ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಶಾಲೆ ರಾಜೋತ್ಸವ ಪ್ರಶಸ್ತಿ ಆಯ್ಕೆಯಾಗಿದೆ. ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಘೋಷಣೆ ಮಾಡಿದ್ದಾರೆ. ಹಾಗಾದ್ರೆ, ರಾಜೋತ್ಸವ ಪ್ರಶಸ್ತಿ ಆಯ್ಕೆಯಾದ ರಾಜ್ಯದ ಏಕೈಕ ಬೆಂಡೋಣಿ ಸರ್ಕಾರಿ ಶಾಲೆಯ ವಿಶೇಷತೆಗಳೇನು? ಏನು ನೋಡಿ ಈ ಶಾಲೆಯನ್ನು ರಾಜೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ.

ರಾಯಚೂರು, (ನವೆಂಬರ್ 01): ವಿವಿಧ ವಿನೂತನ ಚಟುವಟಿಕೆಗಳ ಮೂಲಕ ಖ್ಯಾತಿ ಪಡೆದಿರುವ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuru) ತಾಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಲೆನಾಡಿನ ಗಾಂಧಿ ದಿ.ಹೆಚ್.ಜಿ.ಗೋವಿಂದೇಗೌಡ ಅತ್ಯುತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ದೊರೆತಿದೆ. ಇದರ ಬೆನ್ನಲ್ಲೇ ಇದೀಗ ಇದೇ ಶಾಲೆ ಮುಡಿಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಹೌದು..2023ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ(rajyotsava award )ಬೆಂಡೋಣಿ ಸರ್ಕಾರಿ ಶಾಲೆ ಭಾಜನವಾಗಿದೆ.
ಅದರಂತೆ ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬೆಂಡೋಣಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಶಸ್ತಿ ಪ್ರಧಾನ ಮಾಡಲಾಯ್ತು. ಪ್ರಶಸ್ತಿ ಜೊತೆ ನೀಡುವ ನಗದು ಪುರಸ್ಕಾರದ ಮೊತ್ತದಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆ, ಮೂಲಸೌಕರ್ಯಗಳಾದ ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯ, ಮಕ್ಕಳ ಸೃಜನ ಶೀಲತೆ ಹೆಚ್ಚಿಸುವ ಉದ್ದೇಶಕ್ಕಾಗಿ ಬಳಕೆ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ನಮ್ಮ ಶಾಲೆಯ ವಿಭಿನ್ನ ಚಟುವಟಿಕೆಗಳು,ಮಕ್ಕಳ ಭವಿಷ್ಯದ ನಿಟ್ಟಿನಲ್ಲಿನ ನೀಡಲಾಗುತ್ತಿರೊ ಪ್ರಾಕ್ಟಿಕಲ್ ಪಾಠಗಳು ಹಾಗೂ ಶಾಲೆಯ ಉತ್ತಮ ಪರಿಸರ ಸೇರಿದಂತೆ ಇನ್ನಿತರ ಮಾನದಂಡಗಳು ಆಧರಿಸಿ ಹೆಚ್.ಜಿ.ಗೋವಿಂದೇಗೌಡ ಅತ್ಯತ್ತಮ ಸರ್ಕಾರಿ ಶಾಲೆ ಪ್ರಶಸ್ತಿಗೆ ಭಾಜನವಾಗ್ತಿದೆ. ಇದರಿಂದ ಖುಷಿ ಜೊತೆಗೆ ಎ ಜವಾಬ್ದಾರಿಯೂ ಹೆಚ್ಚಾಗುತ್ತಿದೆ ಅಂತಾರೆ ಶಾಲೆಯ ಶಿಕ್ಷಕ ವರ್ಗ.
ಹಚ್ಚ ಹಸಿರಿನಿಂದ ಕೂಡಿದ ಶಾಲೆ ಆವರಣ
ಈ ಶಾಲೆಯೊಳಗೆ ಕಾಲಿಟ್ಟಿರೆ ಸಾಕು ಅರಣ್ಯ ಪ್ರದೇಶಕ್ಕೆ ಬಂದಿದ್ದೇವೆ ಎನ್ನುವಂತೆ ಭಾಸವಾಗುತ್ತದೆ. ಅದರಂತೆ ಇರುವ ಅಲ್ಪಸ್ವಲ್ಪ ಜಾಗದಲ್ಲಿ ಗಿಡಗಳನ್ನು ನೆಡಲಾಗಿದೆ. ಇದರೊಂದಿಗೆ ಉತ್ತಮ ಪರಿಸರ ಬೆಳೆಸಿ ಮಕ್ಕಳಿಗೆ ಪಠ್ಯ ಜೊತೆ ಪರಿಸರ ಸಂರಕ್ಷಣೆ ಬಗ್ಗೆ ಪ್ರಜ್ಞೆ ಮೂಡಿಸಲಾಗುತ್ತಿದೆ. ಪರಿಸರವಲ್ಲದೆ ಪಕ್ಷಿಸಂಕುಲ ಉಳಿವಿಗಾಗಿ ಅವುಗಳ ಆಹಾರ ಹಾಗೂ ಕುಡಿಯಲು ನೀರಿನ ಅರವಟಿಕೆ ಮಾಡಲಾಗಿದೆ. ಈಗಾಗಲೇ ಶಾಲೆಗೆ “ಹಸಿರು ಶಾಲೆ” ಅನ್ನೊ ಪ್ರಶಸ್ತಿ ಕೂಡ ಸಿಕ್ಕಿದೆ.
ಈ ಶಾಲೆಯ ಚಟುವಟಿಕೆಗಳೇ ವಿಭಿನ್ನ..!
ಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿದ ಪಠ್ಯ ಭೋದನೆ ಮಾತ್ರವಲ್ಲದೆ ಮಕ್ಕಳಿಗೆ ಕೃಷಿಯತ್ತ ಒಲವು ಮೂಡಿಸುವ ಹಿನ್ನಲೆಯಲ್ಲಿ ಬ್ಯಾಗ್ ರಹಿತ ದಿನವೆಂದು ಆಚರಿಸಲಾಗುತ್ತದೆ. ಬ್ಯಾಗ್ ರಹಿತ ದಿನದಂದು ಶಿಕ್ಷಕರು ಮಕ್ಕಳನ್ನ ಕರೆದುಕೊಂಡು ಹೊಲ ಗದ್ದೆಗಳಿಗೆ ಹೋಗುತ್ತಾರೆ.ಅಲ್ಲಿ ಕೃಷಿ ಚಟುವಟಿಕೆಗಳು, ಬಿತ್ತನೆಯ ವಿಧಾನ ಸೇರಿ ಹಂತಹಂತವಾದ ಕೃಷಿ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಇದಷ್ಟೆ ಅಲ್ಲದೇ ಕೃಷಿ ಉಪಕರಣಗಳನ್ನ ತೋರಿಸಿ ಅವುಗಳ ವೈಶಿಷ್ಟ್ಯ ಲಾಭಗಳ ಬಗ್ಗೆ ಪಾಠ ಮಾಡಲಾಗುತ್ತದೆ.ಭಿತ್ತನೆ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ವ್ಯಾಪಾರ ವ್ಯವಹಾರದ ಬಗ್ಗೆ ಮಾಹಿತಿ ಒದಗಿಸಸಲಾಗುತ್ತದೆ. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಚುನಾವಣೆ ಮೂಲಕ ಶಾಲಾ ಹಂತದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಮಾಡಲಾಗತ್ತೆ. ಇದರಿಂದ ಪ್ರಾಥಮಿಕ ಹಂತದಿದಲೇ ಮಕ್ಕಳಿಗೆ ಚುನಾವಣಾ ಬಗ್ಗೆ ಅರಿವು ಮೂಡಿಸುವ ಸೇರಿದಂತೆ ವಿಭಿನ್ನ ಕಾರ್ಯಚಟುವಟಿಕೆಗಳಿಗೆ ಖ್ಯಾತಿ ಪಡೆದಿದೆ.
ರಾಜ್ಯದಲ್ಲೇ ಮಾದರಿಯಾದ ಏಕೈಕ ಶಾಲೆ..!
ಶಾಲೆಯಲ್ಲಿ ಮೂಲಸೌಕರ್ಯ, ಶಾಲಾ ಹಂತದಲ್ಲಿ ಕೈಗೊಂಡ ಚಟುವಟಿಕೆಗಳ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಗ್ರಾಮದಲ್ಲಿ ಶಿಕ್ಷಣ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರದೊಂದಿಗೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ನಡೆಸುವ ಮೌಲ್ಯಮಾಪನ ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ಅಲ್ಲದೇ ಮಲೆನಾಡಿನ ಗಾಂಧಿ ಮಾಜಿ ಶಿಕ್ಷಣ ಸಚಿವ ದಿ.ಹೆಚ್.ಜಿ.ಗೋವಿಂದೇಗೌಡ ಅತ್ಯತ್ತಮ ಸರ್ಕಾರಿ ಶಾಲೆಗೆ ಪ್ರಶಸ್ತಿ ಪಡೆದುಕೊಂಡಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1