ವರದಿ ಹಾಗೂ ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಏ. 30vಜಿಲ್ಲಾ ಬಡಗಿ ಕೆಲಸಗಾರರ ಸಂಘದವತಿಯಿಂದ ಅಭಿವೃದ್ದಿ ಪಡಿಸಲಾಗಿರುವ ಬಡಾವಣೆಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಫಲಾನುಭವಿಗಳು ಸಂಘವು ನಿಗಧಿ ಪಡಿಸಿರುವ ಹಣವನ್ನು ಮೇ ತಿಂಗಳ ಅಂತ್ಯದೊಳಗಾಗಿ ಪಾವತಿಸಬೇಕು ಎಂದು ಜಿಲ್ಲಾ ಬಡಗಿ ಕೆಸಲಗಾರರ ಕ್ಷೇಮಾಭಿವೃದ್ದಿ ಸಂಘ ಸೂಚಿಸಿದೆ
ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಬಡಗಿ ಕೆಸಲಗಾರರ ಕ್ಷೇಮಾಭಿವೃದ್ದಿ ಸಂಘದ ಅದ್ಯಕ್ಷ ಎ.ಜಾಕೀರ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಿ, ವಸತಿ ಯೋಜನೆಗೆ ಆಯ್ಕೆಯಾಗಿರುವ ಕೆಲವು ಫಲಾನುಭವಿಗಳು ಇದುವರೆಗೂ ದಾಖಲೆ ಮತ್ತು ಹಣ ಪಾವತಿ ಮಾಡಿಲ್ಲ. ಒಂದು ತಿಂಗಳ ಒಳಗಾಗಿ ಸಂಘದ ನಿಯಮಾವಳಿ ಪ್ರಕಾರ ನಿಗಧಿ ಪಡಿಸಿರುವ ಶುಲ್ಕ, ದಾಖಲೆಗಳನ್ನು ಸಲ್ಲಿಸಲು ಅಂತಿಮ ಗಡುವು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ
ಈಗಾಗಲೇ ಫಲಾನುಭವಿಗಳಿಗೆ ಹಲವು ಬಾರಿ ದಾಖಲೆ, ವಸತಿ ಬಾಬ್ತು ನಿಗಧಿ ಪಡಿಸಿರುವ ಹಣವನ್ನು ಪಾವತಿಸಲು ಸೂಚನೆ ನೀಡಲಾಗಿದೆ. ಆದರೂ ಇನ್ನೂ ಶೇ. 40 ರಷ್ಟು ಫಲಾನುಭವಿಗಳು ಹಣವೂ ಪಾವತಿಸಿಲ್ಲ, ದಾಖಲಾತಿಯನ್ನೂ ನೀಡಿರುವುದಿಲ್ಲ. ಹೀಗಾಗಿ ಮೇ ತಿಂಗಳ ಅಂತ್ಯದೊಳಗಾಗಿ ಹಣ ಪಾವತಿಸಬೇಕು. ಇಲ್ಲವಾದರೆ ಅವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಎ.ಜಾಕೀರ್ ಹುಸೇನ್ ತಿಳಿಸಿದ್ದಾರೆ
ದಾವಣಗೆರೆ ರಸ್ತೆಯಲ್ಲಿ ಬಡ ಕುಶಲ ಕರ್ಮಿಗಳು, ಬಡಗಿ ಕೆಲಸಗಾರರಿಗೆ ನಿವೇಶನ ಮತ್ತು ವಸತಿ ಸೌಲಬ್ಯಗಳನ್ನು ಕಲ್ಪಸಿಕೊಡುವ ಉದ್ದೇಶದಿಂದ ಜಮೀನು ಖರೀದಿ ಮಾಡಿದ್ದು, ಅಲ್ಲಿ ಈಗಾಗಲೇ ಬಡಾವಣೆ ಅಭಿವೃದ್ದಿಯಾಗುತ್ತಿದೆ. ಸಂಘದ ಸದಸ್ಯರಿಂದ ಅತೀ ಕಡಿಮೆ ಶುಲ್ಕ ಪಡೆದು ನಿವೇಶನ ಮತ್ತು ವಸತಿ ಸೌಲಬ್ಯಕ್ಕಾಗಿ ಕಳೆದ 15 ವರ್ಷಗಳಿಂದ ಸತತ ಹೋರಾಟ ಮಾಡಿಕೊಂಡು ಬರಲಾಗಿದೆ.
ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ 418 ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಮಂಜೂರಾತಿ ನೀಡಿದ್ದು, ಅದಕ್ಕಾಗಿ ಜಮೀನು ಸಹ ಸರ್ಕಾರದ ಹೆಸರಿಗೆ ನೊಂದಾಣಿ ಮಾಡಿಕೊಡಲಾಗಿದೆ. ಈಗಾಗಲೇ ತುಂಬಾ ವಿಳಂಬವಾಗಿರುವ ಕಾರಣ ನಮಗೂ ಬೇಸರವಾಗಿದೆ. ಜಿಲ್ಲಾಡಳಿತ ನೀಡಿರುವ ಸೂಚನೆ ಮೇರೆಗೆ ಮೊನ್ನೆ ಮೊದಲ ಹಂತದ ಪಲಾನುಭವಿಗಳ ಪಟ್ಟಿಯಲ್ಲಿ ಸಹ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ
ಸಂಘದವತಿಯಿಂದ ಖರೀದಿ ಮಾಡಿರುವ ಜಮೀನಿನಲ್ಲಿ ಬೆಳೆದಿದ್ದ ಗಿಡಮರಗಳನ್ನು ತೆರೆವು ಮಾಡಲಾಗಿದೆ, ದೊಡ್ಡ ಗಾತ್ರದಲ್ಲಿ ಬಂಡೆ, ಕಲ್ಲುಗಳನ್ನು ತೆಗೆಸಿ ಜಮೀನು ಸಮತಟ್ಟವಾಗಿ ಮಾಡಲಾಗಿದೆ. ಬಡಾವಣೆಯ ಅಭಿವೃದ್ದಿಗಾಗಿ ಸಂಘದ ಪದಾಧಿಕಾರಿಗಳು ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ ಎಂದರು
ಈಗ ಸಂಘದ ಕಾರ್ಯಕಾರಿ ಸಮಿತಿ ಕೈಗೊಂಡಿರುವ ತೀರ್ಮಾನದಂತೆ ಮೇ ತಿಂಗಳ ಒಳಗಾಗಿ ಹಣ ಪಾವತಿಸದಿದ್ದರೆ, ಅಂತಹವರ ಹೆಸರನ್ನು ಕೈ ಬಿಡಲಾಗುವುದು. ಇದು ಅನಿವಾರ್ಯವೂ ಆಗಿದೆ ಎಂದು ಜಾಕೀರ್ ಹುಸೇನ್ ತಿಳಿಸಿದರು
ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಆರೂಡಾಚಾರ್, ಬಸವರಾಜಪ್ಪ, ಗಂಗಾಧರ್ ಚಾರ್, ಸುರೇಶ್, ಜಗದೀಶ್, ಅಕ್ಬರ್ ಇನ್ನಿತರರು ಇದ್ದರು