ಚಿತ್ರದುರ್ಗ|ಉದ್ಯಾನವನ ನಿರ್ಮಾಣ ಮಾಡುವ ಗುರಿಯನ್ನು ನಗರಸಭೆ ಹೊಂದಿದೆ: ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತಾ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 21 : ಚಿತ್ರದುರ್ಗ ನಗರದ ಆನೆ ಬಾಗಿಲ (ಸಂಪಿಗೆಸಿದೇಶ್ವರಬಾಗಿಲು) ಬಳಿಯ ದೇವಾಲಯಗಳ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿ
ಅನಗತ್ಯವಾಗಿ ಬೆಳದಿರುವ ಗಿಡ ಗಂಟೆಗಳನ್ನು ತೆರವುಗೊಳಿಸಿ ಅಲ್ಲಿ ಉತ್ತಮವಾದ ಉದ್ಯಾನವನ್ನು ನಿರ್ಮಾಣ ಮಾಡುವ
ಗುರಿಯನ್ನು ನಗರಸಭೆ ಹೊಂದಿದೆ ಇದರ ಅಂಗವಾಗಿ ಇಂದು ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತಾ ರವರು ಸ್ಥಳಕ್ಕೆ ಭೇಟಿ
ನೀಡಿ ಪರಿಶೀಲನೆಯನ್ನು ನಡೆಸಿದರು.

ಚಿತ್ರದುರ್ಗ ನಗರ ಐತಿಹಾಸಿಕವಾದ ಹಿನ್ನಲೆಯಲ್ಲಿ ಹೊಂದಿದ್ದು, ಭೂಪಟದಲ್ಲಿ ತನ್ನದೆ ಆದ ಇತಿಹಾಸವನ್ನು ಪಡೆದುಕೊಂಡಿದೆ.
ರಾಜರ ಕಾಲದಿಂದಲೂ ಈ ಬಾಗಿಲು ಪ್ರಮುಖವಾದ ಆಕರ್ಷಣೆಯನ್ನು ಹೊಂದಿದ್ದು, ತಮ್ಮ ಆಡಳಿತದಲ್ಲಿ ಪ್ರಮುಖವಾದ
ಕೇಂದ್ರವಾಗಿತ್ತು, ತದ ನಂತರ ಇದರ ಬಗ್ಗೆ ಸಾರ್ವಜನಿಕರು, ಜನ ಪ್ರತಿನಿಧಿಗಳು ಇದರ ಬಗ್ಗೆ ನಿರ್ಲಕ್ಷವಹಿಸಿದ ಹಿನ್ನಲೆಯಲ್ಲಿ ಈ
ಪ್ರದೇಶದಲ್ಲಿ ಗಿಡಗಳು ಬೆಳೆಯುವುದರ ಮೂಲಕ ಹಿಂದಿನ ರಾಜರ ಕಾಲದಲ್ಲಿ ನಿರ್ಮಾಣವಾದ ಕಟ್ಟಡಗಳು ಶೀಥಿಲವಾಗುತ್ತಿವೆ.
ಗಿಡಗಳ ಬೇರುಗಳು ಆಳವಾಗಿ ಭೂಮಿಯಲ್ಲಿ ಬೇರುಗಳನ್ನು ಬೀಡುವುದರ ಮೂಲಕ ಕಟ್ಟಡಗಳನ್ನು ಹಾಳು ಮಾಡುತ್ತಿವೆ.
ಇಂದು ಸ್ಥಳಕ್ಕೆ ಬೇಟಿ ನೀಡಿದ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಸುಮಿತಾ, ಸದಸ್ಯರಾದ ಶಶಿಧರ್, ಮದಕರಿ ನಾಯಕ
ಸಾಂಸ್ಕøತಿಕ ವೇದಿಕೆ ಗೋಪಾಲಸ್ವಾಮಿ ನಾಯಕ್, ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಗೋಪಾಲರಾವ್
ಜಾಧವ್ ಸೇರಿದಂತೆ ಇತರರು ಆನೆ ಬಾಗಿಲ ಬಳಿಯ ಹಾಗೂ ಅಲ್ಲಿನ ದೇವಾಲಯಗಳ ಹಿಂದೆ ಅಕ್ಕ-ಪಕ್ಕದಲ್ಲಿ ಹಾಗೂ ಮುಂದೆ
ಬೆಳದಿರುವ ಗಿಡಗಳನ್ನು ತೋರಿಸಿ ಇವುಗಳು ಇಲ್ಲಿ ಬೆಳದಿರುವುದರಿಂದ ಇಲ್ಲಿನ ದೇವಾಲಯಗಳಿಗೂ ಹಾಗೂ ಆನೆ ಬಾಗಿಲ
ಸೌಂದರ್ಯಕ್ಕೆ ಧಕ್ಕೆಯಾಗಿವೆ ಇದನ್ನು ತೆರವುಗೊಳಿಸುವುದರ ಮೂಲಕ ಉತ್ತಮವಾದ ಉದ್ಯಾನವನ್ನಾಗಿ ಮಾಡಬೇಕು ಹಾಗೇಯೇ
ಇಲ್ಲಿ ಮತ್ತೇ ಈ ತರನಾದ ಗಿಡಗಳು ಬೆಳೆಯದಂತೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ಸ್ಥಳವನ್ನು ಪರೀಶಿಲಿಸಿ ಇಲ್ಲಿನ ಜನತೆಯ ಮನವಿಯನ್ನು ಕೇಳಿದ ನಂತರ ಮಾತನಾಡಿದ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಸಮಿತಾ
ರಾಘವೇಂದ್ರ ರವರು ಇಲ್ಲಿನ ಪರಿಸ್ಥಿತಿಯ ಬಗ್ಗೆ ಈ ಬಾಗದ ಸದಸ್ಯರಾದ ಶಶಿಧರ್ ರವರು ತಮಗೆ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ
ಇಂದು ಪರಿಶೀಲನೆಯನ್ನು ಮಾಡಲಾಗಿದೆ.ಇಲ್ಲಿನ ಗಿಡಗಳನ್ನು ತೆರವುಗೂಳಿಸುವುದರ ಮೂಲಕ ಇಲ್ಲಿ ಒಂದು ಉತ್ತಮವಾದ
ಉದ್ಯಾನವನ್ನಾಗಿ ಮಾಡುವ ಆಲೋಚನೆ ಇದರ ಬಗ್ಗೆ ನಗರಸಭೆಯ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮವನ್ನು
ತೆಗೆದುಕೊಳ್ಳಲಾಗುವುದು ಎಂದರು.

ಈ ಭಾಗದ ನಗರಸಭಾ ಸದಸ್ಯರಾದ ಶಶಿಧರ್ ಮಾತನಾಡಿ, ಚಿತ್ರದುರ್ಗದ ಆನೆಬಾಗಿಲು ತನ್ನದೆ ಆದ ಇತಿಹಾಸವನ್ನು ಹೊಂದಿದೆ
ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಇಲ್ಲಿದ್ದಲೇ ಹಾದು ಹೋಗಬೇಕಿದೆ ಈ ಹಿನ್ನಲೆಯಲ್ಲಿ ಈ ಸ್ಥಳ ಈಗ ಗಿಡಗಳು ಬೆಳೆದು ಹಾಳಾಗಿದೆ.
ಇದನ್ನು ತೆರವುಗೊಳಿಸುವುದರ ಮೂಲಕ ಉತ್ತಮವಾದ ಸ್ಥಳವನ್ನಾಗಿ ಮಾಡುವ ಆಲೋಚನೆ ಇದೆ ಇದಕ್ಕೆ ನಗರಸಭೆಯ ಸಾಥ್
ನೀಡಿದೆ ಮುಂದಿನ ದಿನದಲ್ಲಿ ಇಲ್ಲ ಉತ್ತಮವಾದ ಉದ್ಯಾನವನ್ನಾಗಿ ರೂಪಿಸಲಾಗುವುದು ಎಂದು ತಿಳಿಸಿದರು.

ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಗೋಪಾಲಸ್ವಾಮಿ ನಾಯಕ್ ಮಾತನಾಡಿ, ಈ ಬಾಗಿಲ ಮೂಲ ಹೆಸರು ಸಂಪಿಗೆ
ಸಿದ್ಧೇಶ್ವರ ಬಾಗಿಲು ಎಂದು ಆದರೆ ಈಗ ಇದು ಆನೆ ಬಾಗಿಲು ಎಂದಾಗಿದೆ, ಇಲ್ಲಿನ ಅನೇಕ ಬಾಗಿಲುಗಳಿಗೆ ಮೂಲಕ ಹಸರು ಇವೆ
ಆದರೆ ಈಗ ಕರೆಯುತ್ತಿರುವುದು ಬೇರೆ ಹೆಸರುಗಳಿಂದ ನಮ್ಮ ಇತಿಹಾಸವನ್ನು ತಿಳಿದಾಗ ಅದರ ಮಹತ್ವ ನಮಗೆ ತಿಳಿಯುತ್ತಿದೆ
ಇದನ್ನು ನಮ್ಮ ಮುಂದಿನ ಪೀಳಿಗೆ ತಿಳಿಸುವ ಕಾರ್ಯವನ್ನು ನಾವುಗಳು ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ವಿಪುಲ್ ಜೈನ್, ರಾಜಕುಮಾರ್, ನಾಗರಾಜ್ ಬೇದ್ರೇ, ಹರ್ಷವರ್ಧನ್, ವಿದ್ಯಾನಂದ ಲಾಡ್, ನರೋತ್ತಮ ಭಟ್ಟರ್,
ಶ್ಯಾಮ ಸುಂದರ್, ಮಹಾವೀರ ಜೈನ್, ಶ್ರೀಣಿಕ್ ಜೈನ್, ಸೋಮಶೇಖರ್, ಅಜೆಯ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *