Fruit Leaves Health Benefits: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಒಂದೊಂದು ಹಣ್ಣಿನಲ್ಲೂ ಒಂದೊಂದು ರೀತಿಯ ಚಮತ್ಕಾರಿ ಗುಣಗಳು ಅಡಗಿದ್ದು ಅವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ.

ಬೆಂಗಳೂರು: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಒಂದೊಂದು ಹಣ್ಣಿನಲ್ಲೂ ಒಂದೊಂದು ರೀತಿಯ ಚಮತ್ಕಾರಿ ಗುಣಗಳು ಅಡಗಿದ್ದು ಅವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ಆದರೆ ಹಣ್ಣಿನ ಎಲೆಗಳೂ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ ಎಂಬ ಸಂಗತಿ ತುಂಬಾ ಕಡಿಮೆ ಜನರಿಗೆ ತಿಳಿದಿದೆ. ಹಣ್ಣಿನ ಎಲೆಗಳಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಅವು ಹೊಂದಿವೆ. ಅನೇಕ ಹಣ್ಣಿನ ಎಲೆಗಳ ಸೇವನೆಯಿಂದ ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಡೆಂಗ್ಯೂನಂತಹ ಅಪಾಯಕಾರಿ ಕಾಯಿಲೆಗಳನ್ನು ಗುಣಪಡಿಸಬಹುದು. ಯಾವ ಹಣ್ಣಿನ ಎಲೆಗಳು ಯಾವ ಕಾಯಿಲೆಗಳಿಗೆ ಪರಿಣಾಮಕಾರಿ ಮದ್ದಾಗಿವೆ ತಿಳಿದುಕೊಳ್ಳೋಣ ಬನ್ನಿ,
ಮಾವಿನ ಎಲೆಗಳನ್ನು ರಕ್ತದೊತ್ತಡದಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಎಲೆಗಳನ್ನು ಜಗಿಯುವುದರಿಂದ ಬೊಜ್ಜು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಗಳು ದೂರವಾಗುತ್ತವೆ. ಮಾವಿನ ಎಲೆಗಳು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿಯಾಗಿವೆ.
ಸೀಬೇಹಣ್ಣಿನ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಅವು ಕೂಡ ಮಾರಕ ರೋಗಗಳನ್ನು ದೂರವಿಡುವ ಕೆಲಸ ಮಾಡುತ್ತವೆ. ಸೀಬೆ ಹಣ್ಣಿನ ಎಲೆಗಳು ಕೊಲೆಸ್ಟ್ರಾಲ್, ಮಧುಮೇಹ, ರಕ್ತದೊತ್ತಡ ಮತ್ತು ಜೀರ್ಣಕ್ರಿಯೆಯಂತಹ ಸಮಸ್ಯೆಗಳನ್ನು ನಿವಾರಿಸಲು ಕೆಲಸ ಮಾಡುತ್ತವೆ. ತೂಕ ತೂಕ ಇಳಿಕೆಗೂ ಕೂಡ ಅವು ಪರಿಣಾಮಕಾರಿಯಾಗಿವೆ.
ಮಧುಮೇಹ ರೋಗಿಗಳಿಗೆ ಜಾಮೂನ್ ಎಲೆಗಳು ವರದಾನವಿದ್ದಂತೆ. ಜಾಮೂನ್‌ನ ಹಸಿರು ಎಲೆಗಳನ್ನು ಸೇವಿಸುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಎಲೆಗಳು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತವೆ.
ಪಪ್ಪಾಯಿ ಗಿಡದ ಎಲೆ ಪೋಷಕಾಂಶಗಳ ಆಗರವಾಗಿದೆ. ಡೆಂಗ್ಯೂ ನಂತಹ ಗಂಭೀರ ಕಾಯಿಲೆಗಳಲ್ಲಿ ಪಪ್ಪಾಯಿ ಎಲೆಗಳ ರಸವು ತುಂಬಾ ಪ್ರಯೋಜನಕಾರಿಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಪಪ್ಪಾಯಿ ಎಲೆಗಳು ಸಕ್ಕರೆ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೆ ಸಹ ಪ್ರಯೋಜನಕಾರಿಯಾಗಿವೆ.
ಪೀಚ್ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಈ ಎಲೆಗಳು ಕೊಲೆಸ್ಟ್ರಾಲ್ ಮತ್ತು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೀಚ್ ಎಲೆಗಳು ಚರ್ಮದ ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿಯಾಗಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
Views: 0