ದೊಣ್ಣೆಯಿಂದ ಹೊಡೆದು, ಕೈ ಮೇಲೆ ಕಾಲಿಟ್ಟು ಕಿರುಚಿದ್ರೂ ಬಿಡದೆ ಅಪ್ಪನ ಮೇಲೆಯೇ ವಿಕೃತಿ ಮೆರೆದ ಹೆಣ್ಣುಮಕ್ಕಳು.

ಭೋಪಾಲ್:‌ ಕೆಲವು ದಿನಗಳ ಹಿಂದೆಯಷ್ಟೇ ಪುತ್ರಿಯೇ ತನ್ನ ತಾಯಿಯ ತೊಡೆಕಚ್ಚಿ, ಕೂದಲು ಎಳೆದು ಅಮಾನವೀಯವಾಗಿ ನಡೆದುಕೊಂಡ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಇಂಥದ್ದೇ ವೀಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ ಹೆಣ್ಣು ಮಕ್ಕಳೇ ತಮ್ಮ ತಂದೆಗೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ ಕೆಲವು ದಿನಗಳ ನಂತರ ಈ ವಿಡಿಯೋ ಬಹಿರಂಗವಾಗಿದೆ. ಸಂತ್ರಸ್ತನನ್ನು ಹರೇಂದ್ರ ಮೌರ್ಯ ಎಂದು ಗುರುತಿಸಲಾಗಿದೆ. ಇವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಮತ್ತು ಪರೀಕ್ಷೆಯಿಂದ ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಕೊಲೆಯೇ ಎಂಬ ಪ್ರಶ್ನೆ ಎದ್ದಿದೆ.

ಎಲೆಕ್ಟ್ರಿಷಿಯನ್ ಆಗಿರುವ ಹರೇಂದ್ರ ಅವರಿಗೆ ಒಂದು ಗಂಡು ಹಾಗೂ ಮೂವರು ಹೆಣ್ಣುಮಕ್ಕಳು. ಮಾರ್ಚ್ 1 ರಂದು, ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳ ವಿವಾಹವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದ ಬಳಿಕ ಅವರ ಪತ್ನಿ ಬೇರೆಯಾಗಲು ಬಯಸಿದ್ದು, ತಂದೆಯ ಮನೆಗೆ ಹೋಗುವುದಾಗಿ ಹೇಳಿದರು. ಇದರಿಂದ ಬೇಸರಗೊಂಡ ಹರೇಂದ್ರ, ಕೋಣೆಗೆ ತೆರಳಿ ಬೀಗ ಹಾಕಿಕೊಂಡರು. ಹೊತ್ತಾದರೂ ಅವರು ಕೋಣೆಯಿಂದ ಹೊರಬಾರದಿದ್ದರಿಂದ ಮನೆಯವರು ಹುಡುಕಲು ಪ್ರಾರಂಭಿಸಿದರು. ಬಳಿಕ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದನು. ಕೂಡಲೇ ಹರೇಂದ್ರ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿದ್ದು, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

https://x.com/abhinaymaths/status/1899324259056709673?ref_src=twsrc%5Etfw%7Ctwcamp%5Etweetembed%7Ctwterm%5E1899324259056709673%7Ctwgr%5E1cf5f24b7c1d66d1fc31a49a43f8a2cfabc6782c%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fnavasamaja-epaper-dh2ea6744787ac493196e3f91a33ee756a%2Fshockingdonneyindhahodedukaimelekaalittukiruchidrubidadeappanameleyevikrutimeredhahennumakkaluvideo-newsid-n655544835

ಮನೆಯಲ್ಲಿ ಆಗಾಗ್ಗೆ ಜಗಳವಾಗುತ್ತಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೆರೆಹೊರೆಯವರು ಆರೋಪಿಸಿದ್ದಾರೆ. ಆದರೆ ಹರೇಂದ್ರ ಅವರ ಮಾತ್ರ ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳ ನಡುವೆ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತು. ವೀಡಿಯೊದಲ್ಲಿ, ಅವರ ಇಬ್ಬರು ಹೆಣ್ಣುಮಕ್ಕಳು ಅವರನ್ನು ಕೋಲಿನಿಂದ ಹೊಡೆಯುತ್ತಿರುವುದನ್ನು ಮತ್ತು ಹರೇಂದ್ರ ನೋವಿನಿಂದ ಕಿರುಚುತ್ತಿರುವಾಗ ಅವರ ಪತ್ನಿ ಅವರ ಕಾಲುಗಳನ್ನು ಹಿಡಿದುಕೊಂಡಿರುವುದನ್ನು ತೋರಿಸಲಾಗಿದೆ.

ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಹರೇಂದ್ರ ಅವರ ಮಗ ಒಂದು ಹಂತದಲ್ಲಿ ತನ್ನ ಸಹೋದರಿಯರನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಅವನನ್ನೂ ಹೊಡೆಯುವುದಾಗಿ ಬೆದರಿಸುತ್ತಾರೆ. ಹೆಣ್ಣು ಮಕ್ಕಳಲ್ಲಿ ಒಬ್ಬಳು ತಂದೆಯ ತೋಳನ್ನು ತನ್ನ ಕಾಲಿನಿಂದ ಒತ್ತಿ ಹಲ್ಲೆ ಮುಂದುವರಿಸುವುದನ್ನು ಕಾಣಬಹುದಾಗಿದೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ದೀಪಾಲಿ ಚಂದೋರಿಯಾ, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *