ಏ.20 ರಂದು ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ಶತಮಾನೋತ್ಸವ ಹಾಗೂ ಶ್ರೀ ಯಾದವಾನಂದ ಸ್ವಾಮಿಗಳ 16ನೇ ಪಟ್ಟಾಭೀಷೇಕ ಸಮಾರಂಭ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 7 : ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ಶತಮಾನೋತ್ಸವ ಹಾಗೂ ಶ್ರೀ ಯಾದವಾನಂದ ಸ್ವಾಮಿಗಳ 16ನೇ ಪಟ್ಟಾಭೀಷೇಕ ಸಮಾರಂಭವೂ ಏ. 20ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ಜೆಲ್ಲೆಯ ಚಿಕ್ಕೂಡಿ ಲೋಕಸಭಾ ಕ್ಷೇತ್ರದ ಅಮಟೂರು ಬಾಳಪ್ಪರವರ ಸ್ಮರಣಾರ್ಥ ಮಂಟಪದ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಕರ್ನಾಟಕ ರಾಜ್ಯ ಗೊಲ್ಲ ಸಂಘದ ಅಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಗೊಲ್ಲ (ಯಾದವ)
ಸಂಘವು 1924ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಸದರಿ ಸಂಘವು ಹಲವಾರು ಹಿರಿಯರ ಮಾರ್ಗದರ್ಶನದಲ್ಲಿ ನಡೆದುಕೊಂಡು ಬಂದು 2024ಕ್ಕೆ 100 ವರ್ಷಗಳನ್ನು ಪೂರೈಸಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 25 ರಿಂದ 30 ಲಕ್ಷಗಳಷ್ಟು ಗೊಲ್ಲ
ಜನಾಂಗವಿದ್ದು ಗೊಲ್ಲ, ಗೋಪಾಲ, ಹಣಬರು, ಯಾದವ, ಕಾಡುಗೊಲ್ಲ, ಆಸ್ತನಾಗೊಲ್ಲ, ಯಾದವ್, ಅಡವಿಗೊಲ್ಲ, ಗೋಪಾಲಿ,
ಗೌಳಿ, ಗೌಲಿ, ಗಾವಲಿ, ಗಾವಿ, ಹಣಬರು, ಹಟಣಬರು, ಕಾವಡಿ, ಕೊಲಾಯನ್, ಕೋನಾರ್, ಕೊನ್ನೂರ್. ಕೃಷ್ಣ ಗಾವಲಿ,
ಕೃಷ್ಣಗೊಲ್ಲ, ಮಣಿಯಾನಿ, ಊರಾಲಿ ಜಾತಿಗಳಿಂದ ಗುರುತಿಸಲ್ಪಟ್ಟಿರುತ್ತದೆ. ಈ ಜನಾಂಗವು ಕರ್ನಾಟಕ ರಾಜ್ಯದಲ್ಲಿ
ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದು, ಸಂಘಟನೆಯ ಮೂಲಕ
ಬಲವರ್ಧನೆಗೊಳ್ಳಲು ಎಲ್ಲಾ ಪ್ರಯತ್ನಗಳನ್ನು ಸಂಘವೂ ಮಾಡುತ್ತಿದೆ ಎಂದರು.

ಬೆಂಗಳೂರು ದಕ್ಷಿಣ ಜಿಲ್ಲೆ, ಕೆಂಗೇರಿ ಹೋಬಳಿ, ಕುಂಬಳಗೋಡು ಗ್ರಾಮದ ಸರ್ವೆ ನಂ.30ರಲ್ಲಿ 4 ಎಕರೆ ಜಮೀನನ್ನು ಶ್ರೀ
ಯಾದವಾನಂದ ಸ್ವಾಮೀಜಿಗಳ ಶಾಖಾ ಮಠ ಹಾಗೂ ಗೋಶಾಲೆ ನಿರ್ಮಾಣಕ್ಕೆ ಂಜೂರು ಮಾಡುವಂತೆ ಕೋರಿ ಪ್ರಸ್ತಾವನೆ
ಸರ್ಕಾರದ ಹಂತದಲ್ಲಿದೆ.ಶ್ರೀಗಳ ೧೬ನೇ ವರ್ಷದ ಪಟ್ಟಾಭಿಷೇಕವನ್ನು ಆಚರಿಸುವ ಸಲುವಾಗಿ ಹಾಗೂ ಕರ್ನಾಟಕ ರಾಜ್ಯ ಗೊಲ್ಲ
(ಯಾದವ) ಹಣಬರ ಸಂಘದ ಶತಮಾನೋತ್ಸವವನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಆಮಬೂರು
ವಾಳಪ್ಪರವರ ಸ್ಮರಣಾರ್ಥ ಮಂಟಪದಲ್ಲಿ ಆಚರಿಸಲಾಗುವುದು.

ಈ ಸಮಾರಂಭವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದು, ಉಪಮುಖ್ಯ ಮಂತ್ರಿಗಳಾದ ಡಿ.ಕೆ
ಶಿವಕುಮಾರ್,ಗೃಹ ಸಚಿವರಾದ ಜಿ. ಪರಮೇಶ್ವರ್,ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಲಕ್ಕಿ ಹೆಬ್ಬಾಳ್ಕರ್ ಮಾಜಿ ಶಾಸಕರಾದ ಶ್ರೀಮತಿ ಕೆ. ಪೂರ್ಜೆಮಾ
ಶ್ರೀನಿವಾಸ್, ಹಾಲಿ ಶಾಸಕ ಧೀರಣ್ ಮುನಿರಾಜು ಮತ್ತು ಎಂ. ನಾಗರಾಜ್ ಯಾದವ್ ಮತ್ತು ಬೆಳಗಾವಿ ಜಿಲ್ಲೆ ಶಾಸಕರು
ಮಾಜಿ ಸಂಸದ ಪಿ. ಕೋದಂಡರಾಮಯ್ಯ ಮಾಜಿ ಶಾಸಕರಾದ ಎ.ವಿ. ಉಮಾಪತಿ ಶ್ರೀಮತಿ ಜಯಮ್ಮ ಬಾಲರಾಜ್ ಸೇರಿದಂತೆ
ಇತರರು ಭಾಗವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಹಣಬರ ಸಂಘದ ಶತಮಾನೋತ್ಸವ ಪಟ್ಟಾಭಿಷೇಕವನ್ನು ವಿಜೃಂಭಣೆಯಿಂದ ಆಚರಿಸಲು
ಸಿದ್ದತೆ ನಡೆದಿದ್ದು ಈ ಸಂದರ್ಭದಲ್ಲಿ ಶತಮಾನೋತ್ಸವ ಸ್ಮರಣ ಸಂಚಿಕೆ “ಯಾದವ ಸಂಪದ” : ಕೈಪಿಡಿಯನ್ನು ಬಿಡುಗಡೆ
ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ರಾಜ್ಯ ಗೊಲ್ಲ ಸಂಘದ ಅಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್‌ರವರ ಹುಟ್ಟು ಹಬ್ಬದ ಅಂಗವಾಗಿ ಅಭೀಮಾನಿಗಳು ತಂದಿದ್ದ ಕೇಕ್‌ನ್ನು ಕತ್ತರಿಸುವುದರ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಅಭೀಮಾನಿಗಳ ಎದುರಿನಲ್ಲಿ ಆಚರಿಸಿಕೊಂಡರು, ಇದೆ ಸಮಯದಲ್ಲಿ ಅವರನ್ನು ಅವರ ಅಭೀಮಾನಿಗಳು ಶಾಲು, ಹಾರ, ತುರಾಯಿಗಳನ್ನು ನೀಡುವುದರ ಮೂಲಕ ಗೌರವಿಸಿದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು ಸಮಾಜದ ಮುಖಂಡರಾದ ಹಾಲಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷರಾದ ಬಾಲರಾಜ್,
ಉಪಾಧ್ಯಕ್ಷರಾದ ಸಿದ್ದಪ್ಪ, ರಮೇಶ್, ಪಾಪಣ್ಣ ಸೇರಿದಂತೆ ಇತರರು ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 1

Leave a Reply

Your email address will not be published. Required fields are marked *