
Airplane Mode Internet: ಫ್ಲೈಟ್ ಮೋಡ್‌ನಲ್ಲಿರುವ ಫೋನ್‌ನಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸುವುದಿಲ್ಲ ಎಂದು ನೀವು ನಂಬಿದ್ದರೆ, ಈ ಸುದ್ದಿ ನಿಮಗಾಗಿ. ಮೊಬೈಲ್ ಫ್ಲೈಟ್ ಮೋಡ್‌ನಲ್ಲಿರುವಾಗಲೂ ನೀವು ಇಂಟರ್ನೆಟ್ ಅನ್ನು ಉಪಯೋಗಿಸಬಹುದು. ಏರ್‌ಪ್ಲೇನ್ ಮೋಡ್‌ನಲ್ಲಿ ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಅನ್ನು ಹೇಗೆ ಆನ್ ಮಾಡುವುದು ಎಂದು ಇಲ್ಲಿ ತಿಳಿಯಿರಿ.
ಅರೇ… ಏರ್‌ಪ್ಲೇನ್ ಮೋಡ್ ಆನ್ ಮಾಡಿ ಇಂಟರ್ನೆಟ್ ಅನ್ನು ಹೇಗೆ ಉಪಯೋಗ ಮಾಡುವುದು ಎಂದು ನೀವು ಯೋಚಿಸುತ್ತಿರುವಿರಿ. ಸ್ಮಾರ್ಟ್‌ಫೋನ್(Smartphone) ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇಟ್ಟರೆ ನಿಮಗೆ ಮೊಬೈಲ್‌ನಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಏರ್‌ಪ್ಲೇನ್ ಮೋಡ್ ಆನ್ ಇದ್ದರೆ ಅನೇಕ ಪ್ರಮುಖ ಕಾರ್ಯಗಳು ಆಗುವುದಿಲ್ಲ. ಇಮೇಲ್ ಕಳುಹಿಸಲು ಸಾಧ್ಯವಾಗುವುದಿಲ್ಲ. ಪ್ರಮುಖ ಸಂದೇಶಗಳು ಸೆಂಡ್ ಆಗಲ್ಲ. ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ವೀಕ್ಷಿಸಲು ಆಗುವುದಿಲ್ಲ. ನಿಮಗೆ ಯಾವುದೇ ಸಾಮಾಜಿಕ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯ ಆಗಲ್ಲ. ಆದರೆ, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿಯೇ ನೀವು ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು. ಅದು ಹೇಗೆ ನೋಡಿ.
- ಮೊದಲನೆಯದಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನ ಗೂಗಲ್ ಪ್ಲೇ ಸ್ಟೋರ್ನಿಂದ ನೀವು Force LTE Only (4G/5G) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
- ಈ ಆಯಪ್ ಡೌನ್‌ಲೋಡ್ ಮಾಡಿದ ನಂತರ ನೀವು ಅದನ್ನು ನಿಮ್ಮ ಮೊಬೈಲ್‌ನಲ್ಲಿ ಇನ್ಸ್ಟಾಲ್ ಮಾಡಬೇಕು.
- ಒಮ್ಮೆ ಈ ಆಯಪ್ ಇನ್ಸ್ಟಾಲ್ ಮಾಡಿಕೊಂಡರೆ ನಿಮ್ಮ ಮುಂದೆ 4 ಆಯ್ಕೆಗಳು ಕಾಣಿಸುತ್ತವೆ.
- ಇದರಲ್ಲಿ ಎರಡನೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ METHOD2:(ANDROID 11+).
- ನಂತರ ನಿಮ್ಮ ಫೋನ್ ಮಾಹಿತಿಗೆ ಹೋಗಿ, ಮೊಬೈಲ್ ರೇಡಿಯೋ ಪವರ್ ಆಯ್ಕೆಯನ್ನು ಆರಿಸಿ.
- ಇಲ್ಲಿ ಮೊಬೈಲ್ ರೇಡಿಯೋ ಪವರ್ ಆಯ್ಕೆಯನ್ನು ಸಕ್ರಿಯಗೊಳಿಸಿ.
- ನಂತರ ನಿಮ್ಮ ಮೊಬೈಲ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನೀವು ಅಚ್ಚರಿಯನ್ನು ನೋಡುತ್ತೀರಿ. ನಿಮ್ಮ ಸ್ಮಾರ್ಟ್‌ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರುತ್ತದೆ. ಆದರೆ ಅದರಲ್ಲಿರುವ ಡೇಟಾ ಆನ್ ಆಗಿರುತ್ತದೆ. ಈಗ ನೀವು ನಿಮ್ಮ ನೆಚ್ಚಿನ ಸೈಟ್‌ಗೆ ನೀವು ಹೋಗಬಹುದು. ವಾಟ್ಸ್ಆಯಪ್ ಸೇರಿದಂತೆ ಹಲವಾರು ಸಾಮಾಜಿಕ ಅಪ್ಲಿಕೇಶನ್‌ಗಳನ್ನು ಬ್ರೌಸ್ ಮಾಡಬಹುದು. ಯೂಟ್ಯೂಬ್ನಲ್ಲಿ ನಿಮ್ಮ ಮೆಚ್ಚಿನ ವಿಡಿಯೋಗಳನ್ನು ವೀಕ್ಷಿಸಬಹುದು. ಯಾವುದೇ ಕಚೇರಿ ಕೆಲಸಗಳಿದ್ದರೆ, ಇಂಟರ್ನೆಟ್ ಮೂಲಕ ಮೊಬೈಲ್‌ನಲ್ಲಿ ಪೂರ್ಣಗೊಳಿಸಬಹುದು.
ಈ ಅಪ್ಲಿಕೇಶನ್ಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ 4.4 ರೇಟಿಂಗ್ ಹೊಂದಿದೆ. ಇದುವರೆಗೆ 10 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು ಆಯಪ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ಅಪ್ಲಿಕೇಶನ್ ನೆಟ್‌ವರ್ಕ್ 4G/3G/2G ನಡುವೆ ಬದಲಾಯಿಸಲು ಮತ್ತು ಆಯ್ಕೆ ಮಾಡಲು ಅನುಮತಿಸುತ್ತದೆ. ಆದರೆ ಫೋರ್ಸ್ LTE ಅಪ್ಲಿಕೇಶನ್ ಎಲ್ಲ ಸ್ಮಾರ್ಟ್ಫೋನ್ಗಳನ್ನು ಕೆಲಸ ಮಾಡುವುದಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರ್ಯಾಂಡ್ ಮೇಲೆ ಇದು ನಿರ್ಧಾರವಾಗಿದೆ. ಕೆಲವು ಬ್ರ್ಯಾಂಡ್‌ಗಳು ನೆಟ್‌ವರ್ಕ್ ಸ್ವಿಚ್ ಆಯ್ಕೆಯನ್ನು ಆಫ್ ಮಾಡುತ್ತವೆ, ಆದ್ದರಿಂದ ಈ ಅಪ್ಲಿಕೇಶನ್ ಅವುಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1