Highlights of Karnataka Caste based Census – ಕರ್ನಾಟಕ ಸರ್ಕಾರ ನಡೆಸಿರುವ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಗಣತಿ) ವರದಿಯ ಮತ್ತಷ್ಟು ಅಂಶಗಳು ಬಯಲಿಗೆ ಬಂದಿವೆ. ಅದರಂತೆ, ಪ್ರವರ್ಗ 1ಎ, 1ಬಿ, 2ಎ, 2ಬಿ, 3ಎ, 3ಬಿ ಗಳಲ್ಲಿ ಎಷ್ಟೆಷ್ಟು ಜನಸಂಖ್ಯೆಯಿದೆ ಎಂಬುದರ ವರದಿ ಸಿಕ್ಕಿದೆ. ಅದರಂತೆ, ಸಾಮಾನ್ಯ ವರ್ಗದ ಜನಸಂಖ್ಯೆ ಎಷ್ಟಿದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಎಷ್ಟಿದೆ ಎಂಬ ಅಂಕಿ-ಅಂಶಗಳೂ ಲಭ್ಯವಾಗಿವೆ.

- ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಗಣತಿ) ವರದಿ ಬಹಿರಂಗ.
- ಪ್ರವರ್ಗವಾರು ಜನಸಂಖ್ಯೆಯ ಪಟ್ಟಿ ಲಭ್ಯ. ಒಟ್ಟು ಪ್ರವರ್ಗಗಳ ಜನಸಂಖ್ಯೆ 4 ಕೋಟಿ 16 ಲಕ್ಷದ ಮೂವರತ್ತು ಸಾವಿರದ ನೂರಾ ಐವತ್ತ ಮೂರು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗಗಳ ಜನಸಂಖ್ಯೆಯೂ ಲಭ್ಯ.
ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಗಣತಿ) ವರದಿಯಲ್ಲಿರುವ ಮತ್ತಷ್ಟು ಅಂಶಗಳು ಬೆಳಕಿಗೆ ಬಂದಿವೆ. ಅದರಂತೆ, ಪ್ರವರ್ಗವಾರು ಜನಸಂಖ್ಯೆ ಎಷ್ಟಿದೆ ಎಂಬುದರ ಸಂಪೂರ್ಣ ವಿವರ ಲಭ್ಯವಾಗಿದೆ.
ವರದಿಯ ಪ್ರಕಾರ, ಎಲ್ಲಾ ಪ್ರವರ್ಗಗಳಡಿ ಒಟ್ಟು ಜನಸಂಖ್ಯೆ ನಾಲ್ಕು ಕೋಟಿ ಹದಿನಾರು ಲಕ್ಷದ ಮೂವತ್ತು ಸಾವಿರದಷ್ಟು (4,16,36,153) ಇದೆ ಇವುಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಒಂದು ಕೋಟಿ ಒಂಭತ್ತು ಲಕ್ಷದ ಇಪ್ಪತ್ತೊಂಭತ್ತು ಸಾವಿರದ ಮುನ್ನೂರ ನಲವತ್ತೇಳು (9,29,347) ಇದೆ. ಪರಿಶಿಷ್ಟ ಪಂಗಡದ ಒಟ್ಟು ಜನಸಂಖ್ಯೆ ನಲವತ್ತೆರಡು ಲಕ್ಷದ ಎಂಭತ್ತೊಂದು ಸಾವಿರದ ಇನ್ನೂರ ಎಂಭತ್ತೊಂಭತ್ತು (42,81,289) ಇದೆ. ಇನ್ನು, ಸಾಮಾನ್ಯ ವರ್ಗದ ಜನಸಂಖ್ಯೆ ಇಪ್ಪತ್ತೊಂಭತ್ತು ಲಕ್ಷದ ಎಪ್ಪತ್ತನಾಲ್ಕು ಸಾವಿರದ ನೂರಾ ಐವತ್ತ ಮೂರು (29,74,153) ಇದೆ.
| ಪರಿಶಿಷ್ಟರು | ಜನಸಂಖ್ಯೆ |
|---|---|
| ಪರಿಶಿಷ್ಟ ಜಾತಿ (SC) | 9,29,347 |
| ಪರಿಶಿಷ್ಟ ಪಂಗಡ (ST) | 42,81,289 |
| ಸಾಮಾನ್ಯ ವರ್ಗ | 29,74,153 |
| ಒಟ್ಟು ಜನಸಂಖ್ಯೆ | 4,16,36,153 |
ಪ್ರವರ್ಗವಾರು ಜನಸಂಖ್ಯೆ
ಇನ್ನು ಪ್ರವರ್ಗ 1ಎ ಅಡಿಯಲ್ಲಿನ ಜನಸಂಖ್ಯೆ 34 ಲಕ್ಷದ 96 ಸಾವಿರದ 638 ಇದ್ದರೆ, ಪ್ರವರ್ಗ 1 ಬಿ ಜನಸಂಖ್ಯೆ 73 ಲಕ್ಷದ 92 ಸಾವಿರದ 313 ಇದೆ. ಅತ್ತ, ಪ್ರವರ್ಗ 2ಎ ಜನಸಂಖ್ಯೆ 77 ಲಕ್ಷದ 78 ಸಾವಿರದ ಇನ್ನೂರ ಒಂಭತ್ತು ಇದ್ದರೆ, ಪ್ರವರ್ಗ 2ಬಿ ಜನಸಂಖ್ಯೆ 75 ಲಕ್ಷದ 25 ಸಾವಿರದ 809 (75,25,880) ಇದೆ.
ಪ್ರವರ್ಗ 3 ಎ ಜನಸಂಖ್ಯೆಯು ಎಪ್ಪತ್ತೆರಡು ಲಕ್ಷದ ತೊಂಭತ್ತೊಂಭತ್ತು ಸಾವಿರದ ಐದು ನೂರಾ ಎಪ್ಪತ್ತೇಳು (72,99,577) ಇದ್ದರೆ, ಪ್ರವರ್ಗ 3 ಬಿ ಜನಸಂಖ್ಯೆಯು ಎಂಬತ್ತೊಂದು ಲಕ್ಷದ ಮೂವತ್ತೇಳು ಸಾವಿರದ ಐದು ನೂರಾ ಮೂವತ್ತಾರು (81,37,536) ಇದೆ.
ಪ್ರವರ್ಗವಾರು ಜನಸಂಖ್ಯಾ ಪಟ್ಟಿ
| ಪ್ರವರ್ಗಗಳು | ಜನಸಂಖ್ಯೆ |
|---|---|
| ಪ್ರವರ್ಗ 1ಎ | 34,96,638 |
| ಪ್ರವರ್ಗ 1ಬಿ | 73,92,313 |
| ಪ್ರವರ್ಗ 2ಎ | 77,78,209 |
| ಪ್ರವರ್ಗ 2ಬಿ | 75,25,880 |
| ಪ್ರವರ್ಗ 3ಎ | 72,99,577 |
| ಪ್ರವರ್ಗ 3ಬಿ | 81,37,536 |
ಮುಸ್ಲಿಮರು, ಲಿಂಗಾಯತರು, ಒಕ್ಕಲಿಗರು ಹಾಗೂ ಇತರರ ಜನಸಂಖ್ಯೆ:
| ಸಮುದಾಯದ ಹೆಸರು | ಅಂದಾಜು ಜನಸಂಖ್ಯೆ |
|---|---|
| ಮುಸ್ಲಿಂ | 70 ಲಕ್ಷ |
| ಲಿಂಗಾಯತರು | 65 ಲಕ್ಷ |
| ಒಕ್ಕಲಿಗರು | 60 ಲಕ್ಷ |
| ಕುರುಬರು | 45 ಲಕ್ಷ |
| ಈಡಿಗರು | 15 ಲಕ್ಷ |
| ಪರಿಶಿಷ್ಟ ಪಂಗಡ | 40.45 ಲಕ್ಷ |
| ವಿಶ್ವಕರ್ಮ | 15 ಲಕ್ಷ |
| ಬೆಸ್ತರು | 15 ಲಕ್ಷ |
| ಬ್ರಾಹ್ಮಣ | 14 ಲಕ್ಷ |
| ಗೊಲ್ಲ | 10 ಲಕ್ಷ |
| ಮಡಿವಾಳ | 6 ಲಕ್ಷ |
| ಕುಂಬಾರ | 5 ಲಕ್ಷ |
| ಸವಿತಾ ಸಮಾಜ | 5 ಲಕ್ಷ |
Source : Vijayakarnataka
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 9