ಗೂಗಲ್ ಟ್ರಾನ್ಸ್‌ಲೇಶನ್‌ಗೆ ತುಳು ಸೇರ್ಪಡೆ, ಕರಾವಳಿ ಕನ್ನಡಿಗರಿಗೆ ಬಹುದೊಡ್ಡ ಹರ್ಷ.

ಗೂಗಲ್ ಮಹತ್ವದ ಅಪ್‌ಡೇಟ್ ಪ್ರಕಟಿಸಿದ್ದು ಕರ್ನಾಟಕದ ಕರಾವಳಿಯ ಪ್ರಮುಖ ಭಾಷೆಯಾದ ತುಳುವಿನಲ್ಲಿ ಗೂಗಲ್ ಅನುವಾದ ಸೌಲಭ್ಯವನ್ನು ಆರಂಭಿಸಿದೆ. ಗೂಗಲ್ ಅನುವಾದ ಸೇವೆಯಡಿ ಒಟ್ಟು ಏಳು ಹೊಸ ಭಾರತೀಯ ಭಾಷೆಗಳನ್ನು ಸೇರಿಸಲಾಗಿದ್ದು, ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿ ಮತ್ತು ತುಳು ಈ ಸೇವೆಗೆ ಸೇರಲ್ಪಟ್ಟ ಹೊಸ ಭಾರತೀಯ ಭಾಷೆಗಳಾಗಿವೆ.

ಗೂಗಲ್ ಅನುವಾದದಲ್ಲಿ ಹೊಸದಾಗಿ 103 ಇತರ ಜಾಗತಿಕ ಭಾಷೆಗಳಿಗೆ ಬೆಂಬಲವನ್ನು ನೀಡಲಾಗಿದ್ದು, ಇದರೊಂದಿಗೆ ಗೂಗಲ್ ಅನುವಾದವು ಈಗ ಜಗತ್ತಿನ ಒಟ್ಟು 243 ಭಾಷೆಗಳಲ್ಲಿ ಲಭ್ಯವಿದೆ. ಕೃತಕ ಬುದ್ಧಿಮತ್ತೆಯ ಮೂಲಕ ತುಳು ಸೇರಿದಂತೆ ಹಲವು ಭಾಷೆಗಳಲ್ಲಿ ಅನುವಾದ ಸೇವೆಯನ್ನು ನೀಡುತ್ತಿರುವುದಾಗಿ ಗೂಗಲ್ ಪ್ರಕಟಿಸಿದೆ. ಗೂಗಲ್‌‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್ Inc. ಕಂಪನಿಯು ಇದು ತನ್ನ ಅತಿದೊಡ್ಡ ವಿಸ್ತರಣೆಯಾಗಿದೆ ಎಂದು ಹೇಳಿಕೊಂಡಿದೆ.

ಏನಿದು ಗೂಗಲ್ ಅನುವಾದ ಸೇವೆ?

Google ಅನುವಾದವನ್ನು 2006 ರಲ್ಲಿ ಪರಿಚಯಿಸಲಾಗಿದ್ದು, ಜೂನ್ 2024 ರ ಹೊತ್ತಿಗೆ 243 ಭಾಷೆಗಳನ್ನು ಬೆಂಬಲಿಸುತ್ತಿದೆ. ಈ ಯೋಜನೆಯ ಭಾಗವಾಗಿ, ಕಂಪನಿಯು ಪ್ರಪಂಚದಾದ್ಯಂತ ಹೆಚ್ಚು ಮಾತನಾಡುವ 1,000 ಭಾಷೆಗಳನ್ನು ಬೆಂಬಲಿಸುವ AI ಮಾದರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

Source : https://kannada.news18.com/news/mangaluru/tulu-added-to-google-translate-with-7-indian-languages-ggb-1757447.html

Leave a Reply

Your email address will not be published. Required fields are marked *