ಠೇವಣಿ ವಿಮಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿಐಸಿಜಿಸಿ ಈ ಬದಲಾವಣೆಯನ್ನು ತಂದಿದೆ. ಡಿಐಸಿಜಿಸಿ 5 ಲಕ್ಷದವರೆಗಿನ ಬ್ಯಾಂಕ್ ಠೇವಣಿಗಳನ್ನು ವಿಮೆ ಮಾಡುತ್ತದೆ.
ಬೆಂಗಳೂರು : ಕೋಟಿಗಟ್ಟಲೆ ಖಾತೆದಾರರನ್ನು ಗಮನದಲ್ಲಿಟ್ಟುಕೊಂಡು ಡಿಪಾಸಿಟ್ ಇನ್ಶ್ಯುರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆಗಳನ್ನು ನೀಡಿದೆ. ಆಗಸ್ಟ್ 31 ರೊಳಗೆ ವೆಬ್‌ಸೈಟ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್‌ನಲ್ಲಿ ಲೋಗೋ ಮತ್ತು ಕ್ಯೂಆರ್ ಕೋಡ್ ಅನ್ನು ಪ್ರದರ್ಶಿಸಲು ಡಿಐಸಿಜಿಸಿ ಬ್ಯಾಂಕ್‌ಗಳಿಗೆ ಸೂಚಿಸಿದೆ. HDFC,SBI ಮತ್ತು ICICI ಬ್ಯಾಂಕ್ ಗ್ರಾಹಕರು ಇದರ ಗರಿಷ್ಠ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಮೂರು ಬ್ಯಾಂಕ್‌ಗಳು ದೇಶದಲ್ಲೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಗಳಾಗಿವೆ.
ಜಾಗೃತಿ ಮೂಡಿಸುವ ಉದ್ದೇಶದಿಂದ ಬದಲಾವಣೆ :
HDFC ದೇಶದ ಅತಿ ದೊಡ್ಡ ಬ್ಯಾಂಕ್ ಆಗಿದೆ. ಮತ್ತೊಂದೆಡೆ, ಎಸ್‌ಬಿಐ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಠೇವಣಿ ವಿಮಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿಐಸಿಜಿಸಿ ಈ ಬದಲಾವಣೆಯನ್ನು ತಂದಿದೆ. ಡಿಐಸಿಜಿಸಿ 5 ಲಕ್ಷದವರೆಗಿನ ಬ್ಯಾಂಕ್ ಠೇವಣಿಗಳನ್ನು ವಿಮೆ ಮಾಡುತ್ತದೆ. ವಾಣಿಜ್ಯ ಬ್ಯಾಂಕ್‌ಗಳು, ಸ್ಥಳೀಯ ಪ್ರದೇಶ ಬ್ಯಾಂಕ್‌ಗಳು , ಪಾವತಿ ಬ್ಯಾಂಕ್‌ಗಳು , ಸಣ್ಣ ಹಣಕಾಸು ಬ್ಯಾಂಕ್‌ಗಳು , ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳ ಠೇವಣಿಗಳು DICGC ಯ ವಿಮಾ ಯೋಜನೆಯಡಿ ಬರುತ್ತವೆ.
ಡಿಐಸಿಜಿಸಿ ಹೊರಡಿಸಿದೆ ಸುತ್ತೋಲೆ :
ವಿಶೇಷವಾಗಿ ಸಣ್ಣ ಠೇವಣಿದಾರರನ್ನು ರಕ್ಷಿಸಲು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅವರ ವಿಶ್ವಾಸವನ್ನು ಹೆಚ್ಚಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಠೇವಣಿ ವಿಮೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂಗಸಂಸ್ಥೆ ಸುತ್ತೋಲೆಯಲ್ಲಿ ತಿಳಿಸಿದೆ. ಅಲ್ಲದೆ ಕೇಂದ್ರ ಬ್ಯಾಂಕ್‌ನೊಂದಿಗೆ ಸಮಾಲೋಚಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸುತ್ತೋಲೆಯಲ್ಲಿ, ‘ಕೇಂದ್ರಿತ ಮತ್ತು ನಿರಂತರ ಠೇವಣಿ ವಿಮೆ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಬ್ಯಾಂಕ್‌ನೊಂದಿಗೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ನಿರ್ಧಾರದಲ್ಲಿ, DICGC ಯೊಂದಿಗೆ ನೋಂದಾಯಿಸಲಾದ ಎಲ್ಲಾ ಬ್ಯಾಂಕುಗಳು DICGC ಯ ಲೋಗೋ ಮತ್ತು DICGC ವೆಬ್‌ಸೈಟ್‌ಗೆ ಲಿಂಕ್ ಮಾಡಲಾದ QR ಕೋಡ್ ಅನ್ನು ತಮ್ಮ ವೆಬ್‌ಸೈಟ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್‌ನಲ್ಲಿ ಪ್ರಮುಖವಾಗಿ ಪ್ರದರ್ಶಿಸುತ್ತವೆ.
ಲೋಗೋ ಮತ್ತು ಕ್ಯೂಆರ್ ಕೋಡ್ ಪ್ರದರ್ಶಿಸುವುದರಿಂದ ಗ್ರಾಹಕರು ಡಿಐಸಿಜಿಸಿಯ ಠೇವಣಿ ವಿಮಾ ಯೋಜನೆಗೆ ಒಳಪಡುವ ಬ್ಯಾಂಕ್‌ಗಳನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಸುತ್ತೋಲೆ ಹೇಳಿದೆ. ಇದಲ್ಲದೆ, ಠೇವಣಿ ವಿಮೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಸೆಪ್ಟೆಂಬರ್ 1, 2023 ರಿಂದ ಈ ನಿಯಮವನ್ನು ಪಾಲಿಸುವಂತೆ ಎಲ್ಲ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ. ಮಾರ್ಚ್ 31, 2023 ರಂತೆ DICGC ಯಲ್ಲಿ ನೋಂದಾಯಿಸಲಾದ ವಿಮಾದಾರ ಬ್ಯಾಂಕ್‌ಗಳ ಸಂಖ್ಯೆ 2,027 ರಷ್ಟಿದೆ. ಇದು 140 ವಾಣಿಜ್ಯ ಬ್ಯಾಂಕುಗಳನ್ನು ಒಳಗೊಂಡಿತ್ತು.