ಭಾರತದ ಮೊದಲ ಹಳ್ಳಿ ಕೌರಿಕ್, ಗುಯೇಗೆ ಮೊದಲ ಬಾರಿಗೆ ತಲುಪಿದೆ ಟೆಲಿಕಾಂ ಕನೆಕ್ಟಿವಿಟಿ

ನವದೆಹಲಿ, ಏಪ್ರಿಲ್ 18: ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ (Kaurik and Guea) ಈಗ ದೂರಸಂಪರ್ಕ ಜಾಲ (telecom connectivity) ತಲುಪಿದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪೀತಿ ಜಿಲ್ಲೆಯಲ್ಲಿ (Lahaul and Spiti district) ಸಮುದ್ರ ಮಟ್ಟದಿಂದ 14,931 ಅಡಿ ಎತ್ತರದಲ್ಲಿ ಈ ಹಳ್ಳಿಗಳಿವೆ. ಲಾಹೋಲ್ ಸ್ಪೀತಿ ಜಿಲ್ಲೆಯಲ್ಲಿನ ಭಾರತದ ಮೊದಲ ಹಳ್ಳಿಗಳಾದ ಕೌರಿಕ್ ಮತ್ತು ಗುಯೇಗೆ ಟೆಲಿಕಾಂ ಕನೆಕ್ಟಿವಿಟಿ ಸಿಕ್ಕಿರುವ ಸಂಗತಿಯಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆ ತನ್ನ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದೆ.

ಕೌರಿಕ್ ಎಂಬ ಹಳ್ಳಿಯು ಟಿಬೆಟ್ ಗಡಿ ಭಾಗದ ಸಮೀಪ ಇದೆ. ಸ್ಪೀತಿ ನದಿಯನ್ನು ತಲುಪುವ ಪರಂಗ್ ಅರ್ಥಾತ್ ಪರೆ ಚು ನದಿಯ ಕಣಿವೆಯಲ್ಲಿ ಈ ಹಳ್ಳಿ ಇದೆ. ಇನ್ನು, ಗುಯೆ ಗ್ರಾಮವು ಸ್ಪೀತಿ ನದಿ ಕಣಿವೆಯಲ್ಲಿರುವ ಒಂದು ಹಳ್ಳಿಯಾಗಿದೆ. ಚೀನಾದ ಗಡಿಭಾಗದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಗುಯೇ ಗ್ರಾಮ ಇದೆ. ಪ್ರಖ್ಯಾತ ಟಾಬೋ ಮಾನಸ್ಟರಿಯಿಂದ 40 ಕಿಮೀ ದೂರದಲ್ಲಿ ಇದು ಇರುವುದು.

ಕೆಲ ವರದಿಗಳ ಪ್ರಕಾರ 1975ರಲ್ಲಿ ಸ್ಪೀತಿಯಲ್ಲಿ ಭೂಕಂಪ ಸಂಭವಿಸಿತ್ತು. ಆಗ ಸಂಘಾ ತೆನ್​ಜಿನ್ ಹೆಸರಿನ ಬೌದ್ಧ ಬಿಕ್ಷುವೊಬ್ಬರ ಸಂರಕ್ಷಿತ ದೇಹ ಪತ್ತೆಯಾಗಿತ್ತು. ಆಗ ಜನರಿಗೆ ಇಂಥದ್ದೊಂದು ಗ್ರಾಮ ಅಸ್ತಿತ್ವದಲ್ಲಿತ್ತು ಎಂಬುದು ಗೊತ್ತಾಗಿತ್ತು. ಸುಮಾರು 25 ವರ್ಷ ಕಾಲ ಸ್ಥಳೀಯರು ಮತ್ತು ಐಟಿಬಿಪಿ ಅರೆಸೇನಾ ಪೊಲೀಸ್ ಪಡೆ ಈ ಗ್ರಾಮದ ಬಗ್ಗೆ ರಹಸ್ಯ ಪಾಲನೆ ಮಾಡಿದ್ದರು. 2000ರ ಇಸವಿ ಬಳಿಕ ಗುಯೇ ಗ್ರಾಮ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳಗಳಲ್ಲೊಂದೆನಿಸಿದೆ.

ದೂರಸಂಪರ್ಕ ಇಲಾಖೆ ಮಾಡಿದ ಟ್ವೀಟ್

ಇವತ್ತು ಗುಯೇ ಗ್ರಾಮದ ಪರ್ವತದ ಮೇಲೆ 10X10 ಅಡಿಯ ಸಣ್ಣ ಕೋಣೆಯ ಗಾಜಿನ ಪೆಟ್ಟಿಗೆಯೊಳಗೆ ಇರಿಸಲಾಗಿದೆ. ಈಗಲೂ ಕೂಡ ಗುಯೇ ಗ್ರಾಮದಲ್ಲಿ ಐಟಿಬಿಪಿ ಪಡೆಗಳು ಭದ್ರತೆ ನೀಡುತ್ತಿವೆ. ಗುಯೇ ರೀತಿಯಲ್ಲಿ ಕೌರಿಕ್ ಗ್ರಾಮ 25 ವರ್ಷದ ಹಿಂದೆ ಭೂಕಂಪ ಮತ್ತು ಪ್ರವಾಹದ ಕಾರಣ ನಿರ್ಜನ ಪ್ರದೇಶವಾಗಿ ಹೋಗಿತ್ತು. ಎಲ್ಲಾ ಜನರು ಬೇರೆಡೆಗೆ ವಲಸೆ ಹೋಗಿದ್ದರು. ಇವತ್ತು ಹಿಂದಿನ ಹಳ್ಳಿಯನ್ನು ನೆನಪಿಸುವ ಹಾಳಾದ ಮನೆ, ರಸ್ತೆ ಇತ್ಯಾದಿ ಕುರುಹುಗಳನ್ನು ಮಾತ್ರ ಕಾಣಬಹುದು. ಈ ಪ್ರದೇಶವೂ ಕೂಡ ಇಂಡೋ ಟೆಬೇಟನ್ ಬಾರ್ಡರ್ ಪೊಲೀಸ್ ಪಡೆಗಳ ಸುಪರ್ದಿಯಲ್ಲಿದೆ.

Source : https://tv9kannada.com/business/telecom-connectivity-reaches-villages-in-himachal-pradesh-above-14931-ft-from-sea-level-snvs-817858.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *