ಮಾಜಿ ಮುಖ್ಯಮಂತ್ರಿ ದೇವರಾಜ್ ಆರಸುರವರ 110ನೇ ಹಾಗೂ ಮಾಜಿ ಪ್ರಧಾನ ಮಂತ್ರಿ ರಾಜೀವಗಾಂಧಿಯವರ 81ನೇ ಜನ್ಮ ದಿನಾಚರಣೆ.

ಚಿತ್ರದುರ್ಗ ಆ. 20

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ದೇಶಕ್ಕೆ ಈಗ ತಂತ್ರಜ್ಞಾನ ಬಂದಿದೆ ಎಂದರೆ ಅದು ಮಾಜಿ ಪ್ರಧಾನ ಮಂತ್ರಿ ರಾಜೀವಗಾಂಧಿಯವರ ಕೊಡುಗೆ ಅದೇ ರೀತಿಹಿಂದುಳಿದ ವರ್ಗದವರಿಗೆ ಈಗ ಧ್ವನಿ ಬಂದಿದೆ ಎಂದರೆ ಅದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರವರ ಕೊಡುಗೆಯಾಗಿದೆ ಎಂದು ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ತಿಳಿಸಿದರು.


ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಹಿಂದುಳಿದ ವರ್ಗಗಳ ವಿಭಾಗ ಮತ್ತು ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆಯವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ್ ಆರಸುರವರ 110ನೇ ಹಾಗೂ ಮಾಜಿ ಪ್ರಧಾನ ಮಂತ್ರಿ ರಾಜೀವಗಾಂಧಿಯವರ 81ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ದೇಶಕ್ಕೆ ಹಲವಾರು ರೀತಿಯ ಕೂಡುಗೆಯನ್ನು ನೀಡಿದೆ.


ಇಂದಿರಾಗಾಂಧಿಯವರ ಮರಣದ ನಂತರ ಅಧಿಕಾರಕ್ಕೆ ಬಂದ ರಾಜೀವಗಾಂಧಿಯವರು ನನ್ನ ದೇಶ ಬೇರೆ ದೇಶಗಳಿಗಿಂತ ವಿಭೀನ್ನವಾಗಿ ಇರಬೇಕು ಎಂದು ಆಸೆಯನ್ನು ಪಟ್ಟವರು ಇದೆರ ಪರಿಣಾಮವಾಗಿ ದೇಶದಲ್ಲಿ ಕಂಪ್ಯೂಟರ್ ಬಂದಿತು, ಇದ್ದಲ್ಲದೆ 21 ವರ್ಷಕ್ಕೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸುವುದರ ಮೂಲಕ ಯುವ ಜನೆತಯೂ ಸಹಾ ದೇಶದ ಪ್ರಗತಿಯಲ್ಲಿ ಭಾಗಿಯಾಗಲಿ ಎಂದು ಆಶಿಸಿದರು. ಅಂದು ಕಾಂಗ್ರೆಸ್ ಸರ್ಕಾರ ನೀಡಿದ ವಿವಿಧ ಯೋಜನೆಗಳ ಫಲಾನುಭವಿಗಳು ನಾವಾಗಿದ್ದೇವೆ ಎಂದರು.


ಹಿಂದಿನ ದಿನದಲ್ಲಿ ಗ್ರಾಮಾಂತರ ಜನತೆಗೆ ರಾಜಕೀಯವಾಗಿ ಯಾವುದೇ ಪ್ರಾತಿನಿಧ್ಯ ಇರಲಿಲ್ಲ ಈ ಸಮಯದಲ್ಲಿ
ರಾಜೀವಗಾಂಧಿಯವರು ಪಂಚಾಯತ್ ರಾಜ್‍ನ್ನು ಜಾರಿ ಮಾಡುವುದರ ಮೂಲಕ ಗ್ರಾ.ಪಂ.ತಾ.ಪಂ. ಹಾಗೂ ಜಿ.ಪಂ.ಗಳನ್ನು ರಚನೆ ಮಾಡುವುದರ ಮೂಲಕ ಗ್ರಾಮಾಂತರ ಜನ ರಯ ಸಹಾ ರಾಜಕೀಯವಾಗಿ ಬರುವಂತೆ ಮಾಡಿದ ಕೀರ್ತಿ ಅವರಿಗೆ ಸಲುತ್ತದೆ ಎಂದು ತಿಳಿಸಿದ ತಾಜ್‍ಪೀರ್ ಇತ್ತಿಚಿನ ದಿನಮಾನದಲ್ಲ ನಮ್ಮ ಮಗಳು ಕಳ್ಳತನವಾಗುತ್ತಿವೆ ಇದನ್ನು ಬಿಜೆಪಿ ಮಾಡಿಸುತ್ತಿದೆ ಇದರಿಂದ ಅದು ಅಧಿಕಾರಕ್ಕೆ ಬರುತ್ತಿದೆ ಇದರ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಸಾಕ್ಷಿ ಸಮೇತ ಆಯೋಗಕ್ಕೆ ದೂರು ನೀಡಿದ್ದಾರೆ ಇದರ ನಾವು ಸಹಾ ಎಚ್ಚತ್ತೆ ಕೊಳ್ಳಬೇಕಿದೆ ನಮ್ಮ ಮತಗಳು ನಮ್ಮ ಬಳಿ ಇದ್ದೆಯೇ ಇಲ್ಲವೂ ನೋಡಬೇಕಿದೆ ನಮ್ಮ ಪಕ್ಷದ
ಕಾರ್ಯಕರ್ತರು ಇದರ ಬಗ್ಗೆ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಕರೆ ನೀಡಿದರು.


ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವರಾಜ್‍ಅರಸುರವರು ತಮ್ಮ ಆಡಳಿತದ ಅವಧಿಯಲ್ಲಿ ಉತ್ತಮವಾದ ಕಾರ್ಯವನ್ನು ಮಾಡಿದರು. ಹಿಂದುಳಿದ ವರ್ಗದವರಿಗೆ ಧ್ವನಿಯಾಗುವುದರ ಮೂಲಕ ಅವರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಅರ್ಥಿಕವಾಗಿ ಸಬಲರನ್ನಾಗಿ ಮಾಡಲು ಯೋಜನೆಗಳನ್ನು ರೂಪಿಸಿದರು. ಅರಸು ರವರು ಎಲ್ಲಾ ಹಿಂದುಳಿದ ವರ್ಗದವರ ಧ್ವನಿ ಎಂದರೆ ತಪ್ಪಾಗಲಾರದು ಎಂದರು.


ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ಅರಸು ರವರು ಶೋಷಿತರ ಪರವಾಗಿ ನಿಂತು ಉತ್ತಮವಾದ ಕೆಲಸವನ್ನು ತಮ್ಮ ಆಡಳಿತಾವಧಿಯಲ್ಲಿ ಮಾಡಿದ್ದಾರೆ, ಅವರು ಅಂದು ಶೋಷಿತರ ಪರವಾಗಿ ಕೆಲಸವನ್ನು ಮಾಡದಿದ್ದರೆ ಇಂದು ನಾವುಗಳು ಈ ರೀತಿಯಾಗಿ ನಿಂತು ಮಾತನಾಡಲು ಆಗುತ್ತಿರಲಿಲ್ಲ, ಚುನಾವಣೆಯ ಸಮಯದಲ್ಲಿ ಸಣ್ಣ, ಸಣ್ಣ ಸಮುದಾಯವನ್ನು ಗುರುತಿಸಿ ಅವರಿಗೆ ಟೀಕೇಟ್ ನೀಡುವುದರ ಮೂಲಕ ಅವರು ಸಹಾ ರಾಜಕೀಯವಾಗಿ ಬೆಳೆಯಲಿ ಎಂದು ಪ್ರೋತ್ಸಾಹಿಸಿದರು ಎಂದರು.

ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಡಾ,ಕೆ.ಅನಂತ್ ಮಾತನಾಡಿ, ರಾಜೀವಗಾಂಧಿಯವರ ರಾಜಕೀಯಕ್ಕೆ ಬಂದಿದ್ದು ಸಹಾ ಆಕಸ್ಮಿಕವಾಗಿ ಅವರ ತಾಯಿಯವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಪಕ್ಷದ ಮುಖಂಡರ, ಕಾರ್ಯಕರ್ತರ ಒತ್ತಾಯದ ಮೇರೆ ಬಂದವರಾಗಿದ್ದಾರೆ, ಪೈಲೆಂಟ್ ಆಗಿದ್ದ ಅವರು ತಮ್ಮ ಕರ್ತವ್ಯದ ಸಮಯದಲ್ಲಿ ಬೇರೆ ದೇಶಗಳನ್ನು ನೋಡಿದ್ದರು ಅದರಂತೆ ನಮ್ಮ ಭಾರತವೂ ಸಹಾ ಆಗಬೇಕೆಂದು ಕನಸನ್ನು ಕಂಡಿದ್ದರು, ತಾವು ದೇಶದ ಪ್ರಧಾನ ಮಂತ್ರಿಯಾದ ಮೇಲೆ ದೇಶವನ್ನು ಪ್ರಗತಿಯತ್ತ ಕೊಂಡ್ಯೂದರು. ಅವರ ಚುನಾವಣೆಯಲ್ಲಿ ಸ್ಪರ್ದೇ ಮಾಡಿದಾ ಕಾಂಗ್ರೆಸ್ ಪಕ್ಷ 404 ಲೋಕಸಭಾ ಸ್ಥಾನಗಳನ್ನು ಗಳಿಸಿತು. ಈ ಸಮಯದಲ್ಲಿ ದೇಶಕ್ಕೆ ಉತ್ತಮವಾದ ಕಾರ್ಯವನ್ನು ಮಾಡಿದರು ಎಂದರು.


ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ ಮಾತನಾಡಿ, ಪ್ರಪಂಚದಲ್ಲಿ ನನ್ನ ದೇಶವನ್ನು ಗುರುತಿಸಬೇಕೆಂದು ರಾಜೀವಗಾಂಧಿಯವರು ದೇಶಕ್ಕೆ ಕಂಪ್ಯೂಟರ್‍ನ್ನು ತಂದರು ಇದ್ದಲ್ಲದೆ ಈಗ ನಾವುಗಳು ಉಪಯೋಗ ಮಾಡುವಂತ ಮೋಬೈಲ್‍ನ್ನು ತಂದರು ಸಹಾ ಇವರೆ ಆಗಿದ್ದಾರೆ. ಪಂಚಾಯತ್ ರಾಜ್‍ಗೆ ಶಕ್ತಿಯನ್ನು ತುಂಬಿದವರು ಸಹಾ ಇವರೇ ಎಂದ ಅವರು, ರಾಜ್ಯದಲ್ಲಿ ಅಧಿಕಾರವನ್ನು ನಡೆಸಿದ ದೇವರಾಜ್ ಆರಸು ರವರು ಹಿಂದುಳಿದವರ ಧ್ವನಿಯಾಗಿ ಅವರಿಗೆ ಶಿಕ್ಷಣ ಹಾಗೂ ರಾಜಕೀಯವಾಗಿ ಸ್ಥಾನವನ್ನು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಉತ್ತಮವಾದ ಕೆಲಸವನ್ನು ಮಾಡಿದೆ, ಆದರೆ ಇದರ ಬಗ್ಗೆ ತಿಳಿಯದ ಬಿಜೆಪಿ, ಆರ್ ಎಸ್.ಎಸ್, ಸುಳ್ಳು ಹೇಳುವುದರ ಮೂಲಕ ಜನತೆ ದಾರಿಯನ್ನು
ತಪ್ಪಿಸುತ್ತಿದೆ. ಇದರ ಬಗ್ಗೆ ನಮ್ಮ ಪಕ್ಷದವರು ಎಚ್ಚರವಾಗಿ ಇರಬೇಕಿದೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ನಗರಸಭೆಯ ಮಾಜಿ ಅಧ್ಯಕ್ಷರುಗಳಾದ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಮಂಜಪ್ಪ, ಮಾಜಿ ಶಾಸಕರಾದ ಎ.ವಿ.ಉಮಾಪತಿ, ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ, ಅಂಜನಪ್ಪ, ಉಪಾಧ್ಯಕ್ಷರಾದ ರವಿಕುಮಾರ್, ಶಬ್ಬಿರ್ ತಿಪ್ಪೇಸ್ವಾಮಿ, ಮಧುಗೌಡ, ಮುನಿರಾ, ಗುರುರಾಜ್, ನಜ್ಮಾತಾಜ್, ಸುಧಮ್ಮ, ಲತಾಮಣಿ ಚೋಟು, ಪ್ರಕಾಶ್, ಶಶಿಕುಮಾರ್, ರಮೇಶ್, ಸಮರ್ಥರಾಯ್, ಸೇರಿದಂತೆ ಇತರರು ಭಾಗವಹಿಸಿದ್ದರು.

Views: 31

Leave a Reply

Your email address will not be published. Required fields are marked *