
ಬೆಂಗಳೂರು : ಮಣಭಾರದ ಶಾಲಾ ಬ್ಯಾಗ್ ತೂಕವನ್ನು ವೈಜ್ಞಾನಿಕವಾಗಿ ಕಡಿಮೆಗೊಳಿಸಲು ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದೇ ಇದ್ದ ಪಠ್ಯಪುಸ್ತಕವನ್ನು ಎರಡು ಭಾಗವಾಗಿ ವಿಂಗಡಿಸಿ ಮುದ್ರಿಸಿ ನೀಡಲಿದೆ.
ಅರ್ಧವಾರ್ಷಿಕ ಪರೀಕ್ಷೆವರೆಗೂ ಒಂದು ಪುಸ್ತಕ, ಮಧ್ಯವಾರ್ಷಿಕ ಬಳಿಕ ವಾರ್ಷಿಕ ಪರೀಕ್ಷೆವರೆಗೂ ಬೋಧಿಸುವ ವಿಷಯಗಳನ್ನು ಮತ್ತೊಂದು ಪುಸ್ತಕವಾಗಿ ಮುದ್ರಿಸಲಾಗುತ್ತದೆ. 2 ಭಾಗ ಮಾಡಿ ಮುದ್ರಿಸುವುದರಿಂದ ಪಠ್ಯಪುಸ್ತಕದ ಭಾಗ ಶೇ.50 ತೂಕ ಕಡಿಮೆಯಾಗಲಿದೆ ಎಂಬ ಅಭಿಪ್ರಾಯಪಟ್ಟಿದೆ.
2024-25ನೇ ಸಾಲಿನಿಂದ ಪಠ್ಯಪುಸ್ತಕಗಳನ್ನು ಸಂಕಲನಾತ್ಮಕ ಮೌಲ್ಯ ಮಾಪನ ರೀತಿಯಲ್ಲಿ ಎಸ್ಎ-1 ಮತ್ತು ಎಸ್ಎ-2 ಗಳಾಗಿ ವಿಂಗಡಿಸಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುವಂತೆ ಕರ್ನಾಟಕ ಪಠ್ಯಪುಸ್ತಕ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಪಠ್ಯಪುಸ್ತಕಗಳ ತೂಕವನ್ನು ಕಡಿಮೆ ಮಾಡಲು 2023ರ ಅ.6ರಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾಧಕ-ಬಾಧಕಗಳನ್ನು ರ್ಚಚಿಸಲಾಗಿತ್ತು. ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಅ.12ರಂದು ನಡೆದ ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
10 ಕೋಟಿ ರೂ. ಹೆಚ್ಚುವರಿ ವೆಚ್ಚ: ನೂತನ ನಿಯಮ ಅಳವಡಿಸಿಕೊಳ್ಳುವುದರಿಂದ ಮಕ್ಕಳ ಶಾಲಾ ಬ್ಯಾಗ್ ತೂಕ ಗಣನೀಯವಾಗಿ ಕಡಿಮೆಯಾಗಲಿದ್ದು, ಬ್ಯಾಗ್ ನಿರ್ವಹಣೆ ಸುಲಭವಾಗಲಿದೆ. ಮಕ್ಕಳ ಮೇಲಿನ ಬೌದ್ಧಿಕ ಒತ್ತಡ ಗಣನೀಯವಾಗಿ ಇಳಿಕೆಯಾಗಲಿದೆ. ಇದಕ್ಕಾಗಿ ಎಸ್ಎ-1 ಮತ್ತು ಎಸ್ಎ-2 ಅನ್ನು ಪ್ರತ್ಯೇಕವಾಗಿ ಮುದ್ರಿಸಬೇಕಾಗುತ್ತದೆ. ಇದರಿಂದ ಪುಸ್ತಕಗಳ ಮುಖಪುಟ ದುಪ್ಪಟ್ಟಾಗಲಿದೆ. ಪ್ರಸ್ತುತ 566 ಶೀರ್ಷಿಕೆಗಳಿದ್ದು, 984 ಶೀರ್ಷಿಕಗಳಾಗಲಿವೆ. ಪುಸ್ತಕಗಳ ಮುದ್ರಣ ವೆಚ್ಚ ಅಂದಾಜು 10 ಕೋಟಿ ರೂ.ಗಳಷ್ಟು ಹೆಚ್ಚಾಗಲಿದೆ. ಈಗಾಗಲೇ 2023-24ನೇ ಸಾಲಿನಲ್ಲಿ ಉಳಿಕೆಯಾಗಿರುವ 27,37,551 ಪಠ್ಯಪುಸ್ತಕಗಳನ್ನು ವ್ಯರ್ಥ ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
2019ರಲ್ಲಿ ವರದಿ ನೀಡಿದ್ದ ಶಿಕ್ಷಣ ಇಲಾಖೆ: ಶಾಲಾ ಬ್ಯಾಗ್ ತೂಕವನ್ನು ಕಡಿಮೆ ಮಾಡಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ಶಿಕ್ಷಣ ತಜ್ಞರು, ಮಕ್ಕಳ ತಜ್ಞರು, ವೈದ್ಯರು, ಕಾನೂನು ಸಲಹೆ ಮತ್ತು ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಅಧ್ಯಯನ ನಡೆಸಿ 2019ರಲ್ಲಿ ಸರ್ಕಾರಕ್ಕೆ ವರದಿ ನೀಡಿತ್ತು.
ಆ ಪ್ರಕಾರ, 1ರಿಂದ 2ನೇ ತರಗಿ ವಿದ್ಯಾರ್ಥಿಗಳಿಗೆ 1.5-2 ಕೆ.ಜಿ, 3ರಿಂದ 5ನೇ ತರಗತಿಗೆ 2-3 ಕೆ.ಜಿ, 6ರಿಂದ 8ನೇ ತರಗತಿಗೆ 3-4 ಕೆ.ಜಿ, 9ಮತ್ತು10ನೇ ತರಗತಿಗೆ 4-5 ಕೆ.ಜಿ. ತೂರವಿರಬೇಕೆಂಬ ಶಿಫಾರಸು ಮಾಡಿತ್ತು. ಈ ಆದೇಶವನ್ನು ಸರ್ಕಾರವು ಅನುಷ್ಠಾನ ಮಾಡಿದೆ. ಆದರೆ, ಪ್ರಾಯೋಗಿಕವಾಗಿ ಖಾಸಗಿ ಶಾಲೆಗಳು ಅಳವಡಿಸಕೊಳ್ಳದಿರುವ ಬಗ್ಗೆ ಇಂದಿಗೂ ದೂರುಗಳು ಬರುತ್ತಿವೆ.
1 ಮತ್ತು 2ನೇ ತರಗತಿ ಮಕ್ಕಳಿಗೆ ಮನೆಗೆಲಸ ನೀಡಬಾರದು, ನಿತ್ಯ ಬೇಕಾದ ಪುಸ್ತಕ ಮಾತ್ರ ತರಲು ಸೂಕ್ತ ವೇಳಾಪಟ್ಟಿ ರಚಿಸಬೇಕು. ನೋಟ್ ಪುಸ್ತಕಗಳು 100 ರಿಂದ 200 ಪುಟಕ್ಕಿಂತ ಹೆಚ್ಚು ಇರಬಾರದು, ಶಾಲೆಗಳಲ್ಲಿಯೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು, ವಿದ್ಯಾರ್ಥಿಗಳು ಪುಸ್ತಕಗಳನ್ನಿಟ್ಟುಕೊಳ್ಳಲು ಲಾಕರ್ ಸೌಲಭ್ಯ ಕಲ್ಪಿಸಬೇಕೆಂಬ ನಿಯಮಗಳನ್ನು ರೂಪಿಸಿತ್ತು.
ಪೂರಕ ಸಲಹೆಗಳು
- ಶಾಲಾ ಪಠ್ಯಪುಸ್ತಕಗಳು ಮಾತ್ರವಲ್ಲದೆ, ಇತರ ಸಾಮಗ್ರಿಗಳಿಂದಲೂ ಬ್ಯಾಗ್ ಹೊರೆ ಹೆಚ್ಚಾಗು ವುದರಿಂದ ಶಾಲಾ ಹಂತದಲ್ಲಿಯೇ ಪ್ರತಿ ಮಗುವಿನ ಬ್ಯಾಗ್ ತೂಕವನ್ನು ಪರಿಶೀಲಿಸಿ ನಿಯಮಗಳ ಪ್ರಕಾರ ಬ್ಯಾಗ್ ತೂಕ ಇರುವಂತೆ ಕ್ರಮ
- ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ಉಸ್ತುವಾರಿ ಅಧಿಕಾರಿಗಳು ಪರಿಶೀಲಿಸಿ ಶಿಕ್ಷಕರಿಗೆ ಸೂಕ್ತ ಮಾಹಿತಿ ನೀಡುವುದು
- ಪ್ರತಿ ಶಾಲೆಯು ಪ್ರತಿ ವಿಷಯ, ಪಠ್ಯಪುಸ್ತಕ, ನೋಟ್ ಪುಸ್ತಕ ಹಾಗು ಕ್ಲಾಸ್ ವರ್ಕ್ ಮಾತ್ರ ಶಾಲಾ ಬ್ಯಾಗ್ನಲ್ಲಿರುವಂತೆ ನೋಡಿಕೊಳ್ಳುವುದು. ಉಳಿದಂತೆ ಎಲ್ಲ ವಿಷಯಗಳು ಸೇರಿ 1 ರಫ್ ನೋಟ್ ಪುಸ್ತಕವಿರುವಂತೆ ನಿಗಾವಹಿಸಲು ತಿಳಿಸಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1