ಚಿತ್ರದುರ್ಗ ಗಣಪತಿ ಶೋಭಾಯಾತ್ರೆಯ ನಂತರದ ಸ್ವಚ್ಚತಾ ಕಾರ್ಯದಲ್ಲಿ ಪೌರ ಕಾರ್ಮಿಕರ ಮೆಚ್ಚುಗೆಗೆ ಪಾತ್ರವಾದ ಸಾಧನೆ.

ಚಿತ್ರದುರ್ಗ ಸೆ. 14

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ನಗರದಲ್ಲಿ ನಿನ್ನೆ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆದಿದ್ದು ಇದರಲ್ಲಿ ರಾಜ್ಯದ ವಿವಿದೆಡೆsÉಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯನ್ನು ನಡೆಸಿ ಹಿಂದೂ ಮಹಾ ಗಣಪತಿಯನ್ನು ಚಂದ್ರವಳ್ಳಿಯನ್ನಿ ನಿರ್ಮಿಸಲಾದ ಭಾವಿಯಲ್ಲಿ ವಿಸರ್ಜನೆ ಮಾಡಲಾಯಿತು. 


ಈ ಸಂದರ್ಭದಲ್ಲಿ ಭಕ್ತಾಧಿಗಳು ಅಭಿಮಾನಿಗಳು ಆಗಮಿಸಿದ್ದು ಅವರಿಂದ ಕಸದ ರಾಶಿ ನಗರದ ಬಿ.ಡಿ.ರಸ್ತೆಯಲ್ಲಿ ಹರಡಿತ್ತು ಇದನ್ನು ನಗರಸಭೆಯ ನೌಕರರು ಸ್ವಚ್ಚ ಮಾಡುವ ಕಾರ್ಯವನ್ನು ಇಂದು ಬೆಳಿಗ್ಗೆ ಯಿಂದ ಸುಮಾರು 5 ರಿಂದ 6 ಗಂಟೆಗಳ ಕಾಲ ಸ್ವಚ್ಚತಾ ಕಾರ್ಯವನ್ನು ನಡೆಸಿದರು.


ಇಂದು ನಡೆದ ಸ್ವಚ್ಚತಾ ಕಾರ್ಯದಲ್ಲಿ ನಗರಸಭೆಯ ಸಿಬ್ಬಂದಿಯ ಜೊತೆಗೆ ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕಾರಜೋಳ, ಆದರ್ಶ, ವಿಶ್ವನಾಥ್, ಲೋಹಿತ್ ಸಿದ್ದೇಶ್ ರವರು ಕೈ ಜೋಡಿಸುವುದರ ಮೂಲಕ ಕಸದ ರಾಶಿಯನ್ನು ವಿಲೇವಾರಿ ಮಾಡಲು ಸಹಾಯವನ್ನು ಮಾಡಿದ್ದಾರೆ. ಜಿಲ್ಲಾ ಸಚಿವರು ಈ ಕಸದ ರಾಶಿಯನ್ನು ತೆಗೆಯಲು ಸುಮಾರು 10 ರಿಂದ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದರು ಆದರೆ ನಮ್ಮ ಪೌರ ಕಾರ್ಮಿಕರು ಕೇವಲ 5 ರಿಂದ 6 ಗಂಟೆಯ ಒಳಗೆ ಪೂರ್ಣವಾಗಿ ಸ್ವಚ್ಚ ಮಾಡಿದ್ದಾರೆ ಎಂದರು.

Views: 34

Leave a Reply

Your email address will not be published. Required fields are marked *