
India vs England 2nd Test: ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಬದುಕಿನಲ್ಲೇ ಅತ್ಯಂತ ಮೆಚ್ಚುಗೆಯ ಕ್ಯಾಚ್ ಒಂದನ್ನು ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಕ್ರಿಕೆಟ್ ಲೋಕವೇ ಅಚ್ಚರಿಪಡುತ್ತಿದೆ.
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆ, ಇಂಗ್ಲೆಂಡ್’ನ ಎರಡನೇ ಇನ್ನಿಂಗ್ಸ್‌ನಲ್ಲಿ, ರೋಹಿತ್ ಶರ್ಮಾ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಸೆತದಲ್ಲಿ ಇಂಗ್ಲಿಷ್ ಬ್ಯಾಟ್ಸ್‌ಮನ್ ಓಲಿ ಪೋಪ್ ಅವರ ಅಸಾಧ್ಯ ಕ್ಯಾಚ್ ಪಡೆದಿದ್ದಾರೆ.
ರೋಹಿತ್ ಶರ್ಮಾ ಈ ಕಠಿಣ ಕ್ಯಾಚ್ ಹಿಡಿದಿದ್ದು ಜಸ್ಟ್ 0.45 ಸೆಕೆಂಡ್’ನಲ್ಲಿ.
ಇಂಗ್ಲೆಂಡ್’ನ ಎರಡನೇ ಇನ್ನಿಂಗ್ಸ್’ನಲ್ಲಿ 29 ನೇ ಓವರ್’ನಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಬೌಲಿಂಗ್ ಮಾಡಲು ಕರೆದಿದ್ದಾರೆ. 29ನೇ ಓವರ್’ನಲ್ಲಿ ರವಿಚಂದ್ರನ್ ಅಶ್ವಿನ್ ಅವರ ಎರಡನೇ ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಒಲಿ ಪೋಪ್ ಶಾರ್ಪ್ ಕಟ್ ಶಾಟ್ ಹೊಡೆಯಲು ಯತ್ನಿಸಿದ್ದಾರೆ. ಆದರೆ ಚೆಂಡು ಓಲಿ ಪೋಪ್ ಅವರ ಬ್ಯಾಟ್’ನ ಅಂಚಿಗೆ ಬಡಿದ ತಕ್ಷಣ, ಅದು ಸ್ಲಿಪ್ ಮತ್ತು ವಿಕೆಟ್ ಕೀಪರ್ ನಡುವೆ ವೇಗವಾಗಿ ಮೇಲಕ್ಕೆ ಚಲಿಸಿದೆ. ಆಗಲೇ ಎಚ್ಚೆತ್ತ ರೋಹಿತ್, ಮಿಂಚಿನ ವೇಗದಲ್ಲಿ ಕೇವಲ 0.45 ಸೆಕೆಂಡುಗಳಲ್ಲಿ ಕ್ಯಾಚ್ ಪಡೆದು ಟೀಂ ಇಂಡಿಯಾಗೆ ಅಗತ್ಯವಾಗಿ ಬೇಕಾಗಿದ್ದ ವಿಕೆಟ್ ಕಿತ್ತಿದ್ದಾರೆ
ರೋಹಿತ್ ಶರ್ಮಾ ಕ್ಯಾಚ್ ನೋಡಿ ಒಲ್ಲಿ ಪೋಪ್ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೆ, ಬೌಲಿಂಗ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಆಶ್ಚರ್ಯಚಕಿತರಾಗಿದ್ದಾರೆ. ರೋಹಿತ್ ಶರ್ಮಾ ಹಿಡಿದ ಈ ಕ್ಯಾಚ್’ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1