ಡಿವೈಡರ್ ಮುರಿದು, ಎದುರು ರಸ್ತೆಯಲ್ಲಿ ಪಲ್ಟಿಯಾದ ಕಾರು; ಪಂತ್ ಕಾರು ಅಪಘಾತದ ಸಿಸಿಟಿವಿ ದ್ಯಶ್ಯ ನೋಡಿ

rishabh pant car accident cctv footage goes viral psr

ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಶುಕ್ರವಾರ ಬೆಳಗ್ಗೆ ಕಾರು ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದಾಗ ಪಂತ್ ಅವರ ಕಾರು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್​ಗೆ ಡಿಕ್ಕಿ ಹೊಡೆದು ಎದುರು ರಸ್ತೆಯಲ್ಲಿ ಪಲ್ಟಿಯಾಗಿದೆ. ಸದ್ಯ ಅವರು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಅವರ ತಲೆ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಮಧ್ಯೆ ಪಂತ್ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗಮನಿಸಿದರೆ, ಪಂತ್ ಅತಿ ವೇಗದಲ್ಲಿ ಕಾರನ್ನು ಚಲಾಯಿಸುತ್ತಿರುವುದನ್ನು ಕಾಣಬಹುದಾಗಿದೆ. ಬಳಿಕ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡ್ ಮೇಲೆ ಹತ್ತಿದ್ದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಇದಾದ ಬಳಿಕ ಡಿವೈಡರ್ ಮೇಲೆ ಬಹಳ ದೂರ ಹೋದ ಕಾರು ಬಳಿಕ ಎದುರು ರಸ್ತೆಯಲ್ಲಿ ಪಲ್ಟಿಯಾಗಿದೆ.

ವೈದ್ಯರ ಹೇಳಿಕೆಯಲ್ಲಿ ಏನಿದೆ?

ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವೆಬ್‌ಸೈಟ್ ಪ್ರಕಾರ, ಪಂತ್‌ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದ ಡಾ. ಸುಶೀಲ್ ನಗರ್ ಅವರ ಹೇಳಿಕೆಯ ಪ್ರಕಾರ, ಪಂತ್‌ಗೆ ತಲೆ ಮತ್ತು ಮೊಣಕಾಲು ಗಾಯಗಳಾಗಿವೆ. ಮೊದಲ ಎಕ್ಸ್-ರೇ ಪ್ರಕಾರ ಯಾವುದೇ ಮೂಳೆ ಮುರಿದಿಲ್ಲ. ಅಲ್ಲದೆ ಕಾರಿಗೆ ಬೆಂಕಿ ಹೊತ್ತಿಕೊಂಡರೂ ಸಹ ಪಂತ್​ಗೆ ಎಲ್ಲಿಯೂ ಸುಟ್ಟ ಗಾಯಗಳಾಗಿಲ್ಲ. ಹಣೆಯ ಮೇಲೆ, ಎಡಗಣ್ಣಿನ ಮೇಲೆ, ಮೊಣಕಾಲು ಮತ್ತು ಹಿಂಭಾಗದಲ್ಲಿ ಗಾಯಗಳಾಗಿವೆ ಎಂದು ವರದಿಯಾಗಿದೆ.

source https://tv9kannada.com/sports/cricket-news/rishabh-pant-car-accident-cctv-footage-goes-viral-psr-au14-493087.html

Leave a Reply

Your email address will not be published. Required fields are marked *