ಚಿತ್ರದುರ್ಗದಲ್ಲಿ ಶ್ರೀ ಪ್ರಸನ್ನ ಸೇವಾ ಗಣಪತಿಯ 68ನೇ ವರ್ಷಾಚರಣೆ ಸಮಾರೋಪ.

ಚಿತ್ರದುರ್ಗ ಸೆ. 6

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ನಗರದ ಆನೆ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಸೇವಾ ಗಣಪತಿಯ 68ನೇ ವರ್ಷಾಚಾರಣೆಯ ಕಾರ್ಯಕ್ರಮದ ಸಮಾರೋಪ ಸಮಾರಂಭವೂ ನಿನ್ನೆ ರಾತ್ರಿ ನಡೆಯಿತು.


ಈ ಸಮಾರಂಭಕ್ಕೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ ಬಾಲ ಗಂಗಾಧರ ತಿಲಕ್ ರವರು ಸ್ವಾತಂತ್ರ್ಯ ಪೂರ್ವದಲ್ಲಿ ಜನರನ್ನು ಒಟ್ಟುಗೂಡಿಸಲಿ ಗಣೇಶನನ್ನು ಕುರಿಸುವುದರ ಮೂಲಕ ಸಂಘಟನೆಯನ್ನು ಮಾಡಿದರು.

ಅದು ಇಲ್ಲಿಯವರೆಗೂ ನಿರಂತರವಾಗಿ ನಡೆಯುತ್ತಾ ಬಂದಿದೆ ಅಂದು ಒಂದೇ ಒಂದು ಕಡೆ ಮಾತ್ರ ಗಣೇಶನನ್ನು ಕೂರಿಸಲಾಗುತ್ತಿತ್ತು ಆದರೆ ಈಗ ಗಲ್ಲಿ-ಗಲ್ಲಿಗಳಲ್ಲಿ ಗಣೇಶನನ್ನು ಕೂರಿಸುವುದರ ಮೂಲಕ ಪೂಜೆಯನ್ನು ಮಾಡಿ 3,5,9,11,ದಿನಗಳಲ್ಲಿ ವಿಸರ್ಜನೆಯನ್ನು ಮಾಡಲಾಗುತ್ತಿದೆ ಅಂದು ತಿಲಕ್ ರವರು ಒಂದು ಒಳ್ಳೆಯ ಉದ್ದೇಶದಿಂದ ಪ್ರಾರಂಭವಾದ ಗಣೇಶ ಉತ್ಸವ ಇಂದು ಧಾರ್ಮಿಕ ಹಬ್ಬವಾಗಿ ರೂಪುಗೊಂಡಿದೆ, ಜನತೆಯೂ ಸಹಾ ಶ್ರದ್ದಾ ಭಕ್ತಿಯಿಂದ ಗಣೇಶನನ್ನು ಕೂರಿಸಿ ಪೂಜೆಯನ್ನು ಸಲ್ಲಿಸಿ ಅನ್ನ ಸಂತರ್ಪಣೆಯನ್ನು ಮಾಡಿ ವಿಸರ್ಜನೆಯನ್ನು ಮಾಡಲಿದ್ದಾರೆ ಎಂದರು.


ಚಿತ್ರದುರ್ಗದಲ್ಲಿ ಪ್ರಥಮ ಬಾರಿಗೆ ಶ್ರೀ ಪ್ರಸನ್ನ ಗಣಪತಿಯನ್ನು ನಮ್ಮ ಹಿರಿಯರು ಸ್ಥಾಪನೆ ಮಾಡುವುದರ ಮೂಲಕ ಇಂದಿನ ಯುವ ಪೀಳಿಗೆ ಅದನ್ನು ಮುಂದುವರೆಸಿಕೊಂಡು ಬರುತ್ತಿದೆ ಇಂದಿಗೆ 68 ವರ್ಷಗಳಾಗಿವೆ ಇದು 75, 100 ವರ್ಷ ಪೂರೈಸಲಿ ಎಂದರು.


ಬಿಜೆಪಿ ಮುಖಂಡರಾದ ಅನಿತ್ ಕುಮಾರ್ ಮಾತನಾಡಿ, ವಿನಾಯಕ ನಮ್ಮಲ್ಲರ ಆರಾಧ್ಯ ದೇವರಾಗಿದ್ಧಾನೆ, ನಾವು ಎನೇ ಕೆಲಸವನ್ನು ಪ್ರಾರಂಭ ಮಾಡಬೇಕಾದರೂ ಸಹಾ ಮೊದಲಿಗ ವಿನಾಯಕನ ಪೂಜೆಯನ್ನು ಮಾಡಿ ನಮ್ಮ ಕಾರ್ಯವನ್ನು ಪ್ರಾರಂಭ ಮಾಡುತ್ತೇವೆ ನಮ್ಮ ಇಷ್ಟಾರ್ಥಗಳನ್ನು ಈಡೇರೇಸುವಂತೆ ಭಗವಂತನಲ್ಲಿ ಬೇಡುತ್ತೇವೆ, ಭಗವಂನೂ ಸಹಾ ಅದನ್ನು ಈಡೇರಿಸುತ್ತಾನೆ ನಾವು ಭಗವಂತನಲ್ಲಿ ನಂಬಿಕೆಯನ್ನು ಇಟ್ಟರೆ ಅತ ಅದನ್ನು ಉಳಿಸಿಕೊಂಡು ನಮ್ಮ ಆಸೆಗಳನ್ನು ಈಡೇರಿಸುತ್ತಾನೆ ಎಂದರು.


ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಮಿತಾ ರಾಘವೇಂದ್ರ, ಶ್ರೀ ಪ್ರಸನ್ನ ಸೇವಾ ಗಣಪತಿಯ ಕಾರ್ಯಾಧ್ಯsಕ್ಷರಾದ ಗೋಪಾಲರಾವ್ ಜಾಧವ್, ಉಪಾಧ್ಯಕ್ಷರಾದ ಎಲ್.ಎನ್.ರಾಜಕುಮಾರ, ಜಿ.ಎಂ.ನಾಗರಾಜ್ ಬೇದ್ರೇ, ಪ್ರಧಾನ ಕಾರ್ಯದರ್ಶಿ ಪಿ.ಎಲ್.ಶಿವಕುಮಾರ್, ಖಂಜಾಚಿ ಆನಂದ್,ಸಹ ಕಾರ್ಯದರ್ಶಿ ಶ್ಯಾಂ ಪ್ರಸಾದ್ ಸ್ಥಪತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 29

Leave a Reply

Your email address will not be published. Required fields are marked *