ಬೋರ್​ವೆಲ್​ಗೆ ಬಿದ್ದ ಮಗು; ಸತತ ಕಾರ್ಯಾಚರಣೆ ಬಳಿಕ ಆಗಿದ್ದೇ ಬೇರೆ.

ಗಾಂಧಿನಗರ: ಬೋರ್​​ವೆಲ್​​ನಲ್ಲಿ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ಗುಜರಾತ್​ನ ದ್ವಾರಕ ಜಿಲ್ಲೆಯ ರನ್ ಗ್ರಾಮದಲ್ಲಿ ನಡೆದಿದೆ.

ತೆರೆದ ಬೋರ್​​ವೆಲ್​ಗೆ​ ಬಿದ್ದಿದ್ದ ಏಂಜೆಲ್ ಸಖ್ರಾ 3 ವರ್ಷದ ಬಾಲಕಿ.

ಮನೆಯ ಅಂಗಳದಲ್ಲಿ ಆಟವಾಡುತ್ತಿರುವಾಗ ಅಲ್ಲಿಯೇ ಇದ್ದ ತೆರೆದ ಬೋರ್‌ವೆಲ್‌ಗೆ ಬಾಲಕಿ ಬಿದ್ದಿದ್ದಳು. ಬಳಿಕ ಮಾಹಿತಿ ಎಲ್ಲ ಕಡೆ ಹಬ್ಬುತ್ತಿದ್ದಂತೆ ಜಿಲ್ಲಾಡಳಿತದಿಂದ ರಕ್ಷಣೆ ಕಾರ್ಯ ಕೈಗೊಳ್ಳಲಾಗಿತ್ತು. ಇದರಲ್ಲಿ ಇಂಡಿಯನ್ ಆರ್ಮಿ ಮತ್ತು ಎನ್​ಡಿಆರ್​​ಎಫ್, ಅಗ್ನಿಶಾಮಕ​ ಸಿಬ್ಬಂದಿ ಕೂಡ ಭಾಗಿಯಾಗಿದ್ದರು.

ಸತತ 8 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಮಾಡಿ ಸುಮಾರು 35 ಫೀಟ್ ಆಳಕ್ಕೆ ಬಿದ್ದಿದ್ದ ಬಾಲಕಿಯನ್ನು ಹೊರ ತೆಗೆಯಲಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಆರೋಗ್ಯ ಸಿಬ್ಬಂದಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ತಕ್ಷಣ ಖಂಭಾಲಿಯಾ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್​​ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದ್ರೆ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆಯೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Source: https://m.dailyhunt.in/news/india/kannada/newskannada-epaper-newskan/bor+vel+ge+biddha+magu+satata+kaaryaacharane+balika+aagidde+bere-newsid-n570777872?listname=topicsList&topic=for%20you&index=13&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *