ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಭೀಮಸಮುದ್ರ:ಸಹಕಾರಿ ಸಂಘವನ್ನು ನಿರ್ಮಾಣ ಮಾಡುವುದು ಜಿಎಂ ಮಲ್ಲಿಕಾರ್ಜುನ ಅವರ ಬಹುದಿನದ ಆಸೆ ಜಿ ಎಂ ಪ್ರಸನ್ ಕುಮಾರ್
ದಿವಂಗತ ಜಿಎಂ ಮಲ್ಲಿಕಾರ್ಜುನಪ್ಪನವರ 96ನೇ ಜನ್ಮದಿನಾಚರಣೆಯನ್ನು ಜಿ ಎಂ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಭೀಮಸಮುದ್ರ ಶಾಖೆಯಲ್ಲಿ ಸಮಸ್ಥಾಪಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಅಧ್ಯಕ್ಷರಾದ ಜಿ ಎಂ ಪ್ರಸನ್ ಕುಮಾರ್ ಮಾತನಾಡಿ ತಂದೆಯವರು ಕೃಷಿಕರಾಗಿ ಅಡಿಕೆ ವರ್ತಕರಾಗಿ ಬೆಳೆದು ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘವನ್ನು ತಂದರು ಗ್ರಾಮದಲ್ಲಿ ಕ್ಯಾಂಪು ಅಡಿಕೆ ಮಂಡಿ ಹಾಗೆಯೇ ಜನರಿಗೆ ಗ್ರಾಮದಲ್ಲಿ ಕೆನರಾ ಬ್ಯಾಂಕ್ ತರಲು ಸಹಕಾರಿಯಾಗಿದ್ದಾರೆ ಅವರ ಆದರ್ಶಗಳು ನಮಗೆಲ್ಲ ಸ್ಪೂರ್ತಿ ರಾಜಕೀಯ ಕ್ಷೇತ್ರದಲ್ಲಿ ದಾವಣಗೆರೆಯ ಲೋಕಸಭಾ ಸದಸ್ಯರಾಗಿ ಸಾರ್ವಜನಿಕರ ಕ್ಷೇತ್ರದಲ್ಲೂ ಕೂಡ ಕೆಲಸ ಮಾಡಿದ್ದಾರೆ ಜಿ ಎಂ ಸಹಕಾರಿ ಸಂಘವನ್ನು ನಿರ್ಮಾಣ ಮಾಡಲು ಅವರ ಆದರ್ಶಗಳ ಕಾರಣ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಜಿಎಂ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಶ್ರೀ ಪ್ರಸನ್ನ ಕುಮಾರ್.ಜಿ.ಎಂ. ವಸಿರುತ್ತಾರೆ, ಮತ್ತು ಈ ಸಹಕಾರಿಯ ಯುವ ನಿರ್ದೇಶಕರಾದ ಅನಿತ ಕುಮಾರ.ಜಿ.ಎಸ್.ರವರು , ಹಿರಿಯ ನಿರ್ದೇಶಕರುಗಳಾದ ಶ್ರೀ.ಗುರುಮೂರ್ತಿ.ಎ.ಎಸ್. ರವರು ಶ್ರೀ ನಟರಾಜ್.ಬಿ.ಪಿ.ಜೆ. ರವರು, ಸಹಕಾರಿಯ ಮಾಜಿ ನಿರ್ದೇಶಕರಾದ ಶ್ರೀ ಪ್ರಸನ್ನ ಕುಮಾರ್.ಎಂ.ಬಿ. ಮತ್ತು ಸಹಕಾರಿಯ ಸಲಹಾ ಸಮಿತಿಯ ಸದಸ್ಯರಾದ ಅಶೋಕ್.ಟಿ.ಜಿ.ರವರು ಮತ್ತು ಶಾಖಾ ವ್ಯವಸ್ಥಾಪಕರಾದ ನಾಗರಾಜ್ ರವರು, ಸಿಬ್ಬಂದಿಯವರಾದ ಮನು,ಪ್ರಶಾಂತ್,ಶರತ್ ಮತ್ತು ಮೇಘನಾ ರವರು ಹಾಗೂ ಸಹಕಾರಿಯ ಸದಸ್ಯರುಗಳು ಭಾಗಿಯಾಗಿದ್ದು.