
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 20 ಬೆಸ್ಕಾಂನ ನಿವೃತ್ತ ಅಸಿಸ್ಟಂಟ್ ಎಕ್ಯೂಟಿವ್ ಇಂಜಿನಿಯರ್ ಟಿ.ಜಿ.ರಾಜಶೇಖರಪ್ಪ (94)ಇಂದು ಮಧ್ಯಾಹ್ನ 4 ಗಂಟೆಗೆ ಭೀಮಸಮುದ್ರದ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಆಪಾರವಾದ ಬಂಧು-ಬಳಗವನ್ನು ಆಗಲಿದ್ದಾರೆ. ಮೃತರು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಟಿ.ಜಿ.ನರೇಂದ್ರನಾಥ್ ರವರ ತಂದೆಯವರಾಗಿದ್ದಾರೆ.
ಮೃತರ ಅಂತ್ಯಕ್ರಿಯೆಯೂ ಜೂ. 21ರ ಮಧ್ಯಾಹ್ನ 12 ಗಂಟೆಗೆ ಭೀಮಸಮುದ್ರದ ಅವರ ತೋಟದಲ್ಲಿ ನಡೆಯಲಿದೆ.
ಸಂತಾಪ : ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಟಿ.ಜಿ.ನರೇಂದ್ರನಾಥ್ ರವರ ತಂದೆಯವರಾದ ಟಿ.ಜಿ.ರಾಜ ಶೇಖರಪ್ಪರವರ ನಿಧನಕ್ಕೆ ಕೇಂದ್ರ ಸರ್ಕಾರದ ಮಾಜಿ ಸಚಿವರಾದ ಜಿ.ಎಂ.ಸಿದ್ದೇಶ್ವರ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.