Asian Gamesನಲ್ಲಿ ಭಾರತಕ್ಕೆ ಮೊದಲ ಚಿನ್ನ: ಶೂಟಿಂಗ್ ಈವೆಂಟ್’ನಲ್ಲಿ ‘ಬಂಗಾರ’ ಗೆದ್ದ ಪುರುಷರ ತಂಡ

First gold for India at Asian Games 2023: ಮೊದಲ ದಿನದಲ್ಲಿ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಭಾರತಕ್ಕೆ, ಎರಡನೇ ದಿನದ ಆರಂಭದಲ್ಲೇ ಚಿನ್ನದ ಪದಕ ಸಿಕ್ಕಿದೆ.

First gold for India: ಏಷ್ಯನ್ ಗೇಮ್ಸ್‌’ನ ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಶೂಟಿಂಗ್ ಈವೆಂಟ್‌’ನಲ್ಲಿ ಭಾರತೀಯ ಶೂಟರ್‌’ಗಳು ಚಿನ್ನದ ಪದಕವನ್ನು ಗೆದ್ದಿದ್ದಾರೆ. 19ನೇ ಏಷ್ಯನ್ ಗೇಮ್ಸ್ ಚೀನಾದ ಹ್ಯಾಂಗ್‌ ಝೌನಲ್ಲಿ ನಡೆಯುತ್ತಿದ್ದು, ಈ ಟೂರ್ನಮೆಂಟ್’ನಲ್ಲಿ ಭಾರತ ಮೊದಲ ಚಿನ್ನ ಗೆದ್ದಿದೆ.

ಕಳೆದ ದಿನ ಅಂದರೆ ಭಾನುವಾರದಂದು ರೋಯಿಂಗ್’ನಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಭಾರತ ಗೆದ್ದಿದೆ. ಮೊದಲ ದಿನದಲ್ಲಿ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಭಾರತಕ್ಕೆ, ಎರಡನೇ ದಿನದ ಆರಂಭದಲ್ಲೇ ಚಿನ್ನದ ಪದಕ ಸಿಕ್ಕಿದೆ.

ಇನ್ನೊಂದೆಡೆ ಇಂದು ಭಾರತ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕಕ್ಕಾಗಿ ಲಂಕಾ ವಿರುದ್ಧ ಹೋರಾಡಲಿದೆ. ಇದಲ್ಲದೇ ಟೆನಿಸ್ ಮತ್ತು ವುಶುನಲ್ಲಿ ಭಾರತದ ಅಥ್ಲೀಟ್‌’ಗಳು ಅಭಿಯಾನ ಆರಂಭಿಸಲಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Source : https://zeenews.india.com/kannada/sports/first-gold-for-india-at-asian-games-2023-in-mens-10m-air-rifle-team-shooting-event-160699

Leave a Reply

Your email address will not be published. Required fields are marked *