
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ| ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ. ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಬಹಳ ಸಡಗರದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಕಾರ್ಯದರ್ಶಿಗಳಾದ ಡಾ. ವಿ ಆರ್ ಪ್ರಶಾಂತ್ ರವರ ಅನುಪಸ್ಥಿತಿಯಲ್ಲಿ ಆಡಳಿತ ಅಧಿಕಾರಿಗಳಾದ ವಿಎಲ್ ಪ್ರವೀಣ್ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಗೌರಿ ರಿಯಲ್ ಪ್ರಶಾಂತ್ ರವರು ಹಾಗೂ ಶ್ರೀಮತಿ ಕಾವ್ಯ ವಿ ಎಲ್ ಪ್ರವೀಣ್ ರವರು ಮುಖ್ಯೋಪಾಧ್ಯಾಯರಾದ ಮಹಾಂತೇಶ್ ರವರು ಕೋಆರ್ಡಿನೇಟರ್ ಆದಂತಹ ಶ್ರೀ ಲಕ್ಷ್ಮಿ ದೇಸಾಯಿ ಅವರು ಮತ್ತು ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿ ವರ್ಗದವರು ಪುಟಾಣಿ ಮಕ್ಕಳು ಭಾಗವಹಿಸಿದ್ದರು.