ಸುದ್ದಿ ಬ್ರೇಕ್ ಮಾಡುವ ಅವಸರದಲ್ಲಿ ಅವಾಂತರ ಆಗಬಾರದು- ಸಿದ್ದರಾಜು.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ: ಸುದ್ದಿಬ್ರೇಕ್ ಮಾಡುವ ಅವಸರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾದ್ಯಮಗಳು ಅವಾಂತರ ಸೃಷ್ಟಿಸಬಾರದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ‌ಎಸ್.ಸಿದ್ದರಾಜು ಹೇಳಿದರು.

ಚಿತ್ರದುರ್ಗದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ‌ ವಿದ್ಯಾರ್ಥಿಗಳು ಆರಂಭಿಸಿರುವ ಶೈಕ್ಷಣಿಕ ಆಧಾರಿತ ಯೂಟ್ಯೂಬ್ ಚಾನೆಲ್ ಗೆ  ಚಾಲನೆ ನೀಡಿ ಮಾತನಾಡಿದ ಅವರು,ಪತ್ರಿಕೋದ್ಯಮ  ಹಾಗು ಸಮಾಜ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

 ಮಾದ್ಯಮ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ಮತ್ತು ಮುದ್ರಣಮಾದ್ಯಮ‌ಎಂಬ ಎರಡು ಹಂತಗಳಿವೆ.ಅವುಗಳಲ್ಲಿ  ಎಲೆಕ್ಟ್ರಾನಿಕ್ ಮಾದ್ಯಮ ಕುರಿತು ವಿದ್ಯಾರ್ಥಿಗಳೊಂದಿಗೆ  ಮಾತನಾಡಿದ ಅವರು,,ಇಂದಿನ ಆಧುನಿಕ ಭರಾಟೆಯಲ್ಲಿ
ಪತ್ರಿಕೋದ್ಯಮ ಅನ್ನೋದು ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ.ಈ ಹಿಂದೆ ಸಾಮಾಜಿಕ ಕಳಕಳಿ ಹಾಗು ಸಮಾಜವನ್ನು ಸರಿದಾರಿಯನ್ನು ಕೊಂಡೊಯ್ಯುವ ಕೆಲಸವನ್ನು ಮಾಡುತಿದ್ದವು.ಆದರೆಇಂದಿನ ಸ್ಪರ್ಧಾಯುಗದಲ್ಲಿ
ಕೆಲ ಮಾದ್ಯಮಗಳು ಟಿಆರ್ ಪಿ ಹಾಗೂ ಹಣದಾಸೆಗೆ ಸುದ್ದಿಯ ಸಾರವನ್ನು ತಿರುಚುತ್ತಿವೆ.ಇದು ಸಮಾಜದ ಮೇಲೆ ಬಾರಿ ದುಷ್ಪರಿಣಾಮ ಬೀರುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಇನ್ನು ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ಬ್ರೇಕಿಂಗ್‌ ನ್ಯೂಸ್ ಅನ್ನೋದು ತುಂಬಾ ಮಹತ್ವ ಹೊಂದಿದೆ.ಹೀಗಾಗಿ ಯಾರು ಮೊದಲು ಯಾವ್ದೇ ಒಂದು ಸುದ್ದಿಯನ್ನು ಜನರಿಗೆ‌ತಲುಪಿಸ್ತಾರೆ ಅನ್ನೋದೇ‌ಬ್ರೇಕಿಂಗ್ ಎಂದು‌ ಕರೆಯುತ್ತೇವೆ.ತಡವಾಗಿ ಸುದ್ದಿ‌ಬಂದರೆ‌ಅದನ್ನು ಜನ‌ಗಮನಿಸುವುದಿಲ್ಲ.ಆದರೆ ಇತ್ತೀಚಿನ‌ದಿನಗಳಲ್ಲಿ‌ಸುದ್ದಿ‌ಬ್ರೇಕ್ ಮಾಡುವ ಅವಸರದಲ್ಲಿ‌‌ಕೆಲ ಮಾದ್ಯಮಗಳು‌ ಅವಾಂತರ‌ಸೃಷ್ಟಿಸ್ತಿವೆ. ಆ‌ಕೆಲಸ‌ಆಗಬಾರದು.ಜನರಿಗೆ ‌ಪತ್ರಕರ್ತ‌ನೀಡುವ‌ಸುದ್ದಿ‌ನಿಖರತೆ,ಸ್ಪಷ್ಟತೆ ಹಾಗು ಸತ್ಯವಾಗಿರಬೇಕು ಎಂದರು

ಹಾಗೆಯೇ ವರದಿಗಾರರ ಜೀವನದಲ್ಲಿ ಗುರಿ ಇರಬೇಕು.ಆಗ ಜೀವನವನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಸುದ್ದಿ ವಿಚಾರದಲ್ಲಿ ಯಶಸ್ಸು ಕಂಡಾಗ ಸಂತೋಷ ಆಗಲಿದೆ.ಅಂತೆಯೇ ಇಂದಿನ ಮಕ್ಕಳು ಬಹುತೇಕ ಕಾರ್ಟೂನ್, ಚಿಂಟು‌ಟಿವಿಗೆ‌ ಸೀಮಿತವಾಗಿರುತ್ತಾರೆ.ಹೀಗಿರುವಾಗ ಈ ಸಂಸ್ಥೆಯು ಮಕ್ಕಳಲ್ಲಿ ಮಾದ್ಯಮದ‌ ಪರಿಕಲ್ಪನೆ ಕಣ್ಮುಂದೆ ತರುವ ಕೆಲಸವನ್ನು  ಈ ಶಾಲೆ ಮಾಡುತಿದ್ದು,ಮಾದ್ಯಮದ ಬಗ್ಹೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸ್ತಿರುವ ಕಾರ್ಯ ಶ್ಲಾಘನೀಯ ಹಾಗು ಅರ್ಥಪೂರ್ಣ ಎನಿಸಿದೆ.ಹೀಗಾಗಿ ಈ ಸಂಸ್ಥೆಗೆ
  ನಮ್ಮ‌ಪತ್ರಕರ್ತರ ಸಂಘದಿಂದ  ಅಭಿನಂದನೆ ಸಲ್ಲಿಸುತ್ತೇನೆ.

ಜೊತೆಗೆ ಇಂದಿನ ಸಮಾಜದಲ್ಲಿ ಬಹುತೇಕ ಮಕ್ಕಳು ನಾನು ಐಎಎಸ್,ಐಪಿಎಸ್ ಆಗಬೇಕೆಂಬ ಕನಸು ಕಾಣ್ತಾರೆ.ಆದ್ರೆ ಓರ್ವ ಪತ್ರಕರ್ತ ಕೂಡ ಎಲ್ಲಾ ಕ್ಷೇತ್ರಗಳಲ್ಲು ಒಬ್ಬನಾಗಿರ್ತಾನೆ.ಕೃಷಿ‌ಚಟುವಟಿಕೆ ಅಂತ ಬಂದಾಗ ರೈತರಲ್ಲೊಬ್ಬರಾಗುತ್ತಾನೆ.ರೈತರ ಸಂಕಷ್ಟ ತಿಳಿಯಲು ಅವರ ಅಂತರಾಳಕ್ಕೆ ಇಳಿಯುತ್ತಾನೆ.

ಹಾಗೆಯೇ ದೇಶದ ರಕ್ಷಣೆ ವಿಚಾರ ಬಂದಾಗ ಸೈನಿಕರಂತೆ 24* 7 ಶ್ರಮಿಸ್ತಾರೆ.ಕೋವಿಡ್ ಸೇರುದಂತೆ ಅನೇಕ ಜೀವಹಾನಿ ಸಂಧರ್ಭಗಳಲ್ಲು ಪ್ರಾಣದಹಂಗು ತೊರೆದು ಪತ್ರಕರ್ತರು ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಪತ್ರಕರ್ತರಾದರೆ ಎಲ್ಲಾ ಕ್ಷೇತ್ರಗಳನ್ನು ಪರೋಕ್ಷವಾಗಿ  ತಲುಪುವ ವ್ಯಕ್ತಿ ಅಂದ್ರೆ ಅವರೇ ಜರ್ನಲಿಸ್ಟ್ ಗಳು  ಅಂತ ಹೆಮ್ಮೆಯಿಂದ ಹೇಳಬಯಸುತ್ತೇನೆ. 

ಜೊತೆಗೆ ಓರ್ವ ಪತ್ರಕರ್ತ ಆದವನು ಸಂಬಂಧ,ಸ್ನೇಹ ಹಾಗು ಸ್ವಾರ್ಥ ವನ್ನು‌ಬದಿಗಿಟ್ಟು‌ನಿಷ್ಟೂರ ಹಾಗು‌ನಿಸ್ವಾರ್ಥದಿಂದ ಕೆಲಸ‌ ನಿರ್ವಹಿಸಬೇಕು ಎಂದು ಹೇಳ್ತಾ,‌ ನಿತ್ಯ ರಾಜಕೀಯ, ಕೃಷಿ ಹಾಗು ಕಾನೂನು ಅಂತ ಸುದ್ದಿ ಬಿಸಿಯಾಗಿರ್ತಿದ್ದ ನನಗೆ ಇಂದು ಮಕ್ಕಳೊಂದಿಗೆ ಕ್ಷಣಕಾಲ ಕಳೆಯುವ ಅವಕಾಶ ಮಾಡಿಕೊಟ್ಟ ಶಾಲೆಯ ಆಡಳಿತಮಂಡಳಿಗೆ ನಮಸ್ಕಾರ ಹೇಳ್ತಾ ಜಾಗೃತಿಯ ಮಾತುಗಳಿಗೆ ವಿರಾಮ‌ಹೇಳಿದರು.

ಬಳಿಕ ಮಾತನಾಡಿದ  ವಿದ್ಯಾವಿಕಾಸ‌ಸಂಸ್ಥೆಯ ಮುಖ್ಯಸ್ಥರಾದ‌ ಪೃಥ್ವೀಶ್‌‌ ಅವರು,ನಮ್ಮ ಶಾಲೆಯ ವಿದ್ಯಾರ್ಥಿಗಳು ಹಾಗು ಶಿಕ್ಷಕರು ತುಂಬಾ ಆಸಕ್ತಿ ವಹಿಸಿ ಯೂಟ್ಯೂಬ್ ವಾಹಿನಿ ಮಾಡಿದ್ದಾರೆ. ಇದರಿಂದ ನಗರದಲ್ಲಿನ ಪರಿಸರ ಹಾಗು ಶೈಕ್ಷಣಿಕವಾಗಿ ಈ ವಾಹಿನಿಯಲ್ಲಿ ಸುದ್ದಿ ಮಾಡಲು ಉತ್ಸುಕರಾಗಿದ್ದಾರೆ.ಇದು ತುಂಭಾ ಒಳ್ಳೆಯ ಕಾರ್ಯವಾಗಿದ್ದು,ವಿದ್ಯಾರ್ಥಿ‌ದೆಸೆಯಿಂದಲೇ ಪತ್ರಿಕೋದ್ಯಮದ ಬಗ್ಹೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ನಮ್ಮ ಸಂಸ್ಥೆ ಈ ಕಾರ್ಯಕ್ಕೆ ಮುಂದಾಗಿದೆ ಎಂದರು.

ಈ ವೇಳೆ ಮುಖ್ಯೋಪಾದ್ಯಾಯರಾದ‌‌‌ ತಿಪ್ಪೇಸ್ವಾಮಿ,ಶಿಕ್ಷಕರಾದ ಕಾವ್ಯ,ಸುಂದರೇಶ್ ಕುಮಾರ್  ಸೇರಿದಂತೆ ಶಿಕ್ಷಕ ವೃಂದ ಹಾಗು ವಿದ್ಯಾರ್ಥಿಗಳು ಇದ್ದರು..

Leave a Reply

Your email address will not be published. Required fields are marked *