Celebrity Cricket League 11: 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಫೆಬ್ರವರಿ 8 ರಿಂದ ಆರಂಭವಾಗುತ್ತಿದೆ. ಏಳು ತಂಡಗಳು ಭಾಗವಹಿಸುತ್ತಿದ್ದು, ಮಾರ್ಚ್ 2ರಂದು ಫೈನಲ್ ಪಂದ್ಯ ನಡೆಯಲಿದೆ. ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಪಂದ್ಯಗಳು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿವೆ. ಪ್ರತಿ ತಂಡದಲ್ಲೂ ಪ್ರಸಿದ್ಧ ನಟರು ಇರುವುದು ಈ ಲೀಗ್ನ ವಿಶೇಷ.
![](https://samagrasuddi.co.in/wp-content/uploads/2025/02/image-61.png)
11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ಗೆ ಇಂದಿನಿಂದ ಅದ್ದೂರಿ ಚಾಲನೆ ಸಿಗುತ್ತಿದೆ. ಫೆಬ್ರವರಿ 8 ರಿಂದ ಆರಂಭವಾಗುತ್ತಿರುವ ಈ ಟೂರ್ನಿಯಲ್ಲಿ 7 ತಂಡಗಳು ಭಾಗವಹಿಸುತ್ತಿದ್ದು, ಮಾರ್ಚ್ 2 ರಂದು ನಡೆಯಲ್ಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ. ಬೆಂಗಳೂರಿನಲ್ಲಿ ಉದ್ಘಾಟನ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ಸ್ ಬೆಂಗಾಲ್ ಟೈಗರ್ಸ್ ಹಾಗೂ ಚೆನ್ನೈ ರೈನೋಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನು ದಿನದ ಎರಡನೇ ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್, ತೆಲುಗು ವಾರಿಯರ್ಸ್ ತಂಡವನ್ನು ತನ್ನ ತವರು ಮೈದಾನವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಎದುರಿಸಲಿದೆ. ಟೂರ್ನಿಯಲ್ಲಿ ಉಭಯ ತಂಡಗಳು ಸಾಕಷ್ಟು ಬಲಿಷ್ಠವಾಗಿರುವ ಕಾರಣ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ.
ದಿನಾಂಕ | ಮುಖಾಮುಖಿ | , | ಸಮಯ |
ಫೆಬ್ರವರಿ 8 | ಚೆನ್ನೈ ರೈನೋಸ್ vs ಬೆಂಗಾಲ್ ಟೈಗರ್ಸ್ | ಬೆಂಗಳೂರು | ಮಧ್ಯಾಹ್ನ 2 ಗಂಟೆ |
ಫೆಬ್ರವರಿ 8 | ಕರ್ನಾಟಕ ಬುಲ್ಡೋಜರ್ಸ್ vs ತೆಲುಗು ವಾರಿಯರ್ಸ್ | ಬೆಂಗಳೂರು | ಸಂಜೆ 6:30 |
ಫೆಬ್ರವರಿ 9 | ಬೆಂಗಾಲ್ ಟೈಗರ್ಸ್ vs ಪಂಜಾಬ್ ಡಿ ಶೇರ್ | ದೆಹಲಿ | ಮಧ್ಯಾಹ್ನ 2 ಗಂಟೆ |
ಫೆಬ್ರವರಿ 9 | ಮುಂಬೈ ಹೀರೋಸ್ vs ಭೋಜ್‌ಪುರಿ ದಬ್ಬಾಂಗ್ಸ್ | ದೆಹಲಿ | ಸಂಜೆ 6:30 |
ಫೆಬ್ರವರಿ 14 | ಚೆನ್ನೈ ರೈನೋಸ್ vs ಕರ್ನಾಟಕ ಬುಲ್ಡೋಜರ್ಸ್ | ಹೈದರಾಬಾದ್ | ಮಧ್ಯಾಹ್ನ 2 ಗಂಟೆ |
ಫೆಬ್ರವರಿ 14 | ಭೋಜ್‌ಪುರಿ ದಬ್ಬಾಂಗ್ಸ್ vs ತೆಲುಗು ವಾರಿಯರ್ಸ್ | ಹೈದರಾಬಾದ್ | ಸಂಜೆ 6:30 |
ಫೆಬ್ರವರಿ 15 | ಮುಂಬೈ ಹೀರೋಸ್ vs ಕರ್ನಾಟಕ ಬುಲ್ಡೋಜರ್ಸ್ | ಹೈದರಾಬಾದ್ | ಮಧ್ಯಾಹ್ನ 2 ಗಂಟೆ |
ಫೆಬ್ರವರಿ 15 | ಚೆನ್ನೈ ರೈನೋಸ್ vs ತೆಲುಗು ವಾರಿಯರ್ಸ್ | ಹೈದರಾಬಾದ್ | ಸಂಜೆ 6:30 |
ಫೆಬ್ರವರಿ 16 | ಪಂಜಾಬ್ ದೇ ಶೇರ್ vs ಭೋಜ್‌ಪುರಿ ದಬ್ಬಾಂಗ್ಸ್ | ಕಟಕ್ | ಮಧ್ಯಾಹ್ನ 2 ಗಂಟೆ |
ಫೆಬ್ರವರಿ 16 | ಮುಂಬೈ ಹೀರೋಸ್ vs ಬೆಂಗಾಲ್ ಟೈಗರ್ಸ್ | ಕಟಕ್ | ಸಂಜೆ 6:30 |
ಫೆಬ್ರವರಿ 22 | ಭೋಜ್‌ಪುರಿ ದಬ್ಬಾಂಗ್ಸ್ vs ಚೆನ್ನೈ ರೈನೋಸ್ | ಸೂರತ್ | ಮಧ್ಯಾಹ್ನ 2 ಗಂಟೆ |
ಫೆಬ್ರವರಿ 22 | ಪಂಜಾಬ್ ದೇ ಶೇರ್ vs ಕರ್ನಾಟಕ ಬುಲ್ಡೋಜರ್ಸ್ | ಸೂರತ್ | ಸಂಜೆ 6:30 |
ಫೆಬ್ರವರಿ 23 | ಬಂಗಾಳ ಟೈಗರ್ಸ್ vs ತೆಲುಗು ವಾರಿಯರ್ಸ್ | ಸೂರತ್ | ಮಧ್ಯಾಹ್ನ 2 ಗಂಟೆ |
ಫೆಬ್ರವರಿ 23 | ಮುಂಬೈ ಹೀರೋಸ್ vs ಪಂಜಾಬ್ ದೇ ಶೇರ್ | ಸೂರತ್ | ಸಂಜೆ 6:30 |
ಮಾರ್ಚ್ 1 | ಸೆಮಿಫೈನಲ್ 1 | ಸ್ಥಳ ನಿಗದಿಯಾಗಿಲ್ಲ | ಮಧ್ಯಾಹ್ನ 2 ಗಂಟೆ |
ಮಾರ್ಚ್ 1 | ಸೆಮಿಫೈನಲ್ 2 | ಸ್ಥಳ ನಿಗದಿಯಾಗಿಲ್ಲ | ಸಂಜೆ 6:30 |
ಮಾರ್ಚ್ 2 | ಫೈನಲ್ ಪಂದ್ಯ | ಸ್ಥಳ ನಿಗದಿಯಾಗಿಲ್ಲ | ಸಂಜೆ 6:30 |
ಎಲ್ಲಾ 7 ತಂಡಗಳು
ಕರ್ನಾಟಕ ಬುಲ್ಡೋಜರ್ಸ್: ಕಿಚ್ಚ ಸುದೀಪ್ (ನಾಯಕ), ಗೋಲ್ಡನ್ ಸ್ಟಾರ್ ಗಣೇಶ್,ಕಾರ್ತಿಕ್ ಜಯರಾಮ್, ಡಾರ್ಲಿಂಗ್ ಕೃಷ್ಣ, ಸುನೀಲ್ ರಾವ್, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ, ನಿರೂಪ್ ಭಂಡಾರಿ, ಅನುಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕನಂದಾ, ತ್ರಿವಿಕ್ರಮ್.
ತೆಲುಗು ವಾರಿಯರ್ಸ್: ಅಖಿಲ್ ಅಕ್ಕಿನೇನಿ (ನಾಯಕ), ವೆಂಕಟೇಶ್, ಸಚಿನ್ ಜೋಶಿ, ಸುಧೀರ್ ಬಾಬು, ತರುಣ್, ಪ್ರಿನ್ಸ್ ಸೆಸಿಲ್, ಸಾಯಿ ಧರಮ್ ತೇಜ್, ಅಜಯ್, ಅಶ್ವಿನ್ ಬಾಬು, ಆದರ್ಶ ಬಾಲಕೃಷ್ಣ, ನಂದಕಿಶೋರ್, ನಿಖಿಲ್ ಸಿದ್ಧಾರ್ಥ, ಸಿದ್ದಾರ್ಥ್, ಪ್ರಭು, ರಘು, ಸುಶಾಂತ್, ಶ್ರೀಕಾಂತ್, ತಾರಕ ರತ್ನ, ಸಾಮ್ರಾಟ್ ರೆಡ್ಡಿ, ವಿಶ್ವ.
ಚೆನ್ನೈ ರೈನೋಸ್: ಆರ್ಯ ಅಶೋಕ್ ಸೆಲ್ವನ್ (ನಾಯಕ), ಭರತ್, ಶಾಮ್, ಬೋಸ್ ವೆಂಕಟ್, ಹೇಮಚಂದ್ರನ್, ಕಲೈಯರಸನ್, ಮಹೇಂದ್ರನ್, ನಂದಾ, ಪೃಥ್ವಿ, ರಮಣ, ಸಂಜಯ್ ಭಾರತಿ, ಶಂತನು, ಶರಣ್, ಉದಯ್ ಕುಮಾರ್, ವಿಕ್ರಾಂತ್, ವಿಷ್ಣು.
ಬೆಂಗಾಲ್ ಟೈಗರ್ಸ್: ಜಿಶು ಸೆಂಗುಪ್ತ (ನಾಯಕ), ಇಂದ್ರಶಿಶ್, ಮೋಹನ್, ಸುಮನ್, ಜಾಯ್, ಜೋ, ಯೂಸುಫ್, ಜೀತು ಕಮಲ್, ಜಮ್ಮಿ, ರತ್ನದೀಪ್ ಘೋಷ್, ಆನಂದ ಚೌಧರಿ, ಸ್ಯಾಂಡಿ, ಆದಿತ್ಯ ರಾಯ್ ಬ್ಯಾನರ್ಜಿ, ಅರ್ಮಾನ್ ಅಹಮದ್, ಮಾಂಟಿ, ರಾಹುಲ್ ಮಜುಂದಾರ್, ಗೌರವ್ ಚಕ್ರವರ್ತಿ, ಬೋನಿ, ಸೌರವ್ ದಾಸ್.
ಪಂಜಾಬ್ ದೇ ಶೇರ್: ಸೋನು ಸೂದ್ (ನಾಯಕ), ಮಿಕಾ ಸಿಂಗ್, ಜಿಮ್ಮಿ ಶೆರ್ಗಿಲ್, ಆಯುಷ್ಮಾನ್ ಖುರಾನಾ, ಬಿನ್ನು ಧಿಲ್ಲೋನ್, ಮನ್ವಿರ್ ಸ್ರಾನ್, ರಾಹುಲ್ ದೇವ್, ನವರಾಜ್ ಹನ್ಸ್, ಜಾಝಿ ಬಿ, ಹರ್ಮೀತ್ ಸಿಂಗ್, ಪಿಯೂಷ್ ಮಲ್ಹೋತ್ರಾ, ಗುಲ್ಜಾರ್ ಚಾಹಲ್, ರೋಷನ್ ಪ್ರಿನ್ಸ್, ಅಮರಿಂದರ್ ಗಿಲ್, ಅಂಗದ್ ಬೇಡಿ, ಯುವರಾಜ್ ಹನ್ಸ್, ರಾಜು ಶರ್ಮಾ, ದಿಲ್‌ರಾಜ್ ಕೆಹುರ್ಮಾ.
ಮುಂಬೈ ಹೀರೋಸ್: ಸಾಕಿಬ್ ಸಲೀಂ (ನಾಯಕ), ರಿತೇಶ್ ದೇಶ್‌ಮುಖ್, ಬಾಬಿ ಡಿಯೋಲ್, ಸುನಿಲ್ ಶೆಟ್ಟಿ, ವರುಣ್ ಬಡೋಲಾ, ಅಫ್ತಾಬ್ ಶಿವದಾಸನಿ, ಸಮೀರ್ ಕೊಚ್ಚರ್, ಇಂದ್ರನೀಲ್ ಸೇನ್‌ಗುಪ್ತ, ಅಪೂರ್ವ ಲಖಿಯಾ, ಕಬೀರ್ ಸದಾನಂದ್, ಕುನಾಲ್ ಖೇಮು, ರಾಜಾ ಭೆರ್ವಾನಿ, ಶಬ್ಬೀರ್ ಅಹ್ಲುವಾಲಿಯಾ, ಶಬ್ಬೀರ್ ಅಹ್ಲುವಾಲಿಯಾ, ಸೊಸ್ಹರಲ್ ಖ್ಲ್ವಾಲಿಯಾ ಸೇಠ್, ಸಾಹಿಲ್ ಚೌಧರಿ
ಭೋಜ್‌ಪುರಿ ದಬಾಂಗ್ಸ್: ಮನೋಜ್ ತಿವಾರಿ (ನಾಯಕ), ರವಿ ಕಿಶನ್, ದಿನೇಶ್ ಲಾಲ್ ಯಾದವ್, ರಾಮ್ ಪ್ರವೇಶ್ ಯಾದವ್, ಉದಯ್ ತಿವಾರಿ, ಅಜೋಯ್ ಶರ್ಮಾ, ವಿಕ್ರಾಂತ್ ಸಿಂಗ್, ಆದಿತ್ಯ ಓಜಾ, ಪ್ರಕಾಶ್ ಜೈಸ್, ಅಯಾಜ್ ಖಾನ್, ಶೈಲೇಶ್ ಸಿನ್ಹಾ, ವೈಭವ್ ರಾಜ್, ಅಸ್ಗರ್ ರಶೀದ್ ಖಾನ್, ವಿಕಾಸ್ ಸಿಂಗ್, ಅಕ್ಬರ್ ನಖ್ವಿ, ಗಜೇಂದರ್ ಪ್ರತಾಪ್ ದ್ವಿವೇದಿ, ಜಯ್ ಪ್ರಕಾಶ್ ಯಾದವ್, ರಾಜ್ ಚೋಹನ್, ಪವನ್ ಸಿಂಗ್, ಬಾಬಿ ಸಿಂಗ್, ಪ್ರದೀಪ್ ಪಾಂಡೆ, ಯಶ್ ಕುಮಾರ್.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಗಳನ್ನು ಯಾವ ಚಾನೆಲ್ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ?
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ 3 ಚಾನೆಲ್ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ಆನ್‌ಲೈನ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.