ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ 27 ಚಿತ್ರದುರ್ಗ ನಗರದ ಕರುವಿನಕಟ್ಟೆ ವೃತ್ತದಲ್ಲಿನ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆಯುತ್ತಿರುವ ಶಿವರಾತ್ರಿ ಸಪ್ತಾಹದ ಅಂತಿಮ ದಿನವಾದ ಇಂದು ಶಿವಲಿಂಗಾನಂದ ಶ್ರೀಗಳು ಕೌದಿ ವಸ್ತ್ರವನ್ನು ಧರಿಸುವುದರ ಮೂಲಕ ಭಕ್ತಾಧಿಗಳಿಗೆ
ದರ್ಶನಾರ್ಶೀವಾದವನ್ನು ನೀಡಿದರು.

ಇಂದು ಸಂಜೆ ಶ್ರೀಮಠದ ಆವರಣದಲ್ಲಿ ಚಿಂದಿ ಬಟ್ಟೆಯಿಂದ ನೇಯ್ಗೆ ಮಾಡಿದ ವಸ್ತ್ರವನ್ನು ಧರಿಸಿದ ಶ್ರೀಗಳು ಒಂದು ಕೈಯಲ್ಲಿ
ಕಮಂಡಲವನ್ನು ಹಿಡಿದುಕೊಂಡು ಮ್ತತೊಂದು ಕೈಯಲ್ಲಿ ಮಣ್ಣಿನ ತಟೆಯನ್ನು ಹಿಡಿದು ಭಕ್ತಾಧಿಗಳು ನೀಡಿದ ಕಾಣಿಕೆಯನ್ನು ಸ್ವೀಕಾರ
ಮಾಡಿ ತಲೆಯಲ್ಲಿ ರುದ್ರಾಕ್ಷಿ ಕೀರಿಟವನ್ನು ಧರಿಸಿ ಮಠದ ಆವರಣದಲ್ಲಿ ಮೂರು ಸುತ್ತನ್ನು ತಿರುಗುವುದು ಮೂಲಕ ಕೌದಿ ಪೂಜೆಗೆ
ಮಂಗಳವನ್ನು ಹಾಡಲಾಯಿತು.
ಈ ಸಮಯದಲ್ಲಿ ಆಪಾರ ಸಂಖ್ಯೆಯ ಭಕ್ತಾಧಿಗಳಾದ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಶ್ರೀಗಳ ಕಾಲಿಗೆ ಎರಗುವುದರ
ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಈ ಕೌದಿ ಪೂಜೆಯ ಉದ್ದೇಶ, ಸಕಲ
ಜೀವಾತ್ಮಾರಿಗೆ ಲೇಸನ್ನು ಬಯಸುವುದು ಆಗಿದೆ. ಇದು ಬಹಳಷ್ಟು ವರ್ಷದಿಂದ ಸಾಗಿ ಬಂದಿರುವ ಪರಂಪರೆಯಾಗಿದೆ. ಸಕಲ
ಜೀವಿಗಳಿಗೆ ಶುಭವನ್ನು ಕೋರುವುದು ಹಾರೈಸುವುದು ಕೌದಿ ಪೂಜೆಯನ್ನು ನಡೆಸಲಾಗುತ್ತಿದೆ. ಎಲ್ಲಾ ಬಟ್ಟೆಯ ಚಿಂದಿಗಳಿಂದ
ತಯಾರು ಮಾಡಿದ ವಸ್ತ್ರವಾಗಿದೆ, ಇದನ್ನು ಧರಿಸುವುದರಿಂದ ಯಾವುದೇ ರೋಗಗಳು ಬರುವುದಿಲ್ಲ ಎಂದ ಶ್ರೀಗಳು ಜೀವನದಲ್ಲಿ
ಮತಿಗಳು ಭೀನ್ನವಾಗಿರುತ್ತವೆ ಸಂಸ್ಕಾರಗಳು ಭೀನ್ನವಾಗಿರುತ್ತವೆ. ಈ ಭೀನ್ನತೆಯಲ್ಲಿ ಸಕಲ ಜೀವಾತ್ಮನು ಏಕಗ್ರತೆಯನ್ನು
ಮಾಡಿಸಿದಾಗ ನಮ್ಮಲ್ಲಿ ಏಕಾಗ್ರತೆ ಕಾಣುತ್ತದೆ ಎಂಬ ಅರ್ಥದಿಂಧ ಸಿದ್ದಾರೂಢ ಮಹತ್ತರು ಈ ಕೌದಿ ಪೂಜೆಯನ್ನು ಪ್ರಾರಂಭ
ಮಾಡಿದರು ಎಂದರು.
ಕುಲ ಬೇದ ಜಾತಿ ಬೇದ ವರ್ಗ ಬೇಧ ವರ್ಣ ಬೇಧವನ್ನು ಹೂರತು ಪಡಿಸಿ ಮಾನವ ಕುಲಕ್ಕೆ ಒಳಿತಾಗÀಲಿ ಎಂಬ ಉದ್ದೇಶ ಇದಾಗಿದೆ.
ಆಧ್ಮಾತ್ ಚಿಂತನೆ ಒಂದೇ ಸಾಧನೆ ಎಂದು ತೋರಿಸಿದವರು ಸಿದ್ದರೂಢರು. ಕೌದಿ ಪೂಜೆಯನ್ನು ಮಾಡುವುದರ ಮೂಲಕ ಎಲ್ಲರಿಗೂ
ಹಿತ ಶುಭವನ್ನು ಕೋರಲಾಗುವುದು ಎಂದು ಶಿವಲಿಂಗಾನಂಧ ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ 95ನೇ ಮಹಾ ಶಿವರಾಥ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ವಿಜಯಕುಮಾರ್ ಶ್ರೀ ಮಠದ ಭಕ್ತರಾದ ನಾಗರಾಜ್
ಸಂಗಂ, ಸತೀಶ್, ಗೋಪಾಲಸ್ವಾಮಿ ನಾಯ್ಕ್, ಪೈಲ್ವಾನ್ ತಿಪ್ಪೇಸ್ವಾಮಿ, ಪ್ರಶಾಂತ್ ಪ್ರತಾಪಗ ಜೋಗಿ ಚಿನ್ಮಯಾನಂದ ನಿರಂಜನ
ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ರೇಖಾ, ವೆಂಕಟೇಶ್, ಸೇರಿದಂತೆ ಇತರರು ಭಾಗವಹಿಸಿದ್ದರು.