ದೇಹದ ಸರ್ವರೋಗಕ್ಕೂ ಹುಣಸೆ ಎಲೆ ಬ್ರಹ್ಮಸ್ತ್ರ

ಹುಣಸೆ ಹಣ್ಣು ಗಳನ್ನು ಸೇವನೆ ಮಾಡಿರಬಹುದು ಆದರೆ ಅವುಗಳ ಎಲೆಯನ್ನು ತಿಂದಿದ್ದೀರಾ? ನಿಮಗೆ ಈ ಎಲೆಗಳಿಂದ ಎಂತಹ ಪ್ರಯೋಜನ ಸಿಗುತ್ತದೆ ಎಂದೆನಿಸಬಹುದು. ಆದರೆ ಈ ಎಲೆ ಮಲೇರಿಯಾ (Malaria), ಮಧುಮೇಹ (Diabetes) ಸೇರಿದಂತೆ ರಕ್ತಹೀನತೆಯಂತಹ ಆರೋಗ್ಯ (Health) ಸಮಸ್ಯೆಗಳನ್ನು ತಡೆಯುವ ಶಕ್ತಿ ಹೊಂದಿದೆ ಎಂದರೆ ನೀವು ನಂಬಲೇ ಬೇಕು.

ಅದರಲ್ಲಿಯೂ ಈಗ ಮಳೆಗಾಲವಾದ್ದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರೆಗಳ ಮೊರೆ ಹೋಗುವ ಬದಲು ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡುವ ಮೂಲಕ ದೇಹವನ್ನು ರೋಗಗಳು ಬರದಂತೆ ರಕ್ಷಣೆ ಮಾಡಿಕೊಳ್ಳಬೇಕು. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ? ಯಾರಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

  • ಹುಣಸೆ ಎಲೆಗಳ ರಸವು ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಎಂಬ ಸೂಕ್ಷ್ಮಜೀವಿಯ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಈ ಸೂಕ್ಷ್ಮಜೀವಿಯು ಮಲೇರಿಯಾಗೆ ಕಾರಣವಾಗುತ್ತದೆ. ಹಾಗಾಗಿ ಈ ಎಲೆಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ, ಮಲೇರಿಯಾವನ್ನು ತಡೆಗಟ್ಟಬಹುದು.
  • ಮಧುಮೇಹ ಇರುವವರು, ಹುಣಸೆ ಎಲೆಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು. ಇದರಲ್ಲಿರುವ ನೈಸರ್ಗಿಕ ಪದಾರ್ಥಗಳು ಇನ್ಸುಲಿನ್ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ.
  • ಹುಣಸೆ ಎಲೆಗಳು ದೇಹಕ್ಕೆ ಚೈತನ್ಯದಾಯಕ ಗುಣಗಳನ್ನು ಹೊಂದಿವೆ. ಅವು ರಕ್ತಹೀನತೆ ಮತ್ತು ಆಯಾಸದಿಂದ ಉಂಟಾಗುವ ಕಾಯಿಲೆಗಳಿಂದ ಪರಿಹಾರ ನೀಡುತ್ತವೆ. ಅದಲ್ಲದೆ ಈ ಎಲೆಗಳಿಂದ ಮಾಡಿದ ಕಷಾಯ ಅಥವಾ ರಸವನ್ನು ಕುಡಿಯುವುದರಿಂದ ದೇಹ ಆರೋಗ್ಯವಾಗಿರುತ್ತದೆ.
  • ಹುಣಸೆ ಎಲೆಗಳಲ್ಲಿ ವಿಟಮಿನ್ ಸಿ (ಆಸ್ಕೋರ್ಬಿಕ್ ಆಮ್ಲ) ಹೇರಳವಾಗಿದೆ. ಇದು ಸ್ಕರ್ವಿ ಎಂಬ ರೋಗವನ್ನು ತಡೆಗಟ್ಟುತ್ತದೆ. ದೇಹದಲ್ಲಿ ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಕಲ್ಮಶಗಳು ಮತ್ತು ಸೋಂಕುಗಳನ್ನು ತಡೆಗಟ್ಟುವಲ್ಲಿ ಇದು ಸಹಾಯ ಮಾಡುತ್ತದೆ.
  • ಹುಣಸೆ ಎಲೆಯ ರಸವನ್ನು ಗಾಯ ಆದಂತಹ ಜಾಗದಲ್ಲಿ ಅಥವಾ ಚರ್ಮದ ಸೋಂಕುಗಳ ಮೇಲೆ ಹಚ್ಚುವುದರಿಂದ ಅವು ಬೇಗನೆ ಗುಣವಾಗುತ್ತವೆ. ಇದರಲ್ಲಿರುವ ನಂಜುನಿರೋಧಕ ಗುಣಗಳು ಚರ್ಮದ ಮೇಲೆ ರಕ್ಷಣಾತ್ಮಕ ಗುರಾಣಿಯಂತೆ ಕಾರ್ಯನಿರ್ವಹಿಸುತ್ತವೆ.
  • ಹುಣಸೆ ರಸವನ್ನು ಸೇವನೆ ಮಾಡುವುದರಿಂದ ಹಾಲುಣಿಸುವ ತಾಯಂದಿರ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ. ಜೊತೆಗೆ ಹಾಲಿನ ಗುಣಮಟ್ಟವೂ ಕೂಡ ಸುಧಾರಿಸುತ್ತದೆ. ಅಲ್ಲದೆ ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ಕೂಡ ಸಹಾಯ ಮಾಡುತ್ತದೆ.
  • ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವು ಮತ್ತು ಅಸ್ವಸ್ಥತೆಯಿಂದ ಹುಣಸೆಹಣ್ಣಿನ ಎಲೆಗಳು ಪರಿಹಾರ ನೀಡುತ್ತದೆ. ಆಹಾರದಲ್ಲಿ ಈ ಎಲೆಗಳನ್ನು ಸೇವನೆ ಮಾಡುವುದರಿಂದ ಗರ್ಭಾಶಯಕ್ಕೆ ಸಂಬಂಧಿಸಿದ ನೋವು ಕೂಡ ಕಡಿಮೆ ಆಗುತ್ತದೆ.
  • ಅದಲ್ಲದೆ ಹುಣಸೆಹಣ್ಣಿನ ಎಲೆಗಳು ಮೂತ್ರಪಿಂಡದ ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿ. ಈ ಎಲೆಗಳು ಮೂತ್ರನಾಳವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡಗಳಲ್ಲಿ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಯುತ್ತದೆ.
  • ಹುಣಸೆ ಹಣ್ಣಿನ ಎಲೆಗಳು ದೇಹದಲ್ಲಿ ಅನಿಲ, ಪಿತ್ತರಸ ಮತ್ತು ಕಫದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಎಲೆಯಲ್ಲಿರುವ ಉರಿಯೂತ ನಿವಾರಕ ಗುಣಲಕ್ಷಣಗಳು ಕೀಲು ನೋವು ಮತ್ತು ಊತದಂತಹ ಸಮಸ್ಯೆಗಳಿಗೆ ನೈಸರ್ಗಿಕವಾಗಿ ಪರಿಹಾರ ನೀಡುತ್ತದೆ.
  • ಇನ್ನು ಈ ಎಲೆಗಳು ವಯಸ್ಸಾದಂತೆ ಬರುವ ನೋವುಗಳಿಂದ ಪರಿಹಾರ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹುಣಸೆಹಣ್ಣನ್ನು ನಮ್ಮ ಅಡುಗೆಗಳಲ್ಲಿ ಮಾತ್ರ ಬಳಸುವುದಲ್ಲದೆ, ಇದು ನಮ್ಮ ಆರೋಗ್ಯವನ್ನು ಉತ್ತೇಜಿಸುವ ಔಷಧೀಯಾಗಿಯೂ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಈ ಎಲೆಗಳ ಸೇವನೆಯು ರೋಗಗಳು ಬರದಂತೆ ತಡೆಯಲು ಬಳಸಿಕೊಳ್ಳಬಹುದಾಗಿದೆ.

TV9 kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *