ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 23
ಚಿತ್ರದುರ್ಗ ನಗರದ ತೋಟಗಾರಿಕೆ ಇಲಾಖೆಯವತಿಯಿಂದ ಕಳೆದ 20 ರಿಂದ ಮೂರು ದಿನಗಳ ಕಾಲ ನಡೆದ 33ನೇ ಫಲ ಪುಷ್ಪ ಪ್ರದರ್ಶನದಲ್ಲಿ 10ಕ್ಕೂ ಹೆಚ್ಚು ಚಿತ್ರದುರ್ಗದ ಕಲಾವಿದರುಗಳು ತಮ್ಮ ಚಿತ್ರಕಲೆ ಯನ್ನು ಪ್ರದರ್ಶನ ಮಾಡಿದರು.
ಚಿತ್ರಕಲಾವಿದ ನಾಗರಾಜ್ ಬೇದ್ರೇ ನೇತೃತ್ವದಲ್ಲಿ ನಡೆದ ಈ ಚಿತ್ರಕಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಉದ್ಘಾಟಿಸಿ ಅಲ್ಲಿ ಪ್ರದರ್ಶನಗೊಂಡ ಚಿತ್ರಕಲೆಗಳನ್ನು ವೀಕ್ಷಣೆ ಮಾಡಿದರು.
ಇದರಲ್ಲಿ ಲಂಬಾಣಿ ತಾಂಡ ಹುಡುಗಿ, ಕಾಡಿನ ಸಿಂಹ, ಕೃಷ್ಣ ಮತ್ತು ರಾಧೆ, ಕಾಡುಗೊಲ್ಲ, ಬುಡುಕಟ್ಟು ಸಮುದಾಯದ ಬಾವಚಿತ್ರ, ಚಿತ್ರದುರ್ಗ ಕಲ್ಲಿನ ಕೋಟೆ, ಹಂಪೆಯ ಚಿತ್ರಗಳು, ಪೆನ್ಸಿಲ್ ಹಾಗೂ ಪೆಂಡರಾಯ್ ಹೀಗೆ ಅಕ್ರಾಲಿಕ್ ಜಲ ವರ್ಣ ಆಯಿಲ್ ಕಲರ್ ಸೇರಿದಂತೆ ವಿವಿಧ 100ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಂಡವು.
ಇದರಲ್ಲಿ ಸುವರ್ಣಮ್ಮ, ಜವಳಿ ಶಾಂತಕುಮಾರ್, ಮಾರುತಿ ಕೆ. ನವೀನ್ ಬೇದ್ರೇ, ಶೃತಿ ದೀಕ್ಷಿತ್, ನವ್ಯಶ್ರೀ ಹಾಗೂ ಸಾಗರ್ ರವರು ರಚನೆ ಮಾಡಿದ ಚಿತ್ರಗಳು ಪ್ರದರ್ಶನಗೊಂಡವು.