಿ ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಇಂಟರ್ನೆಟ್‌ನ ವೇಗವನ್ನು ಹೆಚ್ಚಿಸಬಹುದು. ಇದಕ್ಕಾಗಿ ನೀವು ಹಣವೂ ಕೂಡ ಖರ್ಚು ಮಾಡುವ ಅವಶ್ಯಕತೆ ಇಲ್ಲ ಅಥವಾ ಹೊಸ ಸ್ಮಾರ್ಟ್‌ಫೋನ್ ಕೂಡ ಖರೀದಿಸಬೇಕಾಗಿಲ್ಲ. ಹಾಗಾದರೆ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಮಾರ್ಗಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ಗಡುಸಾದ ಕವರ್ ಬಳಸುವುದನ್ನು ತಪ್ಪಿಸಿ
ಸ್ಮಾರ್ಟ್‌ಫೋನ್ ಅನ್ನು ಸುರಕ್ಷಿತವಾಗಿರಿಸಲು ನೀವೂ ಕೂಡ ಅದರ ಮೇಲೆ ಗಡುಸಾದ ಅಥವಾ ಕಠಿಣವಾದ ಕವರ್ ಬಳಸುತ್ತಿದ್ದರೆ, ಅದನ್ನು ತೆಗೆದುಹಾಕಿ. ಸ್ಮಾರ್ಟ್ ಫೋನ್ ಗೆ ಕವರ್ ಬಳಸುವುದು ಒಳ್ಳೆಯ ಅಭ್ಯಾಸ. ಆದರೆ. ಹಾರ್ಡ್ ಕವರ್ ಸ್ಮಾರ್ಟ್‌ಫೋನ್‌ನಲ್ಲಿ ಸಿಗ್ನಲ್ ನಿರ್ಬಂಧಿಸಲು ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಬಳಕೆದಾರರು ಅದರ ಬಳಕೆಯನ್ನು ತಪ್ಪಿಸಬೇಕು ಮತ್ತು ಅದರ ಬದಲಿಗೆ ತೆಳುವಾದ ಮತ್ತು ಉತ್ತಮವಾಗಿರುವ ಕವರ್ ಬಳಸಿ.
ಮುಚ್ಚಿದ ಕೋಣೆಯಲ್ಲಿ ನೆಟ್ ಬಳಸಬೇಡಿ
ನೀವು ಮುಚ್ಚಿದ ಕೋಣೆಯಲ್ಲಿ ಕುಳಿತು ಇಂಟರ್ನೆಟ್ ಬಳಸುತ್ತಿದ್ದರೆ, ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗ ಬರದೆ ಇರುವುದಕ್ಕೆ ಒಂದು ದೊಡ್ಡ ಕಾರಣವಾಗಿದೆ. ಮುಚ್ಚಿದ ಕೋಣೆಯಲ್ಲಿ ಸಿಗ್ನಲ್ ಪ್ರವೇಶಿಸುವುದಕ್ಕೆ ಅಡೆತಡೆ ಉಂಟಾಗುತ್ತವೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ನೀವು ಉತ್ತಮ ವೇಗವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ.
ಹ್ಯಾಂಡ್ ಪ್ಲೆಸಿಂಗ್ ಕುರಿತು ನಿಮಗೆ ತಿಳಿದಿರಬೇಕು
ಸ್ಮಾರ್ಟ್‌ಫೋನ್ ಬಳಸುವಾಗ ಅದನ್ನು ತಪ್ಪಾಗಿ ಹಿಡಿಯಬೇಡಿ. ಸ್ಮಾರ್ಟ್‌ಫೋನ್ ಅನ್ನು ಮೇಲ್ಭಾಗದಲ್ಲಿ ಹಿಡಿಯುವುದರಿಂದ ಹಲವು ಬಾರಿ ನೆಟ್‌ವರ್ಕ್ ವೇಗ ಕಡಿಮೆ ಆಗುತ್ತದೆ ಮತ್ತು ನೀವು ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ ಅಥವಾ ನಿಧಾನ ಗತಿಯಲ್ಲಿ ಇಂಟರ್ನೆಟ್ ನಿಮ್ಮ ಫೋನ್ ಗೆ ತಲುಪಲಿದೆ.
ಆಪ್ಟಿಮೈಸೇಶನ್ ಅಗತ್ಯ
ನೀವು ಕಾಲಕಾಲಕ್ಕೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಆಪ್ಟಿಮೈಜ್ ಮಾಡಿ, ಇದು ನಿಮ್ಮ ಸ್ಮಾರ್ಟ್ ಫೋನ್ ಇಂಟರ್ನೆಟ್‌ನ ವೇಗವನ್ನು ಹೆಚ್ಚಿಸುತ್ತದೆ ಮತ್ತು ನೀವು ಅದನ್ನು ಹೆಚ್ಚಿನ ವೇಗದಲ್ಲಿ ಆನಂದಿಸಬಹುದು. ಹೀಗಾಗಿ ನಿಮ್ಮ ಸ್ಮಾರ್ಟ್ಫೋನ್ ಹಳೆಯದಾಗಿರಲಿ ಅಥವಾ ಹೊಸದಾಗಿರಲಿ, ಕಾಲಕಾಲಕ್ಕೆ ಅದನ್ನು ಆಪ್ಟಿಮೈಸ್ ಮಾಡಲು ಮರೆಯಬೇಡಿ.