1st standard school admission age limit in karnataka : ಕರ್ನಾಟಕ ರಾಜ್ಯದಲ್ಲಿ ತಮ್ಮ ಮಕ್ಕಳನ್ನು ಒಂದನೇ ತರಗತಿಗೆ ಪ್ರವೇಶ ಪಡೆಯಲು ಬಯಸುತ್ತಿದ್ದ ಹಲವು ಪೋಷಕರಿಗೆ ಒಂದು ಗುಡ್ ನ್ಯೂಸ್ ಅನ್ನು ರಾಜ್ಯ ಸರ್ಕಾರ ನೀಡಿದೆ. ಆರು ವರ್ಷ ಮಕ್ಕಳಿಗೆ ಪೂರೈಸದೇ ಒಂದನೇ ತರಗತಿಗೆ ಪ್ರವೇಶ ಪಡೆಯಲು ಆಗುವುದಿಲ್ಲ ಎಂಬ ನಿಯಮದಿಂದ ಕಂಗಾಲಾಗಿದ್ದ ಪೋಷಕರಿಗೆ, ಈ ವರ್ಷಕ್ಕೆ ಮಾತ್ರ ಅನ್ವಯಿಸುವಂತೆ ವಯಸ್ಸಿನ ಸಡಿಲಿಕೆಯನ್ನು ಇದೀಗ ನೀಡಿದೆ.
ಹೈಲೈಟ್ಸ್:
- ಒಂದನೇ ತರಗತಿಗೆ ವಯಸ್ಸಿನ ಸಡಿಲಿಕೆ.
- ಆರು ವರ್ಷ ಬದಲಾಗಿ 5.5 ವರ್ಷ ಆಗಿದ್ದರೂ ಪ್ರವೇಶ ಪಡೆಯಬಹುದು.
- ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿಕೆ.

ಕರ್ನಾಟಕದಲ್ಲಿ ಸರ್ಕಾರಿ ಶಾಲೆ, ಖಾಸಗಿ ಶಾಲೆ, ಅನುದಾನ ರಹಿತ, ಅನುದಾನ ಸಹಿತ ಶಾಲೆಗಳಲ್ಲಿ ಸೇರಿದಂತೆ ಯಾವುದೇ ಶಾಲೆಯಲ್ಲಿ 1ನೇ ತರಗತಿ ಪ್ರವೇಶಕ್ಕೆ ಸಂಬಂಧ, ಮಕ್ಕಳ ವಯಸ್ಸಿನ ಅರ್ಹತೆಗೆ ಸಂಬಂಧ ಪೋಷಕರಿಗೆ ಇದ್ದ ಗೊಂದಲಕ್ಕೆ ಇಂದು ಸರ್ಕಾರ ತೆರೆ ಎಳೆದಿದೆ. ಈ ವರ್ಷಕ್ಕೆ ಮಾತ್ರ ವಯಸ್ಸಿನ ಸಡಿಲಿಕೆಯನ್ನು ಅನ್ವಯಿಸುವ ಕುರಿತು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಇಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ವರ್ಷಕ್ಕೆ ಮಾತ್ರ ವಯಸ್ಸಿನ ಸಡಿಲಿಕೆ
ರಾಜ್ಯದಲ್ಲಿ ಯಾವುದೇ ಶಾಲೆಗಳಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಬೇಕು ಎಂದರೆ ಮಕ್ಕಳಿಗೆ ಕಡ್ಡಾಯವಾಗಿ ಮೇ 31 ರೊಳಗೆ 6 ವರ್ಷ ಪೂರೈಸಿರಬೇಕಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಈ ವರ್ಷಕ್ಕೆ ಮಾತ್ರ ಅನ್ವಯಿಸುವಂತೆ ಒಂದು ಬಾರಿಗೆ ವಯಸ್ಸಿನ ಸಡಿಲಿಕೆಯನ್ನು ನೀಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ನೀಡಿದ ಮಾಹಿತಿ ಪ್ರಕಾರ ಈ ಕೆಳಗಿನ ಅರ್ಹತೆಯನ್ನು ಹೊಂದಿರುವವರು ಈ ವರ್ಷ 1ನೇ ತರಗತಿಗೆ ತಮ್ಮ ಮಗುವಿಗೆ ಪ್ರವೇಶ ಕೊಡಿಸಬಹುದಾಗಿದೆ.
1ನೇ ತರಗತಿ ಪ್ರವೇಶಕ್ಕೆ ಈ ವರ್ಷ ವಯಸ್ಸಿನ ಅರ್ಹತೆ
ಈ ಒಂದು ವರ್ಷಕ್ಕೆ ಮಾತ್ರ ಯುಕೆಜಿ ಪಾಸಾದ ಹಾಗೂ 5 ವರ್ಷ 5 ತಿಂಗಳು ವಯಸ್ಸು ಪೂರೈಸಿದ ಮಗುವನ್ನು 1ನೇ ತರಗತಿಗೆ ಅಡ್ಮಿಷನ್ ಮಾಡಿಸಬಹುದಾಗಿದೆ. ಅಥವಾ
ಅಂಗನವಾಡಿ / ಬಾಲವಾಡಿ ಶಿಕ್ಷಣವನ್ನು ಎರಡು ಅಥವಾ ಮೂರು ವರ್ಷ ಪಡೆದಿದ್ದು 5 ವರ್ಷ 5 ತಿಂಗಳು ವಯಸ್ಸು ಪೂರೈಸಿದ ಮಗುವನ್ನು 1ನೇ ತರಗತಿಗೆ ಅಡ್ಮಿಷನ್ ಮಾಡಿಸಬಹುದಾಗಿದೆ.
ಈ ವಯಸ್ಸಿನ ಸಡಿಲಿಕೆ ನಿಯಮವು 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಿಸಲಿದೆ. ನಂತರದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ಸಾಲಿಗೆ ಎಂದಿನಂತೆ 6 ವರ್ಷ ವಯಸ್ಸನ್ನು ಪೂರೈಸಿರಬೇಕಾಗುತ್ತದೆ.
ಹಾಗೆಯೇ ಮುಂದಿನ ಶೈಕ್ಷಣಿಕ ವರ್ಷದೊಳಗೆ ರಾಜ್ಯ ಶಿಕ್ಷಣ ನೀತಿ- SEP ಅನುಷ್ಠಾನ ಮಾಡಲು ತೀರ್ಮಾನಿಸಿದ್ದು, ನಂತರದಲ್ಲಿ ಅದರಲ್ಲಿ ನೀಡಿದ ಮಾರ್ಗಸೂಚಿಗಳು, ನಿಯಮಗಳಂತೆ ನಡೆದುಕೊಳ್ಳಬೇಕಾಗುತ್ತದೆ.
ಈ ವರ್ಷ ತಮ್ಮ ಮಕ್ಕಳು ಈಗಾಗಲೇ ಯುಕೆಜಿ ಪಾಸ್ ಆಗಿದ್ದು ಅಥವಾ ಬಾಲವಾಡಿ/ ಅಂಗನವಾಡಿ ಶಿಕ್ಷಣವನ್ನು ಎರಡು ಅಥವಾ ಮೂರು ವರ್ಷ ಪಡೆದಿದ್ದು, 5.5 ವರ್ಷವನ್ನು 2025ರ ಮೇ 31 ಅಥವಾ ಜೂನ್ 01 ಕ್ಕೆ ಪೂರೈಸುವಂತಿದ್ದಲ್ಲಿ 1ನೇ ತರಗತಿಗೆ ಪ್ರವೇಶ ಮಾಡಿಸಬಹುದಾಗಿದೆ.
Source : Vijayakarnataka
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1