ಸತತ 2 ವಿಶ್ವಕಪ್ ಗೆದ್ದ ಸ್ಟಾರ್ ಕ್ರಿಕೆಟಿಗನ ಫೋಟೋ ನೋಟುಗಳಲ್ಲಿ ಮುದ್ರಣ: ಇದು ‘ಗೌರವಾರ್ಥ’ ಎಂದ ಬ್ಯಾಂಕ್.

Vivian Richards Photo on dollar note: ವಿವಿಯನ್ ರಿಚರ್ಡ್ಸ್ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಟೆಸ್ಟ್ ಅಥವಾ ODI ಆಗಿರಲಿ, ಈ ಡ್ಯಾಶಿಂಗ್ ಬ್ಯಾಟ್ಸ್‌ಮನ್‌ ಆಟದ ಶೈಲಿಯು ಯಾವಾಗಲೂ ಅಬ್ಬರಿಸುತ್ತಲೇ ಇರುತ್ತದೆ.

  • ವಿವಿಯನ್ ರಿಚರ್ಡ್ಸ್ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು
  • ವೆಸ್ಟ್ ಇಂಡೀಸ್’ನ ಶ್ರೇಷ್ಠ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಗೌರವಾರ್ಥ
  • ವಿವಿಯನ್ ರಿಚರ್ಡ್ಸ್ ಸತತ ಎರಡು ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಸದಸ್ಯರಾಗಿದ್ದಾರೆ

Caribbean Central Bank: ಈಸ್ಟರ್ನ್ ಕೆರಿಬಿಯನ್ ಸೆಂಟ್ರಲ್ ಬ್ಯಾಂಕ್ ವೆಸ್ಟ್ ಇಂಡೀಸ್’ನ ಶ್ರೇಷ್ಠ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರ ಗೌರವಾರ್ಥವಾಗಿ ವಿಶೇಷ ಬ್ಯಾಂಕ್ ನೋಟ್ ಅನ್ನು ಬಿಡುಗಡೆ ಮಾಡಿದೆ. ಈಸ್ಟರ್ನ್ ಕೆರಿಬಿಯನ್ ಸೆಂಟ್ರಲ್ ಬ್ಯಾಂಕ್ ಸರ್ ವಿವಿಯನ್ ರಿಚರ್ಡ್ಸ್ ಅವರ ಫೋಟೋ ಹೊಂದಿರುವ $2 ಪಾಲಿಮರ್ ಬ್ಯಾಂಕ್ ನೋಟನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಬ್ಯಾಂಕ್‌’ನ 40 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಸರ್ ವಿವಿಯನ್ ರಿಚರ್ಡ್ಸ್ ಅವರ ಗೌರವಾರ್ಥವಾಗಿ ಈ ನೋಟನ್ನು ಬಿಡುಗಡೆ ಮಾಡಲಾಗಿದೆ.

ವಿವಿಯನ್ ರಿಚರ್ಡ್ಸ್ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಟೆಸ್ಟ್ ಅಥವಾ ODI ಆಗಿರಲಿ, ಈ ಡ್ಯಾಶಿಂಗ್ ಬ್ಯಾಟ್ಸ್‌ಮನ್‌ ಆಟದ ಶೈಲಿಯು ಯಾವಾಗಲೂ ಅಬ್ಬರಿಸುತ್ತಲೇ ಇರುತ್ತದೆ.

ವಿವಿಯನ್ ರಿಚರ್ಡ್ಸ್ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು, 1991ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಈ ಅವಧಿಯಲ್ಲಿ, 121 ಟೆಸ್ಟ್ ಪಂದ್ಯಗಳಲ್ಲಿ 50ಕ್ಕಿಂತ ಹೆಚ್ಚು ಸರಾಸರಿಯಲ್ಲಿ 8540 ರನ್ ಗಳಿಸಿದ್ದರು. ಇದರಲ್ಲಿ 24 ಶತಕಗಳು ಮತ್ತು 45 ಅರ್ಧ ಶತಕಗಳು ಸೇರಿವೆ. ಇನ್ನು 187 ODI ಪಂದ್ಯಗಳಲ್ಲಿ 47 ರ ಸರಾಸರಿಯಲ್ಲಿ 6721 ರನ್ ಗಳಿಸಿದರು. ODIನಲ್ಲಿ ಅವರ ಸ್ಟ್ರೈಕ್ ರೇಟ್ 90.20 ಆಗಿತ್ತು. ಇದರಲ್ಲಿ 11 ಶತಕಗಳು ಮತ್ತು 45 ಅರ್ಧ ಶತಕಗಳು ಸೇರಿವೆ.

ವಿವಿಯನ್ ರಿಚರ್ಡ್ಸ್ ಸತತ ಎರಡು ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಸದಸ್ಯರಾಗಿದ್ದಾರೆ. ವೆಸ್ಟ್ ಇಂಡೀಸ್ 1975 ಮತ್ತು 1979ರಲ್ಲಿ ಸತತ ಎರಡು ಬಾರಿ ಚಾಂಪಿಯನ್ ಆಗುವ ಸಾಧನೆ ಮಾಡಿತ್ತು. 1984 ರಿಂದ 1991 ರವರೆಗೆ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿದ್ದಾಗ, ತಂಡವನ್ನು 27 ಬಾರಿ ಗೆಲುವಿನತ್ತ ಮುನ್ನಡೆಸಿದರು. ಜೊತೆಗೆ ಇವರ ನಾಯಕತ್ವದಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ತಂಡ ಸೋತಿರಲಿಲ್ಲ. ಈ ಸಾಧನೆ ಮಾಡಿದ ಏಕೈಕ ನಾಯಕ ವಿವಿಯನ್ ರಿಚರ್ಡ್ಸ್.

Source: https://zeenews.india.com/kannada/sports/the-caribbean-central-bank-issued-a-2-dollar-note-in-honour-of-sir-vivian-richards-174501

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *