ಜಾತಿಗಣತಿಗೆ ಸರ್ಕಾರ ಮುಂದಾಗಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ: ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ.

ಸುರೇಶ್ ಪಟ್ಟಣ್ ವರದಿ ಮತ್ತು ಪೋಟೋಗಳು.

ಚಿತ್ರದುರ್ಗ ಮೇ. 01 ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ದತ್ತಾಂಶ ಸರಿಯಿಲ್ಲ ಹಿನ್ನಲೆಯಲ್ಲಿ ಈಗ ಜಾತಿ ಗಣತಿಯನ್ನು ನಡೆಸಲು ಮುಂದಾಗಿದೆ ಆದರೆ ಇದರಲ್ಲಿ ಭೋವಿ ಸಮುದಾಯಕ್ಕೆ ಸಂಬಂಧಪಟ್ಟಂತೆ ಕುಲ ಕಸಬುಗಳನ್ನು ಸರಿಯಾದ ರೀತಿಯಲ್ಲಿ ನಮೂದು ಮಾಡಿಲ್ಲ ಇದನ್ನು ಸರಿಪಡಿಸಿ ಜಾತಿಗಣತಿಗೆ ಸರ್ಕಾರ ಮುಂದಾಗಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದ ಭೋವಿ ಗುರುಪೀಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ಉಚ್ಚ ನ್ಯಾಯಾಲಯ ಒಳ ಮೀಸಲಾತಿಯನ್ನು ಜಾರಿ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ನೀಡಿದೆ ಆದರೆ ಇದನ್ನು ಜಾರಿ ಮಾಡಲು ಸರಿಯಾದ ದತ್ತಾಂಶವನ್ನು ಹೊಂದಿರಬೇಕು ಎಂದು ಸೂಚನೆಯನ್ನು ನೀಡಿದೆ ಇದರ ಆನ್ವಯ ಸರ್ಕಾರ ಈಗ ಜಾತಿ ಗಣತಿಯನ್ನು ಮಾಡಲು ಮುಂದಾಗಿದೆ ಆದರೆ ನಮ್ಮ ಭೋವಿ ಸಮುದಾಯಕ್ಕೆ ಸಂಬಂಧಪಟ್ಟಂತೆ ಕೇವಲ ಮೂರು ಕುಲ ಕಸಬುಗಳನ್ನು ಮಾತ್ರವೇ ನಮೂದು ಮಾಡಲಾಗಿದೆ ಆದರೆ ನಮ್ಮಲ್ಲಿ ಕಲ್ಲು ಒಡೆಯುವವರು, ಕೆರೆಗಳನ್ನು ಕಟ್ಟುವವರು, ಕಟ್ಟಡವನ್ನು ನಿರ್ಮಾಣ ಮಾಡುವವರು, ಭಾವಿಗಳನ್ನು ನಿರ್ಮಾಣ ಮಾಡುವವರು ಈ ರೀತಿಯಾಗಿ ವಿವಿಧ ಕಸಬುಗಳನ್ನು ಮಾಡುವವರು ಇದ್ದಾರೆ ಆದರೆ ಜಾತಿಗಣತಿಯಲ್ಲಿ ಇದಾವುದನ್ನು ನಮೂದು ಮಾಡಿಲ್ಲ ಇತರೆ ಕಾಲನಲ್ಲಿ ನಮೂದಿಸಲು ತಿಳಿಸಲಾಗಿದೆ ಅದರೆ ಇದು ಸರಿಯಾಗುವುದಿಲ್ಲ ಎಂದು ಆರೋಪಿಸಿದರು.
ಸರ್ಕಾರ ಜಾತಿಗಣತಿಯನ್ನು ಕೇವಲ ಒಂದು ಜಾತಿಗೆ ಮಾತ್ರ ಮಾಡುವುದಾದರೇ ಇದನ್ನು ಮುಂದುವರೆಸಬಹುದು ಆದರೆ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ಸಮೀಕ್ಷೆಯನ್ನು ಮಾಡುವುದಾದರೆ ನಮ್ಮ ಭೋವಿ ಸಮುದಾಯಕ್ಕೆ  ಸಂಬಂಧಪಟ್ಟಂತೆ ಸರ್ಕಾರದಲ್ಲಿ ಆಗಿರುವ ತಪ್ಪನ್ನು ಸರಿಪಡಿಸಿ ಜಾತಿ ಗಣತಿಯನ್ನು ನಡೆಸಬೇಕಿದೆ. ಇಲ್ಲವಾದಲ್ಲಿ ಭೋವಿ ಸಮಾಜಕ್ಕೆ ಅನ್ಯಾಯವಾಗುತ್ತದೆ, ಮುಂದಿನ ದಿನದಲ್ಲಿ ಸರ್ಕಾರ ಯಾವುದಾದರೂ ಯೋಜನೆಗಳನ್ನು ರೂಪಿಸಬೇಕಾದರೆ ಈ ದತ್ತಾಂಶ ಅಗತ್ಯವಾಗಿದೆ ಈ ಹಿನ್ನಲೆಯಲ್ಲಿ ಸರಿಯಾದ ರೀತಿಯಲ್ಲಿ ಜಾತಿಗಣತಿಯನ್ನು ಮಾಡಬೇಕಿದೆ ಎಂದು ಸರ್ಕಾರವನ್ನು ಆಗ್ರಹಿಸಿದ ಶ್ರೀಗಳು, ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸದೇ ಜಾತಿಗಣತಿಯನ್ನು ಪ್ರಾರಂಭ ಮಾಡಿದರೆ ಇದರ ವಿರುದ್ದ ನಾವುಗಳು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ, ಇದಕ್ಕೆ ಸರ್ಕಾರ ಅವಕಾಶವನ್ನು ನೀಡದೆ ಅಗಿರುವ ತಪ್ಪನ್ನು ಸರಿಪಡಿಸಿ ಇದರ ಬಗ್ಗೆ ಜಾತಿಗಣತಿದಾರರಿಗೆ ಸÀರಿಯಾದ ಮಾಹಿತಿಯನ್ನು ಸೂಕ್ತವಾದ ರೀತಿಯಲ್ಲಿ ಜಾತಿಗಣತಿಯನ್ನು ಮಾಡಿಸುವಂತೆ ಸರ್ಕಾರವನ್ನು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ಭೋವಿ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಕಾರ್ಯದರ್ಶಿ ಲಕ್ಷ್ಮಣ್, ನಗರಸಭೆಯ ಮಾಜಿ ಸದಸ್ಯರಾದ ಮಂಜುನಾಥ್, ಭೋವಿ ಗುರುಪೀಠದ ಸಿಇಓ ಗೌನಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *