ಬೆಲೆ ಏರಿಕೆಯಿಂದ ಬಡವಾಯ್ತು ಜನಸಾಮಾನ್ಯನ‌ ಜೀವನ

ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ತರಕಾರಿ ಅಂಗಡಿಗೆ ಹೋದ್ರು ಶಾಕ್ , ದಿನಸಿ ಅಂಗಡಿಗೆ ಹೋದ್ರು ಶಾಕ್! ತಲೆ ಕೆಟ್ಟು ಎಣ್ಣೆ ಅಂಗಡಿಗೆ ಹೋದ್ರು ದರ ಏರಿಕೆಯಿಂದ ತಲೆ ಗಿರ್ಗಿಟ್ಲೆ ಹೊಡೆಯೋದು ಪಕ್ಕಾ!

Price Hike: ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರದಿಂದ ನೀಡಲಾಗುತ್ತಿರುವ “ಪಂಚ ಗ್ಯಾರೆಂಟಿ”ಗಳ ಖುಷಿ ಬೆನ್ನಲ್ಲೆ ಜನ ಸಾಮಾನ್ಯರಿಗೆ ದರ ಏರಿಕೆ ಶಾಕ್ ಉಂಟಾಗಿದೆ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ತರಕಾರಿ ಅಂಗಡಿಗೆ ಹೋದ್ರು ಶಾಕ್ , ದಿನಸಿ ಅಂಗಡಿಗೆ ಹೋದ್ರು ಶಾಕ್! ತಲೆ ಕೆಟ್ಟು ಎಣ್ಣೆ ಅಂಗಡಿಗೆ ಹೋದ್ರು ದರ ಏರಿಕೆಯಿಂದ ತಲೆ ಗಿರ್ಗಿಟ್ಲೆ ಹೊಡೆಯೋದು ಪಕ್ಕಾ ಆಗಿದೆ. 

ಹೌದು, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಜನಸಾಮಾನ್ಯರು ಈಗಾಗಲೇ ಪೆಟ್ರೋಲ್, ವಿದ್ಯುತ್ ದರಗಳ ಏರಿಕೆಯಿಂದ ಬಸವಳಿದಿದ್ದ ಸಾಮಾನ್ಯರಿಗೆ ಗಗನಾಮುಖಿ ಆಗುತ್ತಿರುವ ತರಕಾರಿ, ದಿನಸಿ ಬೆಲೆಗಳು ಮತ್ತಷ್ಟು ಹೊರೆಯಾಗಿವೆ. ಅಷ್ಟಕ್ಕೂ ರಾಜ್ಯದಲ್ಲಿ ದಿನಸಿ ಸೊಪ್ಪು-ತರಕಾರಿಗಳ ಬೆಲೆ ಏರಿಕೆಗೆ ಕಾಣವಾದರೂ ಏನು ಎಂದು ನೋಡುವುದಾದರೆ… 

ರಾಜ್ಯದಲ್ಲಿ ಸೃಷ್ಟಿಯಾಗಲಿದಿಯಾ ಆಹಾರ ವಸ್ತುಗಳ ಅಭಾವ!
ಸೊಪ್ಪು ತರಕಾರಿಗಳಿಗೆ ಮಳೆ ಸಮಸ್ಯೆ ಕಾರಣ ಎನ್ನಬಹುದು. ಆದರೂ, ಬೇಳೆ ಕಾಳುಗಳ ಅಭಾವಕ್ಕೆ ಕಾರಣವೇನು….? ಮಳೆ ಅಭಾವ ಒಂದೇ ಕಾರಣಕ್ಕೆ ಪರಿಸ್ಥಿತಿ ಕೈ ಮೀರುತ್ತಿದೀಯಾ…? ಅಥವಾ ರಾಜ್ಯದಲ್ಲಿ ಕೃತಕ ಅಭಾವ ಸೃಷ್ಟಿ ಮಾಡಲಾಗ್ತಿದೀಯಾ…?
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವ್ಯಾಪಾರಿಗಳು ಕೃತಕ ಅಭಾವ ಸೃಷ್ಠಿ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. 

ಈಗಾಗಲೇ ಕಳೆದ ಕೆಲ ತಿಂಗಳಿನಿಂದಲೂ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಜನ ಸಾಮಾನ್ಯರಿಗೆ  ಈಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.  ಅಷ್ಟಕ್ಕೂ ತರಕಾರಿ, ದಿನಸಿ ವಸ್ತುಗಳ ಈ ಪ್ರಮಾಣದ ಅಭಾವಕ್ಕೆ ಕಾರಣವೇನು…? 
* ರಾಜ್ಯದಲ್ಲಿ ಅನೇಕ ಕಡೆ ಮಳೆ ಅಭಾವದಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. 
* ಅಷ್ಟೇ ಅಲ್ಲದೆ, ನೆರೆಯ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿಯೂ ಇಳಿಕೆ ಕಂಡು ಬಂದಿದೆ. 
* ಕಳೆದ ಬಾರಿ ಅತಿವೃಷ್ಠಿ ಮತ್ತು ನೆಟೆ ರೋಗಕ್ಕೆ 70% ನಷ್ಟು ತೊಗರಿ ಬೆಳೆ ನಷ್ಟವಾಗಿತ್ತು.
* ಅತಿವೃಷ್ಟಿಯಿಂದ ಹಲಸಂದಿ, ಹುರುಳಿ ಬೇಳೆ ಕೂಡ ನಷ್ಟವಾಗಿದ್ದು ದರ ಏರಿಕೆ ಕಂಡಿದೆ.
ಈ ಬಾರಿ ಕೂಡ ಮುಂಗಾರು ರಾಜ್ಯದ ಹಲವೆಡೆ ಕೈ ಕೊಟ್ಟ ಹಿನ್ನೆಲೆ ಬೆಳೆ ನಷ್ಟವಾಗಿರೋದು ಈ ಪ್ರಮಾಣದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 

ಬೇಳೆಕಾಳುಗಳುಹಳೆಯ ದರ (ರೂಪಾಯಿಗಳಲ್ಲಿ)ಹೊಸ ದರ (ರೂಪಾಯಿಗಳಲ್ಲಿ)
ತೊಗರಿ ಬೇಳೆ125160
ಹೆಸರುಬೇಳೆ74105
ಅವರೆ ಬೇಳೆ140180
ಉದ್ದಿನ ಬೇಳೆ100 135
ಜೀರಿಗೆ186600
ಹಲಸಂದಿ100120
ಹುರುಳಿ60105
ಹುಣಸೆಹಣ್ಣು126180
ರಾಜ್ಮಾ99135
ಮೆಣಸಿನ ಪುಡಿ 186425
ದನಿಯಾ ಪೌಡರ್150218
ಮೆಣಸು380529
ಏಲಕ್ಕಿ11501850
ಬ್ಯಾಡಗಿ ಮೆಣಸಿನಕಾಯಿ330850
ಗೋಧಿ ಹಿಟ್ಟು26 32
ಮೈದಾ28 36
ತರಕಾರಿಗಳುಕಳೆದ ವಾರದ ಬೆಲೆ(ರೂಪಾಯಿಗಳಲ್ಲಿ)ಈ ವಾರದ ಬೆಲೆ (ರೂಪಾಯಿಗಳಲ್ಲಿ)
ಬೀನ್ಸ್ 60110
ಕ್ಯಾರೇಟ್5090
ಮೂಲಂಗಿ2549
ನುಗ್ಗೆಕಾಯಿ80100
ಬೀಟ್ ರೂಟ್3550
ಹಸಿಮೆಣಸಿನಕಾಯಿ95115
ಬೆಂಡೆಕಾಯಿ3054
ಬೆಳ್ಳುಳ್ಳಿ145170
ಟಮೋಟೊ3565
ಕರಿಬೇವು5080
ಕೊತ್ತಂಬರಿ ಸೊಪ್ಪು(ಕಂತೆ)1045
ನವಿಲು ಕೋಸು3570
ಶುಂಠಿ120200
ಹಣ್ಣುಗಳುಕಳೆದ ವಾರದ ಬೆಲೆ (ರೂಪಾಯಿಗಳಲ್ಲಿ)ಈ ವಾರದ ಬೆಲೆ (ರೂಪಾಯಿಗಳಲ್ಲಿ)
ಸೇಬು180288
ಮೂಸಂಬಿ70114
ದಾಳಿಂಬೆ180278
ಅನಾನಸ್40 60
ಸಪೋಟ80107
ಏಲಕ್ಕಿ ಬಾಳೆ6074

ಮದ್ಯ ಪ್ರಿಯರನ್ನೂ ಕಾಡ್ತಿದೆ ಬೆಲೆ ಏರಿಕೆ ಬಿಸಿ!
ಮದ್ಯ ಪ್ರಿಯರಿಗೂ ಕುಡಿಯೋ ಮುಂಚೇನೆ ಕಿಕ್ ಏರಿಸುತ್ತಿರೋ ಕೆಲ ಮದ್ಯಗಳ ದರ.
>> ಕಳೆದ 15 ದಿನಗಳಿಂದ ಬಿಯರ್ ಪ್ರಿಯರಿಗೆ ದರ ಏರಿಕೆ ಬರೆ.
>> ಕುಡಿಯೋ ಮುಂಚೆ ದರ ಕೇಳಿದ್ರೆನೆ ತಲೆ ಗಿರ್ ಗಿಟ್ಲೇ.
>> ಪ್ರತಿ ಬಿಯರ್ ಮೇಲೂ 10ರಿಂದ 20 ರೂ ಏರಿಕೆ.
>> ಇತ್ತ ಸರ್ಕಾರ ಸುಂಕ ಏರಿಕೆ ಮಾಡದೇ ಇದ್ದರೂ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿರೋ ಬಿಯರ್ ಉತ್ಪಾದನೆ ಕಂಪನಿಗಳು.
>> ಇತ್ತ ಮತ್ತೆ ಹೊಸ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಳದ ಭೀತಿ ಬೇರೆ.
>> ಸದ್ಯ ಕುಡಿದಾಗ ಕಿಕ್ ಏರಿದ್ರು, ಬಿಲ್ ಕೊಡುವಾಗಲೇ ಕಿಕ್ ಇಳಿಯೋ ಸ್ಥಿತಿಯಲ್ಲಿ ಮದ್ಯ ಪ್ರಿಯರು.

ಬಿಯರ್ ಗಳ ಹೆಸರುಹಳೆಯ ದರ (ರೂಪಾಯಿಗಳಲ್ಲಿ)ಹೊಸ ದರ (ರೂಪಾಯಿಗಳಲ್ಲಿ)
ಬಡ್ ವೈಸರ್198220
ಕಾರ್ಲ್ಸ್ ಬರ್ಗ್ 190220
ಬ್ಲಾಕ್ ಫೋಟ್135155
ಟುಬರ್ಗ್ 140150
ಹೇನಿಕೇನ್210235
ಕೊರೋನಾ220235
ಕಿಂಗ್ ಫಿಶರ್ 160170
ಯುಬಿ ಪ್ರೀಮಿಯಂ125135
ಯುಬಿ ಸ್ಟ್ರಾಂಗ್130135
ಕಿಂಗ್ ಫಿಶರ್ ಅಲ್ಟ್ರಾ 190220

ಅತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೆ ಹೊಟೇಲ್ ಮಾಲೀಕರಿಂದಲೂ ಶಾಕ್..!?
ವಿದ್ಯುತ್ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಹೊಟೇಲ್ ಉದ್ಯಮದಿಂದಲೂ ಜನಸಾಮಾನ್ಯನಿಗೆ ಬರೆ ಎಳೆಯುವ ನಿರೀಕ್ಷೆಯಿದೆ. ಸದ್ಯದಲ್ಲೇ ಹೊಟೇಲ್ ತಿಂಡಿ ತಿನಿಸುಗಳು ದುಬಾರಿಯಾಗುವ ಸಾಧ್ಯತೆ ಇದೆ. ವಿದ್ಯುತ್, ಅಕ್ಕಿ, ಕಾಳು, ಸೊಪ್ಪು, ತರಕಾರಿ ದರ ಏರಿಕೆ ಬೆನ್ನಲ್ಲೆ ಹೊಟೇಲ್ ಗಳಲ್ಲಿ ಬೆಲೆ ಏರಿಕೆ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ದರ ಏರಿಕೆಯ ಹೊಡೆತದಿಂದ ಉದ್ಯಮದ ಮೇಲೆ ಪರಿಣಾಮ ಬೀರಿದೆ ಎಂದು ಅಳಲು ತೋಡಿಕೊಂಡಿರುವ ಹೊಟೇಲ್ ಮಾಲೀಕರು, ಹೋಟೆಲ್ಗಳಲ್ಲಿ ಕಾಫಿ, ಟೀ, ತಿಂಡಿ ಬೆಲೆ ಏರಿಕೆಯ ಎಚ್ಚರಿಕೆ ಕೊಟ್ಟಿದ್ದು, ಅಗತ್ಯವಾಗಿ ನಾವು ಕೂಡ ದರ ಏರಿಕೆ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ. 

Source : https://zeenews.india.com/kannada/business/life-of-common-people-worsened-due-to-price-rise-grocery-fruits-vegetables-alcohol-price-heat-142212

Views: 0

Leave a Reply

Your email address will not be published. Required fields are marked *