ಕೇಂದ್ರ ಸರ್ಕಾರಿ ನೌಕರರಿಗೆ ಪಿಎಫ್ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದ ಸರ್ಕಾರ..!

ನವದೆಹಲಿ: ದುಡಿವ ಜನರಿಗೆ ಪಿಎಫ್ ಅನ್ನೋದು ಬಹಳ ಮುಖ್ಯ. ಪಿಎಫ್ ಹಣಕ್ಕೆ ಸರ್ಕಾರದಿಂದ ಕೊಡುವ ಬಡ್ಡಿ, ಕಂಪನಿಯಿಂದ ಹಾಕುವ ಬಡ್ಡಿಗಾಗಿ ಸಿಬ್ಬಂದಿಗಳು ಕಾಯುತ್ತಾರೆ. ಆ ಪಿಎಫ್ ಹಣದಲ್ಲಿ ದೊಡ್ಡಮಟ್ಟದ ಯೋಜನೆಯನ್ನೇ ಹಾಕಿಕಿಂಡಿರುತ್ತಾರೆ. ಇದು ಎಲ್ಲಾ ದುಡಿಯುವ ವರ್ಗಕ್ಕೆ ಸಂಬಂಧಪಟ್ಟಂತದ್ದು. ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಪಿಎಫ್ ಹಣದ ವಿಚಾರವಾಗಿ ಗುಡ್ ನ್ಯೂಸ್ ಒಂದು ಸಿಕ್ಕಿದೆ.

ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ ನ ಬಡ್ಡಿಯನ್ನು ಹೆಚ್ಚಳ ಮಾಡಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಹೊಸ ಆದೇಶ ಹೊರಡಿಸಲಾಗಿದೆ. ಪ್ರತಿ ವರ್ಷ ಬಡ್ಡಿ ದರ ಹೆಚ್ಚಳ ಮಾಡುವ ಇಲಾಖೆ, ಈ ಬಾರಿ ಕಳೆದ ಬಾರಿಗಿಂತ ಬಡ್ಡಿ ದರ ಹೆಚ್ಚಳ ಮಾಡಿದೆ. ಕಳೆದ ಬಾರಿ 8.1ರಷ್ಟಿದ್ದ ಬಡ್ಡಿ ದರ, ಈ ಬಾರಿ 8.15ರಷ್ಟಾಗಿದೆ.

ಇನ್ನು ಈ ಬಡ್ಡಿ ಹೆಚ್ಚಳ ದರ ಇಂದಿನಿಂದಾನೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ದೇಶದಲ್ಲಿರೋ ಶೇಕಡ 75ರಷ್ಟು ಉದ್ಯೋಗಿಗಳಿಗೆ ಇದು ಅನುಕೂಲವಾಗಲಿದೆ. ಬಡ್ಡಿ ದರ ಹೆಚ್ಚಳವಾಗಿದ್ದು, ಕೇಂದ್ರ ಸರ್ಕಾರಿ ನೌಕರರಿಗೂ ಖುಷಿ ತಂದಿದೆ.

The post ಕೇಂದ್ರ ಸರ್ಕಾರಿ ನೌಕರರಿಗೆ ಪಿಎಫ್ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದ ಸರ್ಕಾರ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/79qfZmF
via IFTTT

Leave a Reply

Your email address will not be published. Required fields are marked *