ಮೈಸೂರಿನ ಸಂಸದ, ಮಹಾರಾಜ ಯದುವೀರ್ ರಿಂದ. ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಉದ್ಘಾಟನೆ:

ಚಿತ್ರದುರ್ಗ ಸೆ. 12

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ಜಿಲ್ಲೆಯ ಹಿಂದೂ ಮಹಾಗಣಪತಿ ಏಷ್ಯಾದಲ್ಲೇ ಅತಿ ದೊಡ್ಡ ಶೋಭಾಯಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಬಾರಿ ಇನ್ನಷ್ಟು ಇತಿಹಾಸ ಸೃಷ್ಟಿ ಮಾಡಲು ಈಗಾಗಲೇ ಸಕಲ ರೀತಿಯಲ್ಲಿ ಸನ್ನದ್ಧವಾಗಿ ನಿಂತಿದೆ ಈ ಶೋಭಾಯಾತ್ರೆಯನ್ನು ಸಂಸದರು, ಮೈಸೂರಿನ ರಾಜಮನೆತನದ ಯದುವೀರ ರವರು ಉದ್ಘಾಟನಯನ್ನು ಮಾಡಲಿದ್ದಾರೆ ಎಂದು ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಬಂಜನ್ ಹೇಳಿದರು. 


ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಸಭಾಂಗಣದ ಜೈನಧಾಮದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೋಭಾಯಾತ್ರೆ ಪ್ರಯುಕ್ತ ಈಗಾಗಲೇ ನಗರದ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಸಂಜೆ ವೇಳೆಗೆ ನಗರದಲ್ಲಿರುವ ಎಲ್ಲಾ ಪ್ರತಿಮೆಗಳನ್ನು ಹೂವುಗಳಿಂದ ಸಿಂಗರಿಸಿ ಶೋಭಾಯಾತ್ರೆಗೆ ಆಗಮಿಸುವ ಜನರನ್ನು ಸ್ವಾಗತಿಸಲಾಗುವುದು ಎಂದರು.


ಮಂಗಳೂರಿನ ಚಂಡೀ ವಾಧ್ಯ, ನಾಸಿಕ್ ಡೋಲ್, ದಾವಣಗೆರೆಯ ನಾಸಿಕ್ ಡೊಲ್, ಚಿತ್ರದುರ್ಗದ ಡೊಳ್ಳು ಕುಣಿತ ಹಾಗೂ 10 ಕ್ಕೂ ಹೆಚ್ಚು ಸ್ಥಳೀಯ ಕಲಾ ತಂಡಗಳು ಭಾಗವಹಿಸಿಲಿವೆ. ಅಲ್ಲದೆ ಯಾರ ನಿರೀಕ್ಷೆಯು ಹುಸಿಗೊಳಿಸದಂತೆ ಕಾನೂನು ಪ್ರಕಾರವೇ 4 ವಾಹನಗಳಲ್ಲಿ ಧ್ವನಿವರ್ಧಕಗಳನ್ನು ಬಳಸಿ ಕಳೆದ ವರ್ಷಕ್ಕಿಂತ ಅತೀ ವಿಜೃಂಭಣೆಯಿಂದ ಶೋಭಾಯಾತ್ರೆ ನಡೆಸಲಿದ್ದೇವೆ.

ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಜನರು ಕರೆ ಮಾಡಿ ಭಾಗವಹಿಸಲಿದ್ದು, ಸುಮಾರು 6-7 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಪಕ್ಷಾತೀತವಾಗಿ ಗಣೇಶೋತ್ಸವ ನಡೆಯುತ್ತಿರುವುದರಿಂದ ಶೋಭಾಯಾತ್ರೆಯಲ್ಲಿ ರಾಜಕೀಯ ಪ್ರಮುಖರು ಹಾಗೂ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.


ನಾಳೆ ಬೆಳಗ್ಗೆ 10 ಗಂಟೆಗೆ ಜೈನಧಾಮದ ಬಳಿ ಚಾಲನೆ ನೀಡಲಾಗುವುದು. ಈ ಬಾರಿ ಬೃಹತ್ ಶೋಭಾಯಾತ್ರೆಗೆ ಮೈಸೂರಿನ ರಾಜಮನೆತನದ ಯದುವೀರ್ ಒಡೆಯರ್ ಶೋಭಾಯಾತ್ರೆಯನ್ನು ಉದ್ಘಾಟನೆ ಮಾಡುವುದು ಈ ಬಾರಿಯ ವಿಶೇಷ ಎಂದರು. ಉದ್ಘಾಟನೆ ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗುವ ಶೋಭಾಯಾತ್ರೆಯಲ್ಲಿ ಮಂಗಳೂರಿನ ಪ್ರಸಿದ್ಧ ಕಲಾವಿದರಿಂದ ನಾಸಿಕ್ ಡೋಲು, ಚಂಡೆ ವಾದ್ಯ, ದಾವಣಗೆರೆ ಹಾಗೂ ಚಿತ್ರದುರ್ಗದ ಡೊಳ್ಳು ಕುಣಿತ, ವೀರಗಾಸೆ, ನಾಸಿಕ್ ಡೋಲು ಸೇರಿದಂತೆ 10ಕ್ಕೂ ಹೆಚ್ಚು ಕಲಾತಂಡಗಳು ಭಾಗಿಯಾಗಲಿದ್ದು, ಈ ಬಾರಿಯ ಶೋಭಾಯಾತ್ರೆಯಲ್ಲಿ ಸುಮಾರು 6ರಿಂದ 7 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು. 


ಇನ್ನು ಶೋಭಾಯಾತ್ರೆ ಉದ್ಘಾಟನೆಯಲ್ಲಿ ಸಾಧು ಸಂತರು, ಪಕ್ಷಾತೀತವಾಗಿ ರಾಜಕೀಯ ಗಣ್ಯರು , ಹಿಂದೂ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ. ಈ ಬಾರಿ ತಿರುಪತಿ ತಿಮ್ಮಪ್ಪನ ಮಾಡೆಲ್, ಭಗವಾಧ್ವಜ, ಬೃಹತ್ ಹೂವಿನ ಹಾರಗಳ ಹರಾಜು ಇರುತ್ತದೆ ಎಂದು ಹೇಳಿದರು.


ಡಿಜೆಗೆ ಈ ಬಾರಿ ಸರ್ಕಾರ ಹಲವು ನಿಬಂಧನೆಗಳನ್ನು ಹೇರಿದ್ದು, ಸರ್ಕಾರದ ಆದೇಶ ಹಾಗೂ ಕಾನೂನಿನಲ್ಲಿ ಏನು ಅವಕಾಶ ಇದೆಯೋ ಅದೆಲ್ಲವನ್ನು ಸಂಪೂರ್ಣವಾಗಿ ಬಳಸಿಕೊಂಡು ಯಾರ ನಿರೀಕ್ಷೆಯನ್ನು ಹುಸಿಗೊಳಿಸಿದೆ ಶೋಭಾಯಾತ್ರೆ ಯಶಸ್ವಿಗೊಳಿಸಲಾಗುವುದು, 4 ವಾಹನಗಳಲ್ಲಿ ಸ್ಪೀಕರ್‍ಗಳನ್ನು ಅಳವಡಿಕೆ ಮಾಡುತ್ತೇವೆ. ಅದನ್ನು ನಾವು ಡಿಜೆ ಎಂದು ಕರೆಯುವುದಿಲ್ಲ. ಡಿಜೆಗೂ ಸ್ಪೀಕರ್‍ಗೂ ವ್ಯತ್ಯಾಸ ಇದೆ. ಆದರೆ ನಾವು ಡಿಜೆಗೆ ತಕ್ಕಂತೆ ಸ್ಪೀಕರ್ ಅಳವಡಿಕೆ ಮಾಡಿ ಬರುವ ಜನರ ನಿರೀಕ್ಷೆಯನ್ನು ನಿರಾಸೆ ಮಾಡೋದಿಲ್ಲ. ಶೋಭಾಯಾತ್ರೆ ವೇಳೆ ಜನರಿಗೆ ಯಾವ ರೀತಿಯ ಸೌಂಡ್ ಬೇಕು ಅದಕ್ಕೆ ತಕ್ಕಂತೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲಾಡಳಿತದವತಿಯಿಂದ ಸಹ ಅನುಮತಿ ಪಡೆದುಕೊಂಡು ಮುಂದುವರೆಯುತ್ತೇವೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ 2025ನೇ ಸಾಲಿನ ಹಿಂದೂ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಶರಣ್ ಕುಮಾರ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಕೇಶವ್ ಭಾಗವಹಿಸಿದ್ದರು.

Views: 18

Leave a Reply

Your email address will not be published. Required fields are marked *