
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 18 ನಗರದ ಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಭಾರತೀಯ ಸಂಸ್ಕøತಿ ಪ್ರಕಾರ ಶಿಕ್ಷಣದ ಆರಂಭವು ಪ್ರತಿಯೊಂದು ಮಗುವಿನ ಜೀವನದಲ್ಲಿ ಮಹತ್ತರವಾದ ಕಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಪ್ರಯಾಣವನ್ನು ಶುಭದೊಂದಿಗೆ ಆರಂಭ ಮಾಡಲಾಗುವುದು. ಅಕ್ಷರ ಅಭ್ಯಾಸವನ್ನು ಮಾಡಿಸುವುದರ ಮೂಲಕ ಜ್ಞಾನ ದೇವತೆಯಾದ ಸರಸ್ವತಿಯ ಆರ್ಶೀವಾದವನ್ನು ಪಡೆದು ವಿದ್ಯೆ ಆರಂಭಿಸುವ ಧಾರ್ಮಿಕ ಕಾರ್ಯವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಭಾಗವಹಿಸುವುದರ ಮೂಲಕ ಸರಸ್ವತಿ ಪೂಜೆಯನ್ನು ನಡೆಸಿ ಮಕ್ಕಳ ಕೈಯಿಂದ ಅಕ್ಷರ ಅಭ್ಯಾಸವನ್ನು ಮಾಡಿಸಿದರು. ತಮ್ಮ ಮಗುವಿನ ಮುಂದಿನ ವಿದ್ಯಾಭ್ಯಾಸ ಯಾವುದೇ ತೊಂದರೆ ಇಲ್ಲದೆ ಸರಾಗವಾಗಿ ನಡೆಯಲಿ ಎಂದು ಪ್ರಾರ್ಥಿಸಿದರು.
ಈ ಸಮಯದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಉತ್ತಮ್‍ಚಂದ್ ಸುರಾನ , ಕಾರ್ಯದರ್ಶಿ ಸುರೇಶ್‍ಕುಮಾರ್ ಸಿಸೋಡಿಯಾ , ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಜಿಮಾ ಸ್ವಾಲೆಹಾ, ಶ್ರೀಮತಿ ಶಾಂತಕುಮಾರಿ, ಶಿಕ್ಷಕರು ಪೋಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.