
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ ಜಿಲ್ಲೆಯ ಜಂಗಮ ಸಮಾಜ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಹಕಾರ ಸಂಘವನ್ನು ನಿರ್ಮಾಣ ಮಾಡಿದೆ ಮುಂದಿನ ದಿನದಲ್ಲಿ ಜಂಗಮ ಭವನವನ್ನು ನಿರ್ಮಾಣ ಮಾಡಲು ಮುಂದಾಗಿದೆ ಇದು ಉತ್ತಮವಾದ ಬೆಳವಣಿಗೆಯಾಗಿದೆ. ಚಿತ್ರದುರ್ಗದಲ್ಲಿ ಜಂಗಮ ಸಮಾಜ ಉತ್ತಮವಾಗಿ ನಡೆಯುತ್ತಿದೆ. ಸಹಕಾರ ಸಂಸ್ಥೆಯಲ್ಲಿ ಅಧಿಕಾರಕ್ಕಾಗಿ ಬರದೇ ಸೇವಾ ಮನೋಭಾವದಿಂದ ಬಂದಾಗ ಮಾತ್ರ ಅದು ಉತ್ತಮವಾಗಿ ನಡೆಯಲು ಸಾಧ್ಯವಿದೆ ಎಂದರು.
ವಾಣಿಜ್ಯೋದ್ಯಮಿಗಳು ಹಾಗೂ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷರಾದ ಸೋಮಶೇಖರ್ ಮಂಡಿಮಠ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಪಟೇಲ್ ಶಿವಕುಮಾರ, ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥಾನ, ಕಾರ್ಯಾಧ್ಯಕ್ಷರಾದ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ರಾಜ್ಯ ಬೇಡ ಸಮಾಜ ಸಂಸ್ಥೆಯ ಕಾರ್ಯಾಧ್ಯಕ್ಷರು, ಬಾಪೂಜಿ ಸಮೂಹ ಸಂಸ್ಥೆಗಳು ಕಾರ್ಯದಶಿಗಳಾದಕೆ.ಎಂ. ವೀರೇಶ್, ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಖಜಾಂಚಿ ಕೆ.ಎಸ್. ಶಿವನಗೌಡ್ರು, ವೀರಶೈವ-ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಜೆ. ಶಿವಪ್ರಕಾಶ, ಜಿಲ್ಲಾ ವೀರಶೈವ-ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷರಾದ ಜಿ. ಚಿದಾನಂದಪ್ಪ, ವೀರಶೈವ-ಲಿಂಗಾಯತ, ಜಿಲ್ಲಾ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಈ.ಎಸ್. ಜಯದೇವಮೂರ್ತಿ,ಬೇಡ ಜಂಗಮ ಸಮಾಜದ ಚಿತ್ರದುರ್ಗ ತಾಲೂಕು ಅಧ್ಯಕ್ಷ ಜಿ.ಎಸ್. ಕಲ್ಲೇಶಯ್ಯ, ಹೊಸದುರ್ಗ ತಾಲ್ಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ.ಎಸ್. ಕಲ್ಕರ, ಹೊಳಲ್ಕೆರೆ ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ಕೆ.ಎಚ್. ಪ್ರಭುಲಿಂಗಯ್ಯ, ಚಳ್ಳಕೆರೆ ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಎಂ.ಸಿ. ತಿಪ್ಪೇಸ್ವಾಮಿ, ಹಿರಿಯೂರು ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಸಿ.ಎಂ. ಸ್ವಾಮಿ, ಮೊಳಕಾಲ್ಕೂರು ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಬಿ. ಶಿವಣ್ಣ, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ ವಿಜಯಕುಮಾರ್, ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಕೆ. ಪ್ರಭುದೇವ್ ಭಾಗವಹಿಸಿದ್ದರು
ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್. ಷಡಾಕ್ಷರಯ್ಯ ಪ್ರಾಸ್ತಾವಿಕ ನುಡಿದರು. ಬಸವರಾಜಯ್ಯ ಶಾಸ್ತ್ರಿ ವೇದ ಘೋಷ ವಾಚಿಸಿದರೆ ಲೀಲಾವತಿ ಪ್ರಾರ್ಥಿಸಿದರು. ವಿರೇಶ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಎಸ್,ಎಸ್.ಎಲ್.ಸಿ. ಪಿಯುಸಿ ಪದವಿ ಹಾಗೂ ಪಿಎಚ್.ಡಿ. ಪಡೆದವರನ್ನು ಸನ್ಮಾನಿಸಲಾಯಿತು.