ಮಾಜಿ ಪ್ರಧಾನಿ ಭಾರತ ರತ್ನ ದಿ.ಆಟಲ್ ಬಿಹಾರಿ ವಾಜಿಪೇಯಿ ಅವರ ಜನ್ಮ ಶತಮಾನೋತ್ಸವ ಆಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 14 : ರಾಜ್ಯಾದ್ಯಂತ ನಡೆಯುತ್ತಿರುವ ಮಾಜಿ ಪ್ರಧಾನಿ ಭಾರತ ರತ್ನ ದಿ.ಆಟಲ್ ಬಿಹಾರಿ ವಾಜಿಪೇಯಿ ಅವರ ಜನ್ಮ ಶತಮಾನೋತ್ಸವ ಆಚರಣೆ ನಿಮಿತ್ತ ಆಟಲ್ ಜೀ ಅವರೊಂದಿಗೆ ಒಡನಾಡಿ ಹೊಂದಿದ್ದ ರಾಜ್ಯದ ಹಿರಿಯ ಕಾರ್ಯಕರ್ತರ ಮನೆಗೆ ಭೇಟಿ ನೀಡುವ
ಕಾರ್ಯಕ್ರಮದ ಅಂಗವಾಗಿ ಬಿಜೆಪಿಯ ಹಿರಿಯ ನಾಯಕರಾದ ಎಂ.ಪಿ.ಗುರುರಾಜ್ ಹಾಗೂ ಎಂ. ರಾಘವೇಂದ್ರ ರವರಿಗೆ ಅವರ
ನಿವಾಸದಲ್ಲಿ ಅವರ ಪತ್ನಿ ಸಮೇತರಾಗಿ ಜಿಲ್ಲಾ ಸಮಿತಿವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲು,
ಹಾರ ಹಾಗೂ ಅಟಲ್‍ಜೀಯವರ ಭಾವಚಿತ್ರ ಇರುವ ಸ್ಮರಣ ಸಂಚಿಕೆಯನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಇರ್ವರು ಅಟಲ್‍ಜೀಯವರ ಜೊತೆಯಲ್ಲಿ ಕಳೆದ ಸಮಯವನ್ನು ನೆನಪಿಸಿಕೊಂಡು ಅವರು 1986-
87ನೇ ಸಾಲಿನಲ್ಲಿ ಕಾರ್ಯಕ್ರಮದ ನಿಮ್ಮಿತ್ತ ದಾವಣಗೆರೆ ಹಾಗೂ ಬೆಂಗಳೂರಿಗೆ ಬಂದಾಗ ಅಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡಿ
ಚಿತ್ರದುರ್ಗ ಜಿಲ್ಲಾ ಬಿಜೆಪಿ ಘಟಕದಿಂದ ಸನ್ಮಾನವನ್ನು ಮಾಡಲಾಯಿತೆಂದು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಮಧುಗಿರಿ
ಜಿಲ್ಲಾ ಅಧ್ಯಕ್ಷ ಹನುಮಂತೇಗೌಡ, ನಗರಾಬೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದಿನಾಥ್, ರಾಜ್ಯ ರೈತ ಮೋರ್ಚಾದ
ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ಖಂಜಾಚಿ ಮಾಧುರಿ ಗೀರೀಶ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಜಿಲ್ಲಾ ಪ್ರಧಾನ
ಕಾರ್ಯದರ್ಶಿ ಸಂಪತ್ ಕುಮಾರ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ ಯಾದವ್, ಜಿಲ್ಲಾ ಕಾರ್ಯಕಾರಿನಿ ಸದಸ್ಯ
ಕೆ.ಶಿವಣ್ಣಚಾರ್, ಯಶವಂತ ಹಾಗೂ ಕಿರಣ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *